84 ದಿನಗಳಿಗೆ Unlimited ಕರೆ ಮತ್ತು 5G ಡೇಟಾದೊಂದಿಗೆ Amazon Prime ನೀಡುವ Airtel ಬೆಸ್ಟ್ ಪ್ಲಾನ್!

Updated on 04-Mar-2024
HIGHLIGHTS

84 ದಿನಗಳಿಗೆ Unlimited ಕರೆ ಮತ್ತು 5G ಡೇಟಾದೊಂದಿಗೆ Amazon Prime ನೀಡುವ Airtel ಬೆಸ್ಟ್ ಪ್ಲಾನ್

ಏರ್ಟೆಲ್ ಉಚಿತ Amazon Prime ಮತ್ತು ಇತರೆ 15+ ಅಧಿಕ OTT ಯೋಜನೆಗಳನ್ನು ನೀಡುತ್ತಿದೆ.

ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Airtel) ಈಗ ತಮ್ಮ ಗ್ರಾಹಕರಿಗೆ ವಿವಿಧ ಪ್ರಿಪೇಯ್ಡ್ ಯೋಜನೆಗಳು ಮತ್ತು ಪ್ಯಾಕ್‌ಗಳನ್ನು ನೀಡುತ್ತದೆ. ಭಾರ್ತಿ ಏರ್‌ಟೆಲ್ ಗ್ರಾಹಕರಿಗೆ ಅನಿಯಮಿತ ಯೋಜನೆಗಳೊಂದಿಗೆ ಏರ್ಟೆಲ್ ಉಚಿತ Amazon Prime ಮತ್ತು ಇತರೆ 15+ ಅಧಿಕ OTT ಯೋಜನೆಗಳನ್ನು ನೀಡುತ್ತಿದೆ. ಏರ್ಟೆಲ್ (Airtel) ವಿಭಿನ್ನ ಬೆಲೆಯ ವಿಭಾಗಗಳಲ್ಲಿ ವಿಭಿನ್ನ ಬಳಕೆಯ ಅಗತ್ಯಗಳ ಆಧಾರದ ಮೇರೆಗೆ ತಮ್ಮ ಗ್ರಾಹಕರ ಅನುಕುಲಗಳನ್ನು ಪೂರೈಸುತ್ತದೆ. ಈ ಏರ್ಟೆಲ್ (Airtel) ಪ್ಲಾನ್ ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ OTT ಅನುಕೂಲಗಳನ್ನು ಸಹ ನೀಡುವ ಈ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Also Read: ಕರೆ ಮತ್ತು ಡೇಟಾ ಬಳಕೆಯಲ್ಲಿ Network Issue ಹೆಚ್ಚಾಗಿದ್ಯಾ? ನಿಮ್ಮ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ಇಲ್ಲಿದೆ ನೋಡಿ!

ಏರ್‌ಟೆಲ್ ರೂ 999 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್

ಭಾರ್ತಿ ಏರ್‌ಟೆಲ್ ರೂ 999 ಪ್ರಿಪೇಯ್ಡ್ ರೀಚಾರ್ಜ್ ಗ್ರಾಹಕರಿಗೆ ದಿನಕ್ಕೆ 2.5GB ಡೇಟಾ ಲಭ್ಯವಿದ್ದು ಮುಗಿದ ನಂತರ 64kbps ವೇಗದಲ್ಲಿ ಅನಿಯಮಿತವಾಗಿ ಬಳಸಬಹುದು. ಅಲ್ಲದೆ ನಿಮಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್ ಕರೆಗಳು ಸಹ ಲಭ್ಯವಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್ 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಏರ್‌ಟೆಲ್‌ನ ರೂ 999 ಪ್ರಿಪೇಯ್ಡ್ ಯೋಜನೆಯು 3 ತಿಂಗಳವರೆಗೆ ಅಪೊಲೊ 24×7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ವೈಂಕ್ ಮ್ಯೂಸಿಕ್ ಫ್ರೀ, ಉಚಿತ ಹೆಲೋಟ್ಯೂನ್ಸ್ ಮತ್ತು ರಿವಾರ್ಡ್‌ಮಿನಿ ಚಂದಾದಾರಿಕೆಯಂತಹ ಇತರ ಪ್ರಯೋಜನಗಳನ್ನು ಒಳಗೊಂಡಿದೆ.

ಉಚಿತ Amazon Prime ಜೊತೆಗೆ 20+ ಅಧಿಕ OTT

ಏರ್‌ಟೆಲ್‌ನ ಈ ಜನಪ್ರಿಯ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಮನರಂಜನೆಗೆ ಯಾವುದೇ ಕಮ್ಮಿ ಮಾಡದೆ ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತವಾಗಿ ಅಮೆಜಾನ್ ಪ್ರೈಮ್ (Amazon Prime) ಜೊತೆಗೆ ಮತ್ತೆ 15+ ಕ್ಕೂ ಅಧಿಕ OTT ಅಪ್ಲಿಕೇಶನ್‌ಗಳೆಂದರೆ SonyLIV, ErosNow, LionsgatePlay, Ultra, ManoramaMax, HoiChoi, Epic ON, ShemarooMe, Divo, Dollywood, Nammaflix, Klikk. ShortsTV , Docubay, HungamaPlay, Social Swag & Chaupal ಜೊತೆಗೆ Airtel Xstream Play ಅನ್ನು ಏರ್ಟೆಲ್ ಉಚಿತವಾಗಿ ತಮ್ಮ ಬಳಕೆದಾರರಿಗೆ ನೀಡುತ್ತಿದೆ.

ಏರ್‌ಟೆಲ್ 5G ಅಡ್ವಾಂಟೇಜ್

ರೋಲ್‌ಔಟ್ ಪೂರ್ಣಗೊಳ್ಳುವವರೆಗೆ ಅಸ್ತಿತ್ವದಲ್ಲಿರುವ ಡೇಟಾ ಪ್ಯಾಕ್‌ಗಳು 5G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ನೀವು 5G ಸೇವೆಗಳನ್ನು ಅನುಭವಿಸಲು ಈ ಯೋಜನೆಯನ್ನು ಬಳಸಬಹುದು. ಏರ್‌ಟೆಲ್ 4G ಗಿಂತ 20-30x ಹೆಚ್ಚಿನ ವೇಗವನ್ನು ನೀಡುತ್ತದೆ ಮತ್ತು ಏರ್‌ಟೆಲ್ 5G ಪ್ಲಸ್ ನೆಟ್‌ವರ್ಕ್‌ನಲ್ಲಿ ವೇಗವಾದ ಕರೆ ಸಂಪರ್ಕದ ಅನುಭವವನ್ನು ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದ ನಾಲ್ಕು ನಗರಗಳಲ್ಲಿ ಇತ್ತೀಚಿನ ಏರ್‌ಟೆಲ್ 5G ಪ್ಲಸ್ ಬಿಡುಗಡೆಯೊಂದಿಗೆ ಏರ್‌ಟೆಲ್ 5G ಪ್ಲಸ್ ಈಗ ದೇಶದಾದ್ಯಂತ 140 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ. ನೀವು ಇಲ್ಲಿ ಪುಟದಲ್ಲಿ ನಿಖರವಾದ ಏರ್‌ಟೆಲ್ 5G ಪ್ಲಸ್ ಲಾಂಚ್ ವಿವರಗಳು, ವಲಯಗಳು, ಸ್ಪೆಕ್ಟ್ರಮ್ ಹೋಲ್ಡಿಂಗ್‌ಗಳು ಮತ್ತು ಭಾರತದಲ್ಲಿ 5G ಲಭ್ಯತೆಯ ಸ್ಥಳಗಳನ್ನು ಪರಿಶೀಲಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :