ಏರ್‌ಟೆಲ್‌ನ ವಾರ್ಷಿಕ ರೀಚಾರ್ಜ್ ಯೋಜನೆಯು 2999 ರೂ.ಗೆ ಬರುತ್ತದೆ.
ಪ್ರತಿ ತಿಂಗಳು ರೀಚಾರ್ಜ್‌ಗಳನ್ನು ಮಾಡಲು ಸುಸ್ತಾಗಿದ್ದರೆ ಏರ್ಟೆಲ್ ನಿಮಗಾಗಿ ಹೆಚ್ಚು ಅನುಕೂಲ ಮತ್ತು ಪ್ರಯೋಜನಗಳನ್ನು ನೀಡುವ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ
Airtel ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಅನಿಯಮಿತ 5G ಡೇಟಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ
Airtel 2999 Plan: ನೀವು ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯ ಬಳಕೆದಾರರಾಗಿದ್ದಾರೆ ನೀವು ಪ್ರತಿ ತಿಂಗಳು ರೀಚಾರ್ಜ್‌ಗಳನ್ನು ಮಾಡಲು ಸುಸ್ತಾಗಿದ್ದರೆ ಏರ್ಟೆಲ್ ನಿಮಗಾಗಿ ಹೆಚ್ಚು ಅನುಕೂಲ ಮತ್ತು ಪ್ರಯೋಜನಗಳನ್ನು ನೀಡುವ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ. ಇದರಲ್ಲಿ ನೀವು ಒಂದೇ ರೀಚಾರ್ಜ್‌ನಲ್ಲಿ ಒಂದು ವರ್ಷದವರೆಗೆ ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಪಡೆಯಬಹುದು. ಅಲ್ಲದೆ ಮಾಸಿಕ ರೀಚಾರ್ಜ್‌ಗಿಂತಲೂ ಕಡಿಮೆ ವೆಚ್ಚವಾಗುತ್ತದೆ. ಈ ರೀತಿಯಾಗಿ ನೀವು ಕಡಿಮೆ ವೆಚ್ಚದಲ್ಲಿ ಮಾಸಿಕ ರೀಚಾರ್ಜ್ ಸರಳವಾಗಿ ತೆಗೆದು ಹಾಕಬಹುದು. ಆದ್ದರಿಂದ ನೀವು ಸದಾ ತಿಂಗಳ ರಿಚಾರ್ಜ್ ಮಾಡುವ ಬಳಕೆದಾರರಾಗಿದ್ದಾರೆ ಈ ಲೇಖನ ನಿಮಗಾಗಿದೆ.
ಏರ್ಟೆಲ್ 2999 ರೂಗಳ ವಾರ್ಷಿಕ ರೀಚಾರ್ಜ್ ಯೋಜನೆ
ನಾವು ಮಾತನಾಡುತ್ತಿರುವ ಏರ್‌ಟೆಲ್‌ನ ವಾರ್ಷಿಕ ರೀಚಾರ್ಜ್ ಯೋಜನೆಯು 2999 ರೂ.ಗೆ ಬರುತ್ತದೆ. ಇದು ವಾರ್ಷಿಕ ರೀಚಾರ್ಜ್ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಅನಿಯಮಿತ 5G ಡೇಟಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದಲ್ಲದೇ ಉಚಿತ ವಾಯ್ಸ್ ಕರೆ ಮತ್ತು ಎಸ್ಟಿಡಿ ಕರೆ ಸೌಲಭ್ಯವನ್ನೂ ನೀಡಲಾಗುತ್ತಿದೆ. ಅಲ್ಲದೆ ಈ ಯೋಜನೆಯಲ್ಲಿ ನಿಮಗೆ ಪ್ರತಿದಿನ 100 SMS ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಉಚಿತ Wynk ಸಂಗೀತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಅಲ್ಲದೆ ಉಚಿತ ಹೆಲೋಟ್ಯೂನ್ ಸೌಲಭ್ಯವೂ ಲಭ್ಯವಿದೆ.
ನಿಮಗೆ ರೂ.888 ನೇರ ಉಳಿತಾಯ
ಏರ್‌ಟೆಲ್‌ನ ರೂ 2999 ಮಾಸಿಕ ಯೋಜನೆಯೊಂದಿಗೆ ಹೋಲಿಸಿದರೆ ದೈನಂದಿನ 2GB ಡೇಟಾ ಮಾಸಿಕ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ರೂ 299 ಕ್ಕೆ ಬರುತ್ತದೆ. ಅದೇ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿವೆ. ನಂತರ ಅವು ರೂ 2999 ರ ವಾರ್ಷಿಕ ಯೋಜನೆಯಲ್ಲಿ ಲಭ್ಯವಿದೆ. ಈ ಸಂದರ್ಭದಲ್ಲಿ 365 ದಿನಗಳ ರೀಚಾರ್ಜ್‌ಗೆ ರೂ 299 ಪ್ಲಾನ್ ಅನ್ನು 13 ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ರೂ 3,887 ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ರೂ.888 ಉಳಿತಾಯವಾಗಲಿದೆ. ವಾರ್ಷಿಕ ಯೋಜನೆಯ ಅತಿದೊಡ್ಡ ಪ್ರಯೋಜನ ಅಂದ್ರೆ ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡಬೇಕಾಗಿಲ್ಲ ಎಂದರ್ಥ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile