ಏರ್ಟೆಲ್ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) 38 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಈ ಕಂಪನಿಯು ಪ್ರತಿದಿನ ತನ್ನ ಬಳಕೆದಾರರಿಗೆ ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದನ್ನು ಒದಗಿಸುತ್ತಲೇ ಇರುತ್ತದೆ. ಏರ್‌ಟೆಲ್ ಅಲ್ಪಾವಧಿ ಮತ್ತು ದೀರ್ಘಾವಧಿಗೆ ವಿಭಿನ್ನ ಯೋಜನೆಗಳನ್ನು ಹೊಂದಿದ್ದು ಇತ್ತೀಚಿನ ದಿನಗಳಲ್ಲಿ OTT ಪ್ರಯೋಜನಗಳನ್ನು ಹೆಚ್ಚಾಗಿ ನೀಡುತ್ತಿದೆ. ಅಲ್ಲದೆ ಇದರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ಗ್ರಾಹಕರಿಗಾಗಿ ಇಂತಹ ಯೋಜನೆಯನ್ನು ತಂದಿದೆ. ಅಂದರೆ 84 ದಿನಗಳಿಗೆ ಉಚಿತ OTT ಅಪ್ಲಿಕೇಶನ್ನೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು ಕರೆ ನೀಡುವ ಬೆಸ್ಟ್ Airtel ಪ್ಲಾನ್ ಇದರಲ್ಲಿ ನೀವು ಉತ್ತಮ ಸೌಲಭ್ಯಗಳನ್ನು ಏರ್‌ಟೆಲ್‌ನ ಈ ಪ್ಲಾನ್ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: 14 ಇಂಚಿನ 12th Gen Intel Core i3 ಚಿಪ್‌ನ ಈ Dell Laptop ಅತಿ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟ!
ನಾವು ಮಾತನಾಡುತ್ತಿರುವ ಏರ್‌ಟೆಲ್‌ನ ರೀಚಾರ್ಜ್ ಯೋಜನೆಯು ರೂ 999 ಕ್ಕೆ ಬರುತ್ತದೆ. ಇದರಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ ಅನೇಕ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ. ನೀವು ದೀರ್ಘಾವಧಿಯ ಮಾನ್ಯತೆಯೊಂದಿಗೆ ಅತಿ ಅಕೆಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ಹುಡುಕುತ್ತಿದ್ದರೆ ಇದು ನಿಮಗೆ ಒಳ್ಳೆಯದು ಎಂದು ಸಾಬೀತುಪಡಿಸಬಹುದು. ಏಕೆಂದರೆ ಈ ಯೋಜನೆಯಲ್ಲಿ ನೀವು 84 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಈ ಬೆಲೆಗೆ ಇಷ್ಟು ಸಮಯದ ಮಾನ್ಯತೆ ನೀಡುವ ಬೇರೆ ಯೋಜನೆ ಬೇರೊಂದಿಲ್ಲ.
ಈ ಯೋಜನೆಯಲ್ಲಿ ನೀವು 84 ದಿನಗಳವರೆಗೆ ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಅದರ ಡೇಟಾ ಪ್ರಯೋಜನಗಳ ಕುರಿತು ಮಾತನಾಡುತ್ವುದಾದರೆ ನಿಮಗೆ ಬಹಳಷ್ಟು ಡೇಟಾವನ್ನು ನೀಡಲಾಗುತ್ತಿದೆ. 999 ರೂಗಳ ಈ ರೀಚಾರ್ಜ್ ಯೋಜನೆಯಲ್ಲಿ ನಿಮಗೆ ಒಟ್ಟು 210GB ಡೇಟಾವನ್ನು ನೀಡಲಾಗುತ್ತಿದೆ. ಅಂದರೆ ನೀವು ಪ್ರತಿದಿನ 2.5GB ಡೇಟಾವನ್ನು ಬಳಸಬಹುದು. ಇದಲ್ಲದೆ ಕಂಪನಿಯು ತನ್ನ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಂಎಸ್ ಅನ್ನು ಸಹ ಒದಗಿಸುತ್ತಿದೆ.
ನೀವು OTT ಅನ್ನು ಹೆಚ್ಚು ಸ್ಟ್ರೀಮಿಂಗ್ ಮಾಡಲು ಬಯಸಿದರೆ ನೀವು ಏರ್‌ಟೆಲ್‌ನ ಈ ಯೋಜನೆಗೆ ಹೋಗಬಹುದು. ಕಡಿಮೆ ಬೆಲೆಗೆ ಯೋಜನೆಯಲ್ಲಿ ಏರ್‌ಟೆಲ್ ಬಳಕೆದಾರರಿಗೆ 84 ದಿನಗಳವರೆಗೆ ಅಮೆಜಾನ್ ಪ್ರೈಮ್ ವೀಡಿಯೊದ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಇದರಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ, ಅಮೆಜಾನ್ ಪ್ರೈಮ್ ವೀಡಿಯೋ, ರಿವಾರ್ಡ್‌ಮಿನಿ, ಅಪೋಲೋ 24×7 ಸರ್ಕಲ್, ವಿಂಕ್ ಮ್ಯೂಸಿಕ್ ಮತ್ತು ಹೆಲೋಟ್ಯೂನ್ಸ್‌ಗೆ 3 ತಿಂಗಳ ಉಚಿತ ಚಂದಾದಾರಿಕೆಯೊಂದಿಗೆ ಈ ಮೌಲ್ಯವರ್ಧಿತ ಸೇವೆಗಳು ನಿಮ್ಮ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತವೆ. ಈ ರೀತಿಯಾಗಿ ರೀಚಾರ್ಜ್ ಹಣದಲ್ಲಿ ಮಾತ್ರ ನೀವು ಇತ್ತೀಚಿನ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಬಹುದು.