ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್ (Airtel) ತಮ್ಮ ಬಳಕೆದಾರರಿಗೆ ಅತ್ಯುತ್ತಮ ಪ್ರಯೋಜನಗಳನ್ನು ಕೈಗೆಟಕುವ ಬೆಲೆಗೆ ನೀಡುವುವುದರೊಂದಿಗೆ ತಮ್ಮ ಬಳಕೆದಾದರನ್ನು ಆಕರ್ಷಿಸಲು ಹೊಸ ಹೊಸ ಯೋಜನಗಳನ್ನು ಮಾರುಕಟ್ಟೆಯಲ್ಲಿ ತರುತ್ತಿರುತ್ತದೆ. ನೀವು ಪ್ರತಿ ತಿಂಗಳ ರೀಚಾರ್ಜ್‌ಗಳ ತಲೆನೋವಿನಿಂದ ವಿರಾಮವನ್ನು ಬಯಸಿದರೆ ನಿಮಗಾಗಿ ಉತ್ತಮ ಅವಕಾಶವನ್ನು ಏರ್ಟೆಲ್ ಆ ವಾರ್ಷಿಕ ಯೋಜನೆಯ ಮೂಲಕ ನೀಡುತ್ತಿದೆ. ಈ ಏರ್‌ಟೆಲ್ (Airtel) ಪ್ಲಾನ್ ನಿಮಗೆ ಕೇವಲ ದೀರ್ಘಾವಧಿಯ ಮಾನ್ಯತೆ ಮಾತ್ರವಲ್ಲದೆ Unlimited ಕರೆಗಳು ಮತ್ತು 5G ಡೇಟಾದೊಂದಿಗೆ ಉಚಿತ OTT ಸೇವೆಗಳನ್ನು ಸಹ ನೀಡುತ್ತಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯಿರಿ.
Also Read: ನಿಮ್ಮ ಕರೆಯಲ್ಲಿ Call Drop ಸಮಸ್ಯೆ ಹೆಚ್ಚಾಗಿದ್ಯಾ? ಇದಕ್ಕೆ ಕಾರಣವೇನು? ಇದನ್ನು ಸರಿಪಡಿಸುವುದು ಹೇಗೆ?
ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಸಂದರ್ಭದಲ್ಲಿ OTT ಯ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ. ಏರ್‌ಟೆಲ್‌ನ ವಾರ್ಷಿಕ ಯೋಜನೆಯು ಉತ್ತಮ ಮೌಲ್ಯವನ್ನು ನೀಡುತ್ತದೆ. ಏಕೆಂದರೆ ಒಮ್ಮೆ ನೀವು ಈ ಏರ್‌ಟೆಲ್ (Airtel) ಆರಿಸಿಕೊಂಡರೆ ಮುಂದಿನ ವರ್ಷದಲ್ಲಿ ನೀವು ನೇರವಾಗಿ ರೀಚಾರ್ಜ್ ಮಾಡಬೇಕಾಗುತ್ತದೆ. ಸಾಕಷ್ಟು ದೈನಂದಿನ ಡೇಟಾ ಮತ್ತು ಅನಿಯಮಿತ ವಾಯ್ಸ್ ಕರೆಯನ್ನು 365 ದಿನಗಳವರೆಗೆ ಮಾಡಬಹುದು. ಬಳಕೆದಾರರು ಬಯಸಿದಲ್ಲಿ ಅವರು ಪ್ರತಿದಿನ SMS ಕಳುಹಿಸಲು ಸಾಧ್ಯವಾಗುತ್ತದೆ ಮತ್ತು ಉಚಿತವಾಗಿ ನೀವು ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಸಹ ಪ್ರತ್ಯೇಕವಾಗಿ ಆನಂದಿಸಬಹುದು.
ನೀವು 365 ದಿನಗಳ ಮಾನ್ಯತೆಯೊಂದಿಗೆ ಬರುವ ಯೋಜನೆಯೊಂದಿಗೆ ರೀಚಾರ್ಜ್ ಮಾಡಲು ಬಯಸಿದರೆ ಈ ಯೋಜನೆಯ ಬೆಲೆ 3,359 ರೂಗಳಾಗಿದ್ದು ಈ ರಿಚಾರ್ಜ್ ಮಾಡಿಕೊಂಡ್ರೆ ನಿಮಗೆ ಪ್ರತಿದಿನ 2.5GB ಹೈಸ್ಪೀಡ್ 5G ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮಾಡಬಹುದಾಗಿದೆ. ಇದಲ್ಲದೆ ಏರ್‌ಟೆಲ್ (Airtel) ಮಾನ್ಯತೆಯ ಅವಧಿಗೆ ಪ್ರತಿದಿನ 100 SMS ಸಹ ಲಭ್ಯವಿದೆ. ಪ್ಲಾನ್‌ನಿಂದ ರೀಚಾರ್ಜ್ ಮಾಡುವ ಸಂದರ್ಭದಲ್ಲಿ ಉಚಿತ Disney+ Hotstar ಮೊಬೈಲ್ ಚಂದಾದಾರಿಕೆಯು 1 ವರ್ಷಕ್ಕೆ ಲಭ್ಯವಿದೆ. ಕೊನೆಯದಾಗಿ ಏರ್‌ಟೆಲ್ (Airtel) ನಿಮಗೆ ಅಪೊಲೊ 24/7 ಸರ್ಕಲ್‌ನ 3 ತಿಂಗಳ ಪ್ರವೇಶ, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ಗೆ ಪ್ರವೇಶವನ್ನು ಸಹ ಬಳಕೆದಾರರಿಗೆ ನೀಡಲಾಗುತ್ತಿದೆ.
ಈ ಜನಪ್ರಿಯ ಏರ್‌ಟೆಲ್ (Airtel) ವಾರ್ಷಿಕ ಯೋಜನೆಯಿಂದ ರೀಚಾರ್ಜ್ ಮಾಡುವ ಸಂದರ್ಭದಲ್ಲಿ ಅರ್ಹ ಬಳಕೆದಾರರಿಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡಲಾಗುತ್ತಿದೆ. ಆದರೆ ಇದಕ್ಕಾಗಿ ಬಳಕೆದಾರರು ತಮ್ಮ ಪ್ರದೇಶದಲ್ಲಿ ಏರ್‌ಟೆಲ್ 5G ರೋಲ್‌ಔಟ್ ಹೊಂದಿರುವುದು ಅವಶ್ಯಕ ಮತ್ತು ನಿಮ್ಮ ಸ್ಮಾರ್ಟ್ಫೋನ್ 5G ನೆಟ್ವರ್ಕ್ ಸಪೋರ್ಟ್ ಮಾಡುವುದು ಬಹುಮುಖ್ಯವಾಗಿದೆ. ಇಲ್ಲವಾದರೆ ನೀವು ಏರ್ಟೆಲ್ Unlimited ಕರೆಗಳು ಮತ್ತು 5G ಡೇಟಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲವೆನ್ನುವುದನ್ನು ನೆನಪಿನಲ್ಲಿಡಬೇಕಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!