Jio ಮತ್ತು Airtel ಶಾಕಿಂಗ್‌ ಸುದ್ದಿ! ಈ ಜನಪ್ರಿಯ Unlimited 5G ಪ್ಲಾನ್‌ಗಳು ಇನ್ಮುಂದೆ ಲಭ್ಯವಿರೋಲ್ಲ!

Updated on 15-Jan-2024

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಾಗಿರುವ ಏರ್‌ಟೆಲ್ (Airtel) ಮತ್ತು ಜಿಯೋ (Jio) ಬಳಕೆದಾರರಿಗೆ ದೊಡ್ಡ ಶಾಕ್ ನೀಡುವುದಾಗಿ ನಿರೀಕ್ಷಿಸಲಾಗಿದೆ. ಏಕೆಂದರೆ ವಾಸ್ತವವಾಗಿ ಭಾರತದಲ್ಲಿ ಅನ್ಲಿಮಿಟೆಡ್ 5G ಡೇಟಾವನ್ನು ಏರ್‌ಟೆಲ್ ಮತ್ತು ಜಿಯೋ ಮಾತ್ರ ನೀಡುತ್ತವೆ. ಈ ಎರಡೂ ಟೆಲಿಕಾಂ ಕಂಪನಿಗಳು ತಮ್ಮ ಪ್ರೀಮಿಯಂ ಗ್ರಾಹಕರಿಗೆ ಉಚಿತ ಅನಿಯಮಿತ (Unlimited 5G) ಡೇಟಾದ ಸೌಲಭ್ಯಗಳನ್ನು ನಿಲ್ಲಿಸಲು ಯೋಚಿಸಿವೆ. ಇದರ ಬದಲಿಗೆ ಈ ಎರಡು ಕಂಪನಿಗಳು 5% ರಿಂದ 10% ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆಂದು ನಿರೀಕ್ಷಿಸಲಾಗಿದೆ. ನೀವು ಜಿಯೋ ಮತ್ತು ಏರ್ಟೆಲ್ ಬಳಕೆದಾರರಾಗಿದ್ದರೆ ಒಮ್ಮೆ ನಿಮ್ಮ MyJio ಅಥವಾ Airtel Thanks ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಬಹುದು.

Also Read: Amazon ಸೇಲ್‌ನಲ್ಲಿ ಈ ಬೆಸ್ಟ್ Smart Watches ಮೇಲೆ ಭಾರಿ ಆಫರ್ ಮತ್ತು ಡೀಲ್‌ಗಳು ಲಭ್ಯ!

Unlimited 5G ಪ್ಲಾನ್‌ಗಳು ಇನ್ಮುಂದೆ ಲಭ್ಯವಿರೋಲ್ಲ!

ಎಕನಾಮಿಕ್ ಟೈಮ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಎರಡೂ ಟೆಲಿಕಾಂ ಕಂಪನಿಗಳ ಅನಿಯಮಿತ 5G ಯೋಜನೆಗಳನ್ನು 2024 ರ ಎರಡನೇ ವಾರದಲ್ಲಿ ಸ್ಥಗಿತಗೊಳಿಸಬಹುದು. ಅಲ್ಲದೆ ಈ 5G ರೀಚಾರ್ಜ್ ಯೋಜನೆಗಳನ್ನು 5% ರಿಂದ 10% ಪ್ರತಿಶತದಷ್ಟು ಹೆಚ್ಚಿಸಬಹುದು. ವಿಶ್ಲೇಷಕರ ವರದಿಗಳ ಪ್ರಕಾರ ಸುಂಕದ ಯೋಜನೆಯ ಆದಾಯವು ಹೆಚ್ಚಾಗಬಹುದು. 5G ಸುಂಕ ಯೋಜನೆಯಲ್ಲಿ 20% ಪ್ರತಿಶತದಷ್ಟು ಹೆಚ್ಚಳವಾಗಬಹುದು. ವರದಿಯ ಪ್ರಕಾರ 5G ಯೋಜನೆಗಳು ಶೀಘ್ರದಲ್ಲೇ ದುಬಾರಿಯಾಗಬಹುದು. ಈ ಯೋಜನೆಗಳಲ್ಲಿ 30% ರಿಂದ 40% ಪ್ರತಿಶತ ಹೆಚ್ಚಿನ ಡೇಟಾವನ್ನು ಸಹ ನೀಡುವ ನಿರೀಕ್ಷೆಗಳಿವೆ.

ಒತ್ತಾಯವಾಗಿ 5G ಸೇವೆಗಳಿಗೆ ತಳ್ಳಿದ ಟೆಲಿಕಾಂಗಳು

ನಿಮಗೆಲ್ಲ ತಿಳಿದಿರುವಂತೆ ಭಾರ್ತಿ ಏರ್ಟೆಲ್ ಮತ್ತು ಜಿಯೋ ತಮ್ಮ ಮೊದಲ 5G ನೆಟ್ವರ್ಕ್ ಸೇವೆಯನ್ನು ಭಾರತದಲ್ಲಿ ಉಚಿತವಾಗಿ ನೀಡುವುದರೊಂದಿಗೆ ಭಾರಿ ಆಫರ್ ಮತ್ತು ಡಿಸ್ಕೌಂಟ್ಗಳನ್ನು ನೀಡಿದವು. ಅಲ್ಲದೆ ಹೊಸ 5G ಸಿಮ್ ಕಾರ್ಡ್ ಅನ್ನು ಸಹ ನೀಡಲು ಪ್ರಾರಂಭಿಸಿದವು. ಅಲ್ಲದೆ ನಿಮ್ಮ ಹಳೆಯ 4G ಸಿಮ್ ಕಾರ್ಡ್ ಅನ್ನು ಬದಲಾಯಿಸದೆ 5G ನೆಟ್ವರ್ಕ್ ಬಳಸಲು ಅಪ್‌ಗ್ರೇಡ್ ಮಾಡಿಕೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು ಆದರೆ ಈಗ ನೀವು 5G ಸಿಮ್ ಕಾರ್ಡ್ ಹೊಂದಿದ್ದರೂ ಸಹ ಪ್ರಸ್ತುತ ಲಭ್ಯವಿರುವ ಈ Unlimited 5G ಉಚಿತ ಡೇಟಾ ಸೇವೆಗಳನ್ನು ಬಳಸಲಾಗುವುದಿಲ್ಲ.

ಪ್ರತಿ ಬಳಕೆದಾರರಿ ಮಾಸಿಕ ಸರಾಸರಿ ಆದಾಯ (ARPU)

ಏರ್‌ಟೆಲ್‌ನ ಪ್ರಸ್ತುತ ಮಾಸಿಕ ಸರಾಸರಿ ಆದಾಯ ಪ್ರತಿ ಬಳಕೆದಾರರಿಗೆ (ARPU) ರೂ 200 ಆಗಿದ್ದು ಇದು ರೂ 250 ಕ್ಕೆ ಹೆಚ್ಚಾಗಬಹುದು. ಭಾರ್ತಿ ಏರ್ಟೆಲ್ ದೇಶದಲ್ಲಿ 125 ಮಿಲಿಯನ್‌ಗಿಂತಲೂ ಹೆಚ್ಚು 5G ಬಳಕೆದಾರರೊಂದಿಗೆ 5G ಬಳಕೆದಾರರಲ್ಲಿ ನಿರಂತರ ಹೆಚ್ಚಳವಿದೆ. ಎರಡೂ ಟೆಲಿಕಾಂ ಕಂಪನಿಗಳ 5G ಬಳಕೆದಾರರ ಸಂಖ್ಯೆ ಸುಮಾರು 200 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಅಂತೆಯೇ ವೊಡಾಫೋನ್ ಐಡಿಯಾ (Vi) ಸಹ ಕನಿಷ್ಠ ಕೆಲವು ವಲಯಗಳಲ್ಲಿ 5G ಅನ್ನು ಪ್ರಾರಂಭಿಸುವ ನಿರೀಕ್ಷೆಗಳಿವೆ. ಅಲ್ಲದೆ ಇದರೊಂದಿಗೆ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ BSNL ಸಹ 2025 ಮುಂಬರುವ ವರ್ಷದ ವೇಳೆಗೆ 5G ನೆಟ್‌ವರ್ಕ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಅತಿ ಕಡಿಮೆ ಬೆಲೆಯ ಪ್ಲಾನ್‍ಗಳನ್ನು ನೀಡುವ ನಿರೀಕ್ಷೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :