365 ದಿನಗಳಿಗೆ ಉಚಿತ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಈ ಏರ್ಟೆಲ್ ಯೋಜನೆಗಳ ಬೆಲೆ ಎಷ್ಟು?

365 ದಿನಗಳಿಗೆ ಉಚಿತ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಈ ಏರ್ಟೆಲ್ ಯೋಜನೆಗಳ ಬೆಲೆ ಎಷ್ಟು?
HIGHLIGHTS

ಏರ್‌ಟೆಲ್‌ನ (Airtel) ಇಡೀ ವರ್ಷಕ್ಕೆ ಆಗುವ ಈ ಯೋಜನೆಗಳನ್ನು ನೀವು ಪ್ರಯತ್ನಿಸಬಹುದು.

ಏರ್‌ಟೆಲ್‌ನ (Airtel) ಬಳಕೆದಾರರಿಗೆ ಯಾವ ಯೋಜನೆ ಉತ್ತಮ ಎಂದು ನೀವು ಸುಲಭವಾಗಿ ನಿರ್ಧರಿಸಬಹುದು.

ಇಂದು 2,999 ರೂ ಮತ್ತು 3,359 ರೂ ಬೆಲೆಯ ಏರ್‌ಟೆಲ್‌ನ (Airtel) ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ.

Airtel 365 Days Plan: ಪದೇ ಪದೇ ರೀಚಾರ್ಜ್ ಮಾಡುವ ತಲೆನೋವು ನಿಮಗೆ ಬೇಡವೆಂದಾದರೆ ಏರ್‌ಟೆಲ್‌ನ  ಇಡೀ ವರ್ಷಕ್ಕೆ ಆಗುವ ಈ ಯೋಜನೆಗಳನ್ನು ನೀವು ಪ್ರಯತ್ನಿಸಬಹುದು. ಈಗ ನಾವು ಹೇಳುವ ಏರ್‌ಟೆಲ್‌ನ ಎರಡೂ ಯೋಜನೆಗಳು ನಿಮಗೆ ಹೆಚ್ಚಿನ ಪ್ರಮಾಣದ ಡೇಟಾ,ಅನ್‌ಲಿಮಿಟೆಡ್‌ ಕರೆಗಳು ಮತ್ತು ಪ್ರತಿದಿನ 5G ಡೇಟಾವನ್ನು ನೀಡುತ್ತದೆ. ಇಂದು ನಾವು 2,999 ರೂ ಮತ್ತು 3,359 ರೂ ಬೆಲೆಯ ಏರ್‌ಟೆಲ್‌ನ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ನಿಮ್ಮ ಅನುಕೂಲಕ್ಕಾಗಿ ಈ ಎರಡು ಯೋಜನೆಗಳ ಬಗ್ಗೆ ವಿವರವನ್ನು ನೀಡುತ್ತಿದ್ದೇವೆ. ಇದರಿಂದ ನಿಮಗೆ ಯಾವ ಯೋಜನೆ ಉತ್ತಮ ಎಂದು ನೀವು ಸುಲಭವಾಗಿ ನಿರ್ಧರಿಸಬಹುದು.

ಏರ್‌ಟೆಲ್‌ನ 2,999 ರೂ ಪ್ರಿಪೇಯ್ಡ್ ಯೋಜನೆ:

ದೀರ್ಘಾವಧಿಯ ಸಂಪರ್ಕ ಮತ್ತು ಪ್ರಯೋಜನಗಳ ಅಗತ್ಯವಿರುವವರಿಗೆ ಏರ್‌ಟೆಲ್‌ನ 2,999 ರೂ ಪ್ರಿಪೇಯ್ಡ್ ಯೋಜನೆಯು ಒಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆ 365 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಯ 4G ಡೇಟಾವನ್ನು ನೀಡುತ್ತದೆ. ಇಲ್ಲಿ ನಿಮ್ಮ 4G ಡೇಟಾದ ಮಿತಿ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 64 Kbps ಗೆ ಕಡಿಮೆಯಾಗುತ್ತದೆ. ಆದರೆ ನೀವು 5G ಫೋನ್ ಬಳಸುತ್ತಿದ್ದರೆ ಮತ್ತು ನೀವು ಏರ್‌ಟೆಲ್‌ನ 5G ನೆಟ್‌ವರ್ಕ್ ಇರುವ ನಗರದಲ್ಲಿದ್ದರೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನ್‌ಲಿಮಿಟೆಡ್‌ 5G ಡೇಟಾವನ್ನು ಬಳಸಬಹುದು.

ಅಲ್ಲದೆ ಈ ಯೋಜನೆಯು ನಿಮಗೆ ಪ್ರತಿದಿನ 100 SMS ಮತ್ತು ಅನ್‌ಲಿಮಿಟೆಡ್‌ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ಮೂರು ತಿಂಗಳ ಅಪೊಲೊ 24/7 ಸರ್ಕಲ್ ಸರ್ವಿಸ್, ಫಾಸ್ಟ್ಯಾಗ್‌ನಲ್ಲಿ 100 ರೂ ಕ್ಯಾಶ್‌ಬ್ಯಾಕ್, ಉಚಿತವಾಗಿ ಹೆಲೋಟ್ಯೂನ್ಸ್ ಮತ್ತು ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ಏರ್‌ಟೆಲ್‌ನ 3,359 ರೂ ಪ್ರಿಪೇಯ್ಡ್ ಯೋಜನೆ:

ಏರ್‌ಟೆಲ್‌ನ 3,359 ರೂ ಪ್ರಿಪೇಯ್ಡ್ ಯೋಜನೆಯು 365 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ ಮತ್ತು ಹೆಚ್ಚು ಇಂಟರ್ನೆಟ್ ಬಳಕೆದಾರರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಪ್ರತಿದಿನ 2.5GB ಹೈಸ್ಪೀಡ್ 4G ಡೇಟಾವನ್ನು ನೀಡಲಾಗುತ್ತದೆ. ಇಲ್ಲಿ ಪ್ರಿತಿದಿನದ ನಿಮ್ಮ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 64 Kbps ಗೆ ಕಡಿಮೆಯಾಗುತ್ತದೆ. ಆದರೆ ನೀವು 5G ಫೋನ್ ಬಳಸುತ್ತಿದ್ದರೆ ಮತ್ತು ಏರ್‌ಟೆಲ್‌ 5G ನೆಟ್‌ವರ್ಕ್ ಇರುವ ನಗರದಲ್ಲಿದ್ದರೆ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನ್‌ಲಿಮಿಟೆಡ್‌ 5G ಡೇಟಾವನ್ನು ಬಳಸಬಹುದು.

ಅಲ್ಲದೆ ಈ ಯೋಜನೆಯು ನಿಮಗೆ ಪ್ರತಿದಿನ 100 SMS ಮತ್ತು ಅನ್‌ಲಿಮಿಟೆಡ್‌ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ನಿಮಗೆ ಮೂರು ತಿಂಗಳವರೆಗೆ ಅಪೊಲೊ 24/7 ಸರ್ಕಲ್ ಸರ್ವಿಸ್, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಒಂದು ವರ್ಷದ ಚಂದಾದಾರಿಕೆ, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ ಕ್ಯಾಶ್‌ಬ್ಯಾಕ್ ಮತ್ತು ಉಚಿತವಾಗಿ ಹೆಲೋಟ್ಯೂನ್ಸ್ ಮತ್ತು ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಸಹ ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo