ಏರ್‌ಟೆಲ್ ತನ್ನ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ತಿಂಗಳ ರೀಚಾರ್ಜ್‌ಗಳನ್ನು ತಪ್ಪಿಸಲು ಏರ್‌ಟೆಲ್‌ನ ಗ್ರಾಹಕರು ವಿವಿಧ ವಾರ್ಷಿಕ ಯೋಜನೆಗಳಿಂದ ಆಯ್ಕೆ ಮಾಡಬಹುದು. ಈ ವಾರ್ಷಿಕ ಯೋಜನೆಗಳು ನಿಮ್ಮ ಸಾಮಾನ್ಯ ತಿಂಗಳ ರೀಚಾರ್ಜ್ ಆಯ್ಕೆಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ. ಏರ್‌ಟೆಲ್‌ನ ರೂ 1799 ವಾರ್ಷಿಕ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳಲಾಗುತ್ತಿದೆ. ಈ ರೀಚಾರ್ಜ್ ಯೋಜನೆ ನಿಮಗೆ ಹೆಚ್ಚು ದುಬಾರಿ ಎನಿಸಿದರೂ ಇದರ ಪ್ರಯೋಜನಗಳು ಮಾತ್ರ ಹೆಚ್ಚಾಗಿದೆ. ನಿಮ್ಮ ಸಾಮಾನ್ಯ 28 ಅಥವಾ 30 ದಿನಗಳ ರೀಚಾರ್ಜ್‌ಗೆ ಹೋಲಿಸಿದರೆ ಈ ಯೋಜನೆಯು ಹೆಚ್ಚು ಮೌಲ್ಯಯುತವಾಗಿದೆ.
ಏರ್‌ಟೆಲ್‌ನ ರೂ 1799 ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಬಳಕೆದಾರರು ಇಡೀ ವರ್ಷಕ್ಕೆ ಅನ್‌ಲಿಮಿಟೆಡ್ ಲೋಕಲ್ ಮತ್ತು STD ಕರೆಗಳನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಹೊಂದಿರುವ ಗ್ರಾಹಕರು ಒಟ್ಟಾರೆಯಾಗಿ 24GB ಡೇಟಾವನ್ನು ಹೊಂದಿರುತ್ತಾರೆ. ಇದರೊಂದಿಗೆ ಪೂರ್ತಿ ವ್ಯಾಲಿಡಿಟಿಗಾಗಿ ನಿಮಗೆ 3600 SMS ಸಹ ಈ ಯೋಜನೆಯಲ್ಲಿ ನೀಡಿಸಲಾಗುತ್ತದೆ. ಹೆಚ್ಚುವರಿಯಾಗಿ HeloTunes ಮತ್ತು Wynk Music ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.
ಏರ್‌ಟೆಲ್‌ನ ಈ ರೂ 1799 ವಾರ್ಷಿಕ ಯೋಜನೆಯು ತಿಂಗಳ ಲೆಕ್ಕದಲ್ಲಿ ಸುಮಾರು ಕೇವಲ 150 ರೂ ವೆಚ್ಚವಾಗುತ್ತದೆ. ಆದರೂ ಈ ಯೋಜನೆ ಯಾರ್ಯಾರು ಕಡಿಮೆ ಡೇಟಾವನ್ನು ಬಳಸುತ್ತಾರೋ ಅವರಿಗೆ ಉತ್ತಮವಾಗಿದೆ. ಏಕೆಂದರೆ ಇದರಲ್ಲಿ ಡೇಟಾ ಬಿದ್ದು ಬೇರೆಲ್ಲ ಸೌಲಭ್ಯಗಳು ಉತ್ತಮವಾಗಿವೆ. ಇದರಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ಕರೆಗಳನ್ನು ಪಡೆಯುತ್ತಾರೆ. ಪ್ರತಿ ತಿಂಗಳ 150 ರೂಗಳ ವೆಚ್ಚಕ್ಕೆ ಡೇಟಾ ಮತ್ತು SMS ಅನ್ನು ಸಹ ಪಡೆಯುತ್ತಾರೆ. ನೀವು ರೂ 1799 ವಾರ್ಷಿಕ ಯೋಜನೆಯನ್ನು ಏರ್‌ಟೆಲ್‌ನ ರೂ 299 ತಿಂಗಳ ರೀಚಾರ್ಜ್‌ನೊಂದಿಗೆ ಹೋಲಿಕೆ ಮಾಡಿದರೆ ವಾರ್ಷಿಕ ಯೋಜನೆಯು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
ಏರ್‌ಟೆಲ್‌ನ ರೂ 299 ರ ಯೋಜನೆಯು 29 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಗ್ರಾಹಕರು ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾದಂತೆ ಒಟ್ಟು 58GB ಡೇಟಾವನ್ನು ಪಡೆಯುತ್ತಾರೆ. ನೀವು ಈ ಯೋಜನೆಯನ್ನು ಪ್ರತಿ ತಿಂಗಳು ರೀಚಾರ್ಜ್ ಮಾಡಿದರೆ ನಿಮ್ಮ ಒಟ್ಟು ವಾರ್ಷಿಕ ವೆಚ್ಚ 3,588 ರೂ ಆಗಲಿದ್ದು ಈ ಯೋಜನೆ ನಿಮಗೆ 336 ದಿನಗಳವರೆಗೆ ಮಾತ್ರ ಇರುತ್ತದೆ. ಅಲ್ಲಿಗೆ ನೀವು ಇಡೀ ವರ್ಷದ ವ್ಯಾಲಿಡಿಟಿಯನ್ನು ಪಡೆದಂತಾಗುವುದಿಲ್ಲ. ಇದರಿಂದಾಗಿ ಏರ್‌ಟೆಲ್‌ನ 2,999 ರ ವಾರ್ಷಿಕ ಯೋಜನೆಯು ನಿಮಗೆ ಹೆಚ್ಚು ಲಾಭದಾಯಕವಾಗಿರುತ್ತದೆ.