ಆನ್ಲೈನ್ ಕಂಟೆಂಟ್ ಅಥವಾ ವೀಡಿಯೊವನ್ನು ಡೌನ್ಲೋಡ್ ಮಾಡುವವರಿಗಾಗಿ ದೊಡ್ಡ ಅನುಕೂಲವಾಗುತ್ತದೆ.
ಈ ವರ್ಷ 5G ಸೇವೆ ಭರದಲ್ಲಿ ಹೆಚ್ಚಾಗಿ ಮೈಲಿಗಲ್ಲು ಆಗಲಿದೆ. ಈ ವರ್ಷದ ಅಂತ್ಯದಲ್ಲಿ 5G ವೈರ್ಲೆಸ್ ಸೇವೆ ಪ್ರಪಂಚದ ಹಲವು ದೇಶಗಳಲ್ಲಿ ಪ್ರಾರಂಭವಾಗಲಿದೆ. ಈ ಸೇವೆಯನ್ನು ವಾಣಿಜ್ಯಿಕವಾಗಿ US ನಲ್ಲಿ ಮತ್ತು ಯುರೋಪಿಯನ್ ದೇಶಗಳೊಂದಿಗೆ ಕೆಲವು ಏಷ್ಯನ್ ದೇಶಗಳಲ್ಲಿ ಪ್ರಾರಂಭಿಸಬಹುದು. ಅನೇಕ ಮೂಲ ಸಲಕರಣೆ ತಯಾರಕರು (OEM ಗಳು) ತಮ್ಮ 5G ಬೆಂಬಲ ಸ್ಮಾರ್ಟ್ಫೋನ್ಗಳನ್ನು ಪ್ರಾರಂಭಿಸಲು ತಮ್ಮ ತಯಾರಿಯನ್ನು ಪೂರ್ಣಗೊಳಿಸಿದ್ದಾರೆ.
ಮುಂದಿನ ಸಮಯಕ್ಕೆ 5G ವೈರ್ಲೆಸ್ ಸೇವೆಯನ್ನು ಪ್ರಮುಖ ನಾವೀನ್ಯತೆಯಾಗಿ ನೋಡಲಾಗುತ್ತಿದೆ ಎಂದು ಟೆಲಿಕಾಂ ಉದ್ಯಮ ನಂಬಿದರೆ. ಭವಿಷ್ಯದ ತಂತ್ರಜ್ಞಾನಕ್ಕಾಗಿ 5G ವೈರ್ಲೆಸ್ ಸೇವೆ ಬೆನ್ನುಹುರಿಯಂತೆ ಕಾರ್ಯನಿರ್ವಹಿಸುತ್ತದೆ. ಈ ತಿಂಗಳಲ್ಲಿ ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದ MWC ಮೊಬೈಲ್ ಕಾನ್ಫರೆನ್ಸ್ 2019 (MWC 2019) ನಲ್ಲಿ 5G ತಂತ್ರಜ್ಞಾನಕ್ಕೆ ಒತ್ತು ನೀಡಬಹುದು.
ಈ 5G ವೈರ್ಲೆಸ್ ಸೇವೆಯ ಅತಿದೊಡ್ಡ ಪ್ರಯೋಜನವೆಂದರೆ ಜನರು ಹೆಚ್ಚಿನ ವೇಗದ ಇಂಟರ್ನೆಟ್ ಕನೆಕ್ಟಿವಿಟಿಯ ಅನುಕೂಲವನ್ನು ಪಡೆದುಕೊಳ್ಳುತ್ತಾರೆ. ನೆಟ್ವರ್ಕ್ ಸಂಪರ್ಕದ ಮೂಲಕ ನಗರಗಳನ್ನು ಸ್ಮಾರ್ಟ್ ಮಾಡಬಹುದು. ಇದಲ್ಲದೆ ವೀಡಿಯೊ ಸ್ಟ್ರೀಮಿಂಗ್ ವೇದಿಕೆಗಳಲ್ಲಿ (Netflix, Amazon Prime, Hotstar, Youtube) ಬಫರಿಂಗ್ ಮಾಡದೆಯೇ ಬಳಕೆದಾರರು ಮನರಂಜನೆಯ ಪ್ರಯೋಜನ ಪಡೆಯಬವುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಆನ್ಲೈನ್ ಕಂಟೆಂಟ್ ಅಥವಾ ವೀಡಿಯೊವನ್ನು ಡೌನ್ಲೋಡ್ ಮಾಡುವ ಬಳಕೆದಾರರಿಗೆ ದೊಡ್ಡ ಅನುಕೂಲವಾಗುತ್ತದೆ.
ಈ ಬಳಕೆದಾರರು ಯಾವುದೇ ವೀಡಿಯೊವನ್ನು ಡೌನ್ಲೋಡ್ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ. 5G ಸೇವೆಯಿಂದ ನಿಮಗೆ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಲಭ್ಯವಿರುತ್ತದೆ. ಆದರೆ ಇದರ ಡೇಟಾ ಸೆಕ್ಯೂರಿಟಿಯನ್ನು ಸಹ ಸವಾಲು ಮಾಡಬಹುದು. US ಸರ್ಕಾರವು ಟೆಲಿಕಾಂ ಕಂಪೆನಿಗಳನ್ನು ಚೀನೀ ಟೆಲಿಕಾಂ ತಂತ್ರಜ್ಞಾನವನ್ನು ಬಳಸಬಾರದು ಎಂದು ಎಚ್ಚರಿಸಿದೆ. ಡೇಟಾ ಭದ್ರತೆಯನ್ನು ಪರಿಗಣಿಸಿ ಹುವಾವೇ (ಚೀನೀ ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿ) ನೆಟ್ವರ್ಕ್ ಫೋನ್ಗಳ ಡೇಟಾ ಭದ್ರತೆಗೆ ಸವಾಲಾಗಿ ಪರಿಗಣಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile