Jio, Airtel, Vi: ಈಗ ಬಳಕೆದಾರರಿಗೆ ರೂ. 296 ಯೋಜನೆಯನ್ನು ಬಿಡುಗಡೆಗೊಳಿಸಿದೆ. ವೊಡಾಫೋನ್ ಐಡಿಯಾ ಸಹ ಈಗ (Vi) ಭಾರತೀಯ ಗ್ರಾಹಕರಿಗೆ ರೂ. 296 ರ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬೃಹತ್ ಡೇಟಾ, SMS, ಆಡಿಯೋ ಕರೆ ಮತ್ತು 30 ದಿನಗಳ ವ್ಯಾಲಿಡಿಟಿ ಅನ್ನು ನೀಡಿದೆ. ವೊಡಾಫೋನ್ ಐಡಿಯಾದ ಇತ್ತೀಚಿನ ರೀಚಾರ್ಜ್ ಪ್ಯಾಕ್ ತಿಂಗಳ ವ್ಯಾಲಿಡಿಟಿ ಮತ್ತು ಬೃಹತ್ ಡೇಟಾದೊಂದಿಗೆ ಅಲ್ಪಾವಧಿಯ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಯನ್ನು ಬಯಸುವ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿದೆ.
ಜಿಯೋ ರೂ. 296 ಯೋಜನೆಯು 25GB ಒಟ್ಟು ಡೇಟಾ, ಅನ್‌ಲಿಮಿಟೆಡ್ ಆಡಿಯೋ ಕರೆ ಮತ್ತು ಪ್ರತಿದಿನ 100 SMS ಗಳನ್ನು ನೀಡುತ್ತದೆ. ಈ ಪ್ಯಾಕ್ 30 ದಿನಗಳವರೆಗೆ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದಲ್ಲದೆ JioTV, JioSecurity, JioCloud, ಮತ್ತು JioCinema ಸೇರಿದಂತೆ Jio ನ ಎಲ್ಲಾ ಅಪ್ಲಿಕೇಶನ್‌ಗಳಿಗೆ ಬಳಕೆದಾರರು ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಅಲ್ಲದೆ ಅರ್ಹ ಬಳಕೆದಾರರು ಈಗ 304 ನಗರಗಳಲ್ಲಿ ನೀಡಲಾಗುವ ಮಿತಿಯಿಲ್ಲದ 5G ಡೇಟಾದ ಲಾಭವನ್ನು ಪಡೆಯಬಹುದು.
ಏರ್ಟೆಲ್ ಸಾಂಪ್ರದಾಯಿಕ ಪ್ರಯೋಜನಗಳ ಜೊತೆಗೆ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಏರ್‌ಟೆಲ್‌ನ ರೂ. 296 ಯೋಜನೆಯು 30 ದಿನಗಳ ವ್ಯಾಲಿಡಿಟಿ, 25GB ಬೃಹತ್ ಡೇಟಾ, ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಗಳನ್ನು ನೀಡುತ್ತದೆ. ಇವು Vi ಮತ್ತು Jio ಗಳಂತೆಯೇ ಒಂದೇ ರೀತಿಯ ಪ್ರಯೋಜನಗಳಾಗಿವೆ. ಆದರೆ ಏರ್‌ಟೆಲ್ ನ ಈ ಯೋಜನೆಯಲ್ಲಿ ವೈಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶ, ಮೂರು ತಿಂಗಳ ಅಪೊಲೊ 24×7 ಚಂದಾದಾರಿಕೆ, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್‌ಗಳು ಮತ್ತು 5G ಸಂಪರ್ಕ ಲಭ್ಯವಿದೆ.
ವೊಡಾಫೋನ್ ಐಡಿಯಾ ಸಹ ಈಗ (Vi) ರೂ. 296 ಯೋಜನೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಸಂಪೂರ್ಣ ರೀಚಾರ್ಜ್ ಅವಧಿಗೆ 25GB ಬೃಹತ್ ಡೇಟಾ, ಅನ್‌ಲಿಮಿಟೆಡ್ ಆಡಿಯೋ ಕರೆ ಮತ್ತು ಪ್ರತಿದಿನ 100 SMS ಗಳಂತಹ ಪ್ರಯೋಜಗಳನ್ನು ಪಡೆಯಬಹುದು. ಈ ಪ್ರಿಪೇಯ್ಡ್ ಯೋಜನೆಯಲ್ಲಿ Vi Movies ಮತ್ತು Vi TV ಮಾತ್ರ ಹೆಚ್ಚುವರಿ ಪ್ರಯೋಜನಗಳಿದ್ದು Vi Hero ಅನ್‌ಲಿಮಿಟೆಡ್ ಪ್ರಯೋಜನಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿಲ್ಲ.
ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಮೂರು ಕಂಪನಿಗಳು ರೂ. 296 ಯೋಜನೆಯು ಒಂದೇ ರೀತಿಯ ಡೇಟಾ, SMS ಮತ್ತು ಕರೆ ಪ್ರಯೋಜನಗಳನ್ನು ನೀಡುತ್ತದೆ. ಅದೇನೇ ಇದ್ದರೂ ಹೆಚ್ಚುವರಿ ಉಚಿತ ಪ್ರಯೋಜನಗಳು ಜಿಯೋ ಮತ್ತು ಏರ್‌ಟೆಲ್‌ನ ಒಪ್ಪಂದವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. Vi ನ ಬಳಕೆದಾರರು ಕೇವಲ ಒಂದು ಹೆಚ್ಚುವರಿ ಪ್ರಯೋಜನವನ್ನು ಮಾತ್ರ ಪಡೆಯುತ್ತಾರೆ. ಆದರೆ ಏರ್‌ಟೆಲ್ ಮತ್ತು ಜಿಯೋ ಯೋಜನೆಗಳು ಉಚಿತ 5G ಇಂಟರ್ನೆಟ್ ಜೊತೆಗೆ ತಲಾ ನಾಲ್ಕು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಇದರಿಂದಾಗಿ ಜಿಯೋ ಮತ್ತು ಏರ್‌ಟೆಲ್‌ನ ಯೋಜನೆಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುವಂತೆ ಮಾಡುತ್ತದೆ.