ದಿನವಾಗಲಿ ರಾತ್ರಿಯಾಗಲಿ ಸೋಶಿಯಲ್ ಮೀಡಿಯಾ (Social Media) ಬಳಸುವುದು ಸಿಕಾಪಟ್ಟೆ ಅಪಾಯಕಾರಿಯಾಗಿದೆ.
ಜನಪ್ರಿಯ Facebook, Instagram, Twitter, YouTube ಮತ್ತು OTT ಅಪ್ಲಿಕೇಶನ್‌ಗಳನ್ನು ಸದಾ ಸ್ಕ್ರೋಲಿಂಗ್ ಮಾಡುವುದನ್ನು ನೋಡುತ್ತೇವೆ.
ಈ ಸಮಸ್ಯೆಯನ್ನು ತೊಡೆದುಹಾಕಲು ಸುಲಭ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಸ್ಕ್ರೀನ್ ಸಮಯವನ್ನು (Screen Time) ಕಡಿಮೆ ಮಾಡುವುದು.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಅಪ್ಲಿಕೇಶನ್‌ಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದೆ. ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಇತ್ತೀಚಿನ ಜನಪ್ರಿಯ Facebook, Instagram, Twitter, YouTube ಮತ್ತು OTT ಅಪ್ಲಿಕೇಶನ್‌ಗಳನ್ನು ಸದಾ ಸ್ಕ್ರೋಲಿಂಗ್ ಮಾಡುವುದನ್ನು ನೋಡುತ್ತೇವೆ. ಇದರಲ್ಲಿ ಅನೇಕ ಜನರು ಬೇರೆ ಯಾವುದೇ ಉದ್ದೇಶಗಳಿಲ್ಲದೆ ಇಂಟರ್ನೆಟ್‌ಗೆ ವ್ಯಾಸನವಾಗಿರುವ ಕಾರಣ ಈ ಅಪ್ಲಿಕೇಶನ್‌ಗಳಲ್ಲಿ ಗಂಟೆಗಟ್ಟಲೆ ಸ್ಕ್ರೋಲ್ ಮಾಡುತ್ತಲೇ ಇರುತ್ತಾರೆ.
ದಿನದಲ್ಲಿ ಮಾತ್ರವಲ್ಲದೆ ರಾತ್ರಿಯಲ್ಲೂ ಸಹ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಸಾಮಾಜಿಕ ಮಾಧ್ಯಮವನ್ನು (Social Media) ಬಳಸುತ್ತಾರೆ. ಆದರೆ ದಿನವಾಗಲಿ ರಾತ್ರಿಯಾಗಲಿ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಸಿಕಾಪಟ್ಟೆ ಅಪಾಯಕಾರಿ ಎನ್ನುವುದು ನಿಮಗೆ ಅರಿವಿದೆಯ? ಇದು ನಿಮ್ಮ ಆರೋಗ್ಯವನ್ನು ನಿಧಾನವಾಗಿ ಏರುವ ವಿಷದಂತೆ ನಿಮ್ಮ ಚಂದದ ಆರೋಗ್ಯವನ್ನು ಹದಗೆಡಿಸುತ್ತದೆ.
Also Read: Mobile Speakers: ಮೊಬೈಲ್ ಸ್ಪೀಕರ್‌ನಿಂದ ಸೌಂಡ್ ಬರುತ್ತಿಲ್ವಾ? ಈ ಸಿಂಪಲ್ ಸ್ಟೆಪ್ಸ್ ಅನುಸರಿಸಿ!
Social Media ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತಿವೆ:
ರಾತ್ರಿ ವೇಳೆ ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ (Social Media) ಅಪ್ಲಿಕೇಶನ್‌ಗಳ ನಿರಂತರ ಸ್ಕ್ರೋಲಿಂಗ್ ಮಾಡುವ ಚಟ ಯುವಕರ ಆರೋಗ್ಯ ಕೆಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿನ ಚಟುವಟಿಕೆಗಳೊಂದಿಗೆ ನವೀಕೃತವಾಗಿರಲು ದಿನದ ಕೆಲಸವನ್ನು ಪೂರ್ಣಗೊಳಿಸಿದ ನಂತರ ರಾತ್ರಿ ಮಲಗುವ ಮೊದಲು ಯುವಕರು ಆನ್‌ಲೈನ್‌ನಲ್ಲಿ ಸ್ಕ್ರಾಲ್ ಮಾಡುತ್ತಾರೆ ಆದರೆ ಈ ಸ್ಕ್ರೋಲಿಂಗ್ ಕೆಲವು ನಿಮಿಷಗಳ ಬದಲಿಗೆ ಹಲವಾರು ಗಂಟೆಗಳವರೆಗೆ ಇರುತ್ತದೆ. ಈ ಕಾರಣದಿಂದಾಗಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಇತರ ಕಾಯಿಲೆಗಳಿಗೆ ಬಲಿಯಾಗುತ್ತಾರೆ.
Social Media ಬಳಕೆಯಿಂದ ಈ ರೋಗಗಳಿಗೆ ಬಲಿಯಾಗಬಹುದು:
ರಾತ್ರಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್‌ನ ಚಟುವಟಿಕೆಯ ಬಗ್ಗೆ ವಾಸ್ತವವಾಗಿ ಕೆಲವು ಅಧ್ಯಯನಗಳು ರಾತ್ರಿಯಲ್ಲಿ ಸ್ಕ್ರೋಲಿಂಗ್ ಮಾಡುವುದು ಮತ್ತು ತಡವಾಗಿ ಮಲಗುವುದರಿಂದ ಜನರಲ್ಲಿ ಅಧಿಕ ರಕ್ತದೊತ್ತಡ (Blood Pressure), ಮಧುಮೇಹ (Diabetes) ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು (Heart related problems) ಉಂಟುಮಾಡುತ್ತದೆ ಎಂದು ಕಂಡುಹಿಡಿದಿದೆ. ಇದರೊಂದಿಗೆ ತೂಕ ಹೆಚ್ಚಾಗುವುದು ಮತ್ತು ಖಿನ್ನತೆಯ ಸಮಸ್ಯೆಗಳು ಸಹ ಪ್ರಾರಂಭವಾಗುತ್ತವೆ. ಎಲ್ಲವನ್ನೂ ತಿಳಿದಿದ್ದರೂ ಯುವಕರು ಸಾಕಷ್ಟು ನಿದ್ದೆ ಮಾಡುವ ಬದಲು ಸ್ಕ್ರೋಲಿಂಗ್ ಮಾಡುತ್ತಿದ್ದಾರೆ ಎಂದು ಸಂಶೋಧನೆಯೊಂದರಲ್ಲಿನ ವಿಜ್ಞಾನಿಗಳು ಹೇಳುತ್ತಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಸುಲಭ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಸ್ಕ್ರೀನ್ ಸಮಯವನ್ನು (Screen Time) ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ.
ಅಡ್ಡ ಪರಿಣಾಮಗಳು ತಪ್ಪಿಸಲು ಈ ಕೆಲಸಗಳನ್ನು ಮಾಡಬಹುದು:
ನೀವು ರಾತ್ರಿಯಲ್ಲಿ ಸ್ಕ್ರೀನ್ ಚಟದಿಂದ ದೂರವಿರಲು ನಿಮ್ಮ ಫೋನ್‌ನಲ್ಲಿ ಟೈಮರ್ ಅನ್ನು ಹೊಂದಿಸಬೇಕು ಎಂದು ವಿಜ್ಞಾನಿಗಳು ಸೂಚಿಸುತ್ತಾರೆ. ನೀವು ಕೆಲವು ಗಂಟೆಗಳವರೆಗೆ ಅಪ್ಲಿಕೇಶನ್ ನೋಟಿಫಿಕೇಶನ್ ನಿರ್ಬಂಧಿಸಬಹುದು. ಮಲಗುವ 2 ಗಂಟೆಗಳ ಮುಂಚೆ ನೀವು ಪುಸ್ತಕ ಓದುವಿಕೆ, ಚಿತ್ರಕಲೆ, ಮನೆಯವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮತ್ತು ಧ್ಯಾನ ಅಥವಾ ರಸಪ್ರಶ್ನೆಯನ್ನು ಹಮ್ಮಿಕೊಳ್ಳುವಂತಹ ಚಟುವಟಿಕೆಗಳು ನಿಮ್ಮ ಮೊಬೈಲ್ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ ನಿಮಗೆ ಉತ್ತಮ ನಿದ್ದೆ ಮಾಡುವ ಅಭ್ಯಾಸವನ್ನು ಹೆಚ್ಚಿಸಲು ಉತ್ತಮವಾಗಿದೆ.
ನಿಮ್ಮ ಮೊಬೈಲ್ ಅನ್ನು ಮತ್ತೊಂದು ಕೋಣೆಯಲ್ಲಿ ಇರಿಸಿ:
ಈ ಅಂಶ ತುಂಬ ಮುಖ್ಯವಾಗಿದ್ದು ಇದಕ್ಕೆ ಕಾರಣ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಬರುವ ರೇಡಿಯೇಷನ್ ಆದರೆ ಈ ವಿಷಯ ಎಲ್ಲರಿಗೂ ತಿಳಿದಿದ್ದರೂ ಸಹ ಯಾರು ತಮ್ಮ ಮೊಬೈಲ್ ಅನ್ನು ಬೇರೆ ಕೋಣೆಯಲ್ಲಿ ಇಡಲು ಒಪ್ಪುವುದೇ ಇಲ್ಲ. ಇದರಿಂದ ತಮ್ಮೊಂದಿಗೆ ತಮ್ಮ ಕೋಣೆಯಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಜನರ ನಿದ್ರೆ ಅಷ್ಟು ಉತ್ತಮವಾಗಿರುವುದಿಲ್ಲ. ಅಂದ್ರೆ ಸ್ಮಾರ್ಟ್ಫೋನ್ ಬಳಸಿಕೊಂಡೇ ಅಥವಾ ಸ್ಮಾರ್ಟ್ಫೋನ್ ಪಕ್ಕದಲ್ಲೇ ಇಟ್ಟುಕೊಂಡು ಮಲಗುವವರ ನಿದ್ರೆ ಗಾಢವಾಗಿರುವುದಿಲ್ಲ. ಇದರಿಂದ ವೈದ್ಯರು ನೀವು ಮಲಗುವ ಮೊದಲು ನಿಮ್ಮ ಮೊಬೈಲ್ ಫೋನ್ ಅಥವಾ ಯಾವುದೇ ಡಿಸ್ಪ್ಲೇ ಹೊಂದಿರುವ ಅಥವಾ ನೆಟ್ವರ್ಕ್ ಒಳಗೊಳ್ಳುವ ಗ್ಯಾಜೆಟ್‌ಗಳನ್ನು ನಿಮ್ಮಿಂದ ದೂರವಿಡುವುದು ಉತ್ತಮ ಆಯ್ಕೆಯಾಗಿರುತ್ತದೆ ಎನ್ನುತ್ತಾರೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile