ಜನಪ್ರಿಯ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ (StarLink Satellite Internet) ಸೇವೆ ಒದಗಿಸುವ ಕಂಪನಿ ಈಗ 100 ದೇಶಗಳನ್ನು ತಲುಪಿದೆ. ಈ ಮಾಹಿತಿಯನ್ನು ಸ್ವತಃ SpaceX ಕಂಪನಿಯ ಮಾಲೀಕರಾಗಿರುವ ಎಲಾನ್ ಮಸ್ಕ್ (Elon Musk) ಮಾಹಿತಿ ನೀಡಿದ್ದಾರೆ. ಆಫ್ರಿಕನ್ ದೇಶ ಸಿಯೆರಾ ಲಿಯೋನ್ ಸ್ಟಾರ್‌ಲಿಂಕ್‌ನ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದ 100ನೇ ದೇಶವಾಗಿದೆ. ಈ ಸ್ಟಾರ್‌ಲಿಂಕ್ ಈಗ ಬರೋಬ್ಬರಿ ಸುಮಾರು 100 ದೇಶಗಳಲ್ಲಿ ತನ್ನ ಕಾಲಿಟ್ಟಿದೆ. ಈ ಕಂಪನಿಯೂ ಸಣ್ಣ ಮತ್ತು ದೊಡ್ಡ ಪ್ರಾಂತ್ಯಗಳು ಮತ್ತು ಇತರ ಹಲವು ಮಾರುಕಟ್ಟೆಗಳಲ್ಲಿ ಹೈಸ್ಪೀಡ್ ಇಂಟರ್ನೆಟ್‌ನೊಂದಿಗೆ 3 ಕೋಟಿಗಿಂತ ಹೆಚ್ಚು ಜನರನ್ನು ಸಂಪರ್ಕಿಸುತ್ತಿದೆ ಎಂದು ಕಂಪನಿ ಹೇಳಿದೆ.
Also Read: Dimensity 7300 ಪವರ್ಫುಲ್ ಪ್ರೊಸೆಸರ್‌ನೊಂದಿಗೆ OPPO Reno 12 Series ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಇದರ ಬಗ್ಗೆ ಕಂಪನಿ ಸ್ವತಃ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಸುದ್ದಿಯನ್ನು ಮೊದಲ ಬಾರಿಗೆ ಸ್ಟಾರ್‌ಲಿಂಕ್ ಮತ್ತು ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಅಥವಾ ಇದರ ಬೆಲೆ ಅಥವಾ ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಕಂಪನಿ ಇನ್ನೂ ನೀಡಿಲ್ಲ. ಆದರೆ ಇದನ್ನು ಒಂದೆರಡು ವರ್ಷಗಳಲ್ಲಿ ನಿರೀಕ್ಷಿಸಬಹುದು. ಅಲ್ಲದೆ ಈ ಸ್ಟಾರ್‌ಲಿಂಕ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವುದೇನೆಂದರೆ ಈ ಕೆಳಗೆ ಟ್ವಿಟ್ಟರ್ ಪರಿಶೀಲಿಸಬಹುದು.
ನ್ಯಾಷನಲ್ ಕಮ್ಯುನಿಟಿ ಅಥಾರಿಟಿ ಆಫ್ ಸಿಯೆರಾ ಲಿಯೋನ್ (NATCA) 2023 ರಿಂದ ಪ್ರಾರಂಭವಾಗುವ ಒಂದು ವರ್ಷದ ತಾಂತ್ರಿಕ ಮೌಲ್ಯಮಾಪನದ ನಂತರ ಸ್ಟಾರ್‌ಲಿಂಕ್‌ಗೆ ಪರವಾನಗಿಯನ್ನು ನೀಡಿದೆ. ದೇಶದ ಮುಖ್ಯಮಂತ್ರಿ ಡೇವಿಡ್ ಮೊಯಿನಿನಾ ಸೆಂಗಾ ಅವರು ಇದನ್ನು “ಸಾರ್ವತ್ರಿಕ ಸಂಪರ್ಕ ಮತ್ತು ಶಿಕ್ಷಣ ಪರಿವರ್ತನೆಯ ಸರ್ಕಾರದ ಗುರಿಯತ್ತ ಒಂದು ಪ್ರಮುಖ ಹೆಜ್ಜೆ” ಎಂದು ಬಣ್ಣಿಸಿದರು. ಕಳೆದ ವಾರವಷ್ಟೇ ಶ್ರೀಲಂಕಾದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭಿಸಲು ಅನುಮತಿ ನೀಡಲಾಗಿತ್ತು. ಈ ಉಡಾವಣೆಯು “ನಮ್ಮ ಸಂಪರ್ಕದಲ್ಲಿ ಕ್ರಾಂತಿಯನ್ನು ತರುತ್ತದೆ ವಿಶೇಷವಾಗಿ ನಮ್ಮ ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ” ಎಂದು ಅದರ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಗ್ ಹೇಳುತ್ತಾರೆ.
ಎಲೋನ್ ಮಸ್ಕ್ ಇಂಡೋನೇಷ್ಯಾ ಮತ್ತು ಫಿಜಿಯಲ್ಲಿ ಕಳೆದ ಮೇ ತಿಂಗಳ ಆರಂಭದಲ್ಲಿ ಸ್ಟಾರ್‌ಲಿಂಕ್ ಅನ್ನು ಪ್ರಾರಂಭಿಸಿದ್ದರು. ಸ್ಟಾರ್‌ಲಿಂಕ್‌ನ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗೆ ಯಾವುದೇ ದೀರ್ಘ ಒಪ್ಪಂದದ ಅಗತ್ಯವಿಲ್ಲ ಎಂದು ಎಲೋನ್ ಮಸ್ಕ್ ಹೇಳುತ್ತಾರೆ. ಇದನ್ನು “ಕೇವಲ 2 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಸುಲಭವಾಗಿ ಆರ್ಡರ್ ಮಾಡಬಹುದು” ಎಂದು ಅವರು ಹೇಳಿದರು. ಇಂಡೋನೇಷ್ಯಾದ ಆರೋಗ್ಯ ಕ್ಷೇತ್ರಕ್ಕಾಗಿ ಸ್ಪೇಸ್‌ಎಕ್ಸ್‌ನ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲಾಗಿದೆ. ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.