Zero1 Award 2019: ಅತ್ಯುತ್ತಮವಾದ ಬಜೆಟ್ ಕ್ಯಾಮೆರಾ ಸ್ಮಾರ್ಟ್ಫೋನ್

Zero1 Award 2019: ಅತ್ಯುತ್ತಮವಾದ ಬಜೆಟ್ ಕ್ಯಾಮೆರಾ ಸ್ಮಾರ್ಟ್ಫೋನ್

ಇಂದಿನ ಸ್ಮಾರ್ಟ್ಫೋನ್ಗಳಾದ Realme 5, Redmi Note 8, Motorola One Macro ಇನ್ನಷ್ಟು ಸ್ಮಾರ್ಟ್ಫೋನ್ಗಳು ಬಜೆಟ್ ವಿಭಾಗದಲ್ಲಿ ಹೆಚ್ಚು ಫೀಚರ್ಗಳೊಂದಿಗೆ ಇನ್ನು ಆಸಕ್ತಿದಾಯಕವಾಗಿ ಮಾಡಿವೆ. ಅದರಲ್ಲೂ ಮುಖ್ಯವಾಗಿ ಕ್ಯಾಮೆರಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಒಂದು ಪ್ರೀಮಿಯಂ ಪ್ರಾಡಕ್ಟ್ಗಳಲ್ಲಿ ಕ್ಯಾಮೆರಾ ತನ್ನದೆಯಾದ ವಿಶೇಷತೆಯನ್ನು ಹೊಂದಿರುತ್ತದೆ. ಇದರ ಆಟೋ ಫೋಕಸ್, ಶಾರ್ಪ್ನೆಸ್ ಜೊತೆಗೆ ಮತ್ತಷ್ಟು ಫೀಚರ್ಗಳನ್ನು ನೋಡಬೇಕಾಗುತ್ತದೆ. ಆದರೆ 2019 ರಲ್ಲಿ 48MP ಹೈಎಂಡ್ ಶ್ರೇಣಿಯಲ್ಲಿ ಮಾತ್ರವಲ್ಲದೆ ಅಲ್ಟ್ರಾವೈಡ್ ಕ್ಯಾಮೆರಾಗಳು ಕೇವಲ 10,000 ರೂಗಳಲ್ಲಿಯೂ ಬಿಡುಗಡೆಯಾಗಿವೆ.  ಅಲ್ಲದೆ ಕೆಲ ಫೋನ್ಗಳು ಈ ರೇಂಜಲ್ಲಿ ಪ್ರತ್ಯೇಕವಾದ ಮ್ಯಾಕ್ರೋ ಲೆನ್ಸ್ ಸಹ ನೀಡುತ್ತಿವೆ. ಆದ್ದರಿಂದ ನಾವು ಹಲವಾರು ಫೋನ್ಗಳನ್ನು ಟೆಸ್ಟ್ ಮಾಡಿ ಬಜೆಟ್ ಶ್ರೇಣಿಯಲ್ಲಿ ಬರುವ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳನ್ನು ನಿಮಗಾಗಿ ಪಟ್ಟಿ ಮಾಡಿದ್ದೇವೆ.

Winner
Xiaomi Redmi Note 8
Price: Rs 9,999

https://i01.appmifile.com/webfile/globalimg/products/pc/redmi-note-8/section-01_img.png

ಇದರ ಹಿಂದಿನ ಕ್ವಾಡ್-ಕ್ಯಾಮೆರಾ ಸೆಟಪ್ 48MP ಮೆಗಾಪಿಕ್ಸೆಲ್ f/ 1.79 ಅಪರ್ಚರ್ ಪಿಕ್ಸೆಲ್ ಬಿನ್ನಿಂಗ್ ಬಳಸಿ 16MP ಮೆಗಾಪಿಕ್ಸೆಲ್ ಶಾಟ್ಗಳನ್ನು ತೆಗೆದುಕೊಳ್ಳುತ್ತದೆ. ಮತ್ತು 4K ವಿಡಿಯೋ 30fps ಅಥವಾ 1080p 60fpsವರೆಗೆ ವೀಡಿಯೊವನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ. ಸೆಕೆಂಡರಿ 8MP ಮೆಗಾಪಿಕ್ಸೆಲ್ f/ 2.2 ವೈಡ್-ಆಂಗಲ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೊನೆಯದಾಗಿ 2MP  ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ನೀಡಲಾಗಿದೆ. ಇದರ ಪ್ರೈಮರಿ 48MP ಮೆಗಾಪಿಕ್ಸೆಲ್ ಕ್ಯಾಮೆರಾ ಉತ್ತಮ ವಿವರಗಳೊಂದಿಗೆ ಗರಿಗರಿಯಾದ ಮತ್ತು  ಬಣ್ಣಗಳೊಂದಿಗೆ ಉತ್ತಮವಾದ ಶಾಟ್ಗಳನ್ನು ನೀಡುತ್ತದೆ. ಕೆಲವು ಉತ್ತಮವಾದ ನೈಸರ್ಗಿಕ ಲುಕ್ ನೀಡಿದರೂ ವೀಡಿಯೊಗೆ ಸಂಬಂಧಿಸಿದಂತೆ 1080p ಯಲ್ಲಿ ಯೋಗ್ಯ ಗುಣಮಟ್ಟವನ್ನು ನೀಡುವಲ್ಲಿ ನಿರ್ವಹಿಸುತ್ತಿದೆ. ಆದರೆ ಇದರಲ್ಲಿನ ಕಲರ್ಗಳು 4k ಯಲ್ಲಿ ಅತಿಯಾಗಿ ಉಬ್ಬಿ ಬರುತ್ತದೆ.  ಇದು ಉಪಯುಕ್ತತೆಯನ್ನು ಸೀಮಿತಗೊಳಿಸುತ್ತದೆ. ರಾತ್ರಿ ಸಮಯದ ವೀಡಿಯೊ ಗುಣಮಟ್ಟ ಒಂದು ರಿಟಿಯಲ್ಲಿ ಸರಿ ಎನ್ನಬವುದು. ಇದರ 13MP ಮೆಗಾಪಿಕ್ಸೆಲ್ f/ 2 ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಹಿನ್ನೆಲೆಯಲ್ಲಿ ಗರಿಗರಿಯಾದ ನ್ಯಾಚುರಲ್ ಸ್ಕಿನ್ ಟೋನ್ ವಿನ್ಯಾಸವನ್ನು ಮೃದುಗೊಳಿಸಲಾಗಿದೆ. ಅದರಲ್ಲೂ  ರಾತ್ರಿಯಲ್ಲಿ ತೇಗದ ಸೆಲ್ಫಿಗಳು ನಿಜಕ್ಕೂ ಅದ್ದೂರಿಯಾಗಿ ಮೂಡಿ ಬಂದವು. ಇದರ ಸತ್ಯವನ್ನು ಹೇಳುವದಾದರೆ ಒಟ್ಟಾರೆಯಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲವಾದರೂ ಈ ಬಜೆಟಲ್ಲಿ ರೇರ್ ಕ್ಯಾಮೆರಾ  ಉತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುವಷ್ಟು ವಿಶ್ವಾಸಾರ್ಹವಾಗಿದೆ.

Runners Up
Realme 3 Pro
Price: Rs 9,999

https://www.moviru.com/wp-content/uploads/2019/05/Realme-3-Pro-moviru.jpg

ಈ Realme 3 Pro ಸ್ಮಾರ್ಟ್ಫೋನ್ 16MP ಮೆಗಾಪಿಕ್ಸೆಲ್ ಸೋನಿ IMX519 ಸೆನ್ಸರ್ ಜೊತೆಗೆ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಅದು f/ 1.7 ಅಪರ್ಚರ್ ನೀಡುತ್ತದೆ. ಇದರ ಸೆಕಂಡರಿ ಕ್ಯಾಮೆರಾ ಪೋಟ್ರೇಟ್ ಶಾಟ್ಗಳಿಗಾಗಿ 5MP ಜೊತೆಗೆ ಡೆಪ್ತ್ ಸೆನ್ಸರ್ ಈ ಫೋನಲ್ಲಿದೆ. ಇತರ ಎಲ್ಲ ಅಂಶಗಳಂತೆ ಇದರ ಕ್ಯಾಮೆರಾ ಸಹ ಸಾಕಷ್ಟು ಅದ್ದೂರಿಯ ಕೆಲಸವನ್ನು ಮಾಡುತ್ತದೆ. ಹಗಲು ಹೊತ್ತಿನಲ್ಲಿ ಕೆಲವು ಉತ್ತಮ ಚಿತ್ರಗಳನ್ನು ಕ್ಲಿಕ್ ಮಾಡಿ ವಸ್ತು ಮತ್ತು ಸ್ಥಳದ ಬಣ್ಣಗಳು ನಿಖರವಾಗಿ ನೀಡುತ್ತದೆ. ಮತ್ತು ಇಮೇಜ್ಗಳಲ್ಲಿ ಯಾವುದೇ ಸ್ಯಾಚುರೇಶನ್ ಅಷ್ಟೇನೂ ಇಲ್ಲ ಕೆಲವು ಪ್ರತಿಸ್ಪರ್ಧಿ ಬ್ರಾಂಡ್‌ಗಳ ಫೋನ್‌ Redmi Note 8 ಇದಕ್ಕಿಂತ ಸ್ವಲ್ಪ ಉತ್ತಮವಾಗಿದೆ. ಈ ಫೋನಲ್ಲಿ 25MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.  ಹಗಲು ಹೊತ್ತಿನಲ್ಲಿ ಉತ್ತಮವಾದ ಸೆಲ್ಫಿ ಚಿತ್ರಗಳನ್ನು ಕ್ಲಿಕ್ ಮಾಡುತ್ತದೆ. ಆದಾಗ್ಯೂ ಕಡಿಮೆ ಬೆಳಕಿನಳ್ಳಿ ಇದು ಅಷ್ಟಾಗಿ ಆಟವಾಡಿಲ್ಲ. ಫೋನ್‌ನ ಬೊಕೆ ಮೋಡ್‌ನಿಂದ ನಾವು ಪ್ರಭಾವಿತರಾಗಿಲ್ಲವಾದರೂ ಆಶ್ಚರ್ಯಕರವಾದ ಚಿತ್ರಗಳು ನಿಜವಾಗಿಯೂ ನ್ಯಾಚುರಲ್ ಲುಕ್ ಜೊತೆಗೆ ಕಾಣುತ್ತವೆ.

Best Buy
Realme 5
Price: 8,999

https://rukminim1.flixcart.com/image/416/416/k2jbyq80pkrrdj/mobile-refurbished/j/s/z/5-128-u-rmx1911-realme-4-original-imafjhk4dgftznfh.jpeg?q=70

ಈ Realme 5 ಸ್ಮಾರ್ಟ್ಫೋನ್ 5 ಸರಣಿಯೊಂದಿಗೆ ಬ್ಯಾಕ್ ಕ್ವಾಡ್ ಕ್ಯಾಮೆರಾಗಳನ್ನು ಪರಿಚಯಿಸಿದೆ. ಇದರಲ್ಲಿ 12MP+8MP+2MP+2MP ರೇರ್  ಸೆನ್ಸರ್ ಜೊತೆಗೆ ಬರುತ್ತದೆ. ಇದರ 12MP ಕ್ಯಾಮೆರಾ f/ 1.8 ರ ಅಪರ್ಚರ್ ನೀಡುತ್ತದೆ. ಇದರೊಂದಿಗೆ 8MP ವೈಡ್ ಆಂಗಲ್ ಫೀಲ್ಡ್-ಆಫ್ ವ್ಯೂ 2MP ಡೆಪ್ತ್ ಸೆನ್ಸಾರ್ ಮತ್ತೊಂದು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದರಲ್ಲಿ ಸೆಲ್ಫಿಗಾಗಿ 13MP ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿನ 119-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿದೆ. ಇದರ ಲೆನ್ಸ್ ಬಳಸಿಕೊಂಡು ಕೆಲವು ಉತ್ತಮ ವೈಡ್-ಆಂಗಲ್ ಫೋಟೋಗಳನ್ನು ಸೆರೆಹಿಡಿಯಲು  ಸಾಧ್ಯವಾಯಿತು. Realme 5 ತನ್ನ ಬೆಲೆ ವಿಭಾಗದಲ್ಲಿ ಮ್ಯಾಕ್ರೋ ಲೆನ್ಸ್‌ನೊಂದಿಗೆ ಬಂದ ಮೊದಲ ಫೋನ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಇದರ 2MP ಮ್ಯಾಕ್ರೋ ಲೆನ್ಸ್ ಉತ್ತಮ ಕ್ಲೋಸರ್ ಶಾಟ್ ಜೊತೆಗೆ ವಿವರಗಳನ್ನು ಸೆರೆಹಿಡಿಯಲು ಅನುಮತಿಸುತ್ತದೆ. ಇದರಲ್ಲಿ ಯಾವುದೇ ಆಟೋ ಫೋಕಸ್ ನೀಡಿಲ್ಲ ಇದರಿಂದಾಗಿ ಮ್ಯಾಕ್ರೋ ಲೆನ್ಸ್ ಬಳಸಿ ಫೋಟೋಗಳನ್ನು ಸೆರೆಹಿಡಿಯುವಾಗ ನೀವು ವಸ್ತುವಿನ ಮೇಲೆ ಕೇಂದ್ರೀಕರಿಸಲು ಸ್ವಲ್ಪ ಕಷ್ಟಪಡಬೇಕಾಗಬಹುದು. ಇದರಲ್ಲಿ ಪ್ರತ್ಯೇಕವಾಗಿ ನೈಟ್ ಮೋಡ್ ಇದ್ದರೂ ಫೋನ್ ಕಡಿಮೆ ಬೆಳಕಿನಳ್ಳಿ Redmi Note 8 ಅಥವಾ Realme 3 Pro ಫೋನ್ಗಳಂತೆ ಪ್ರಭಾವಿಯಾಗಿಲ್ಲ. ಇದರ ಚಿತ್ರಗಳಲ್ಲಿನ ತೀಕ್ಷ್ಣತೆ ಮತ್ತು ವಿವರಗಳನ್ನು ಅಷ್ಟಾಗಿ ಹೊಂದಿಲ್ಲವಾದರೂ ಒಂದು ರಿಟಿಯಲ್ಲಿ ಸರಿ ಎನ್ನಬುವುದು. ಇದರ ಮುಂಭಾಗದ ಕ್ಯಾಮೆರಾ 13MP ಸೆಲ್ಫಿ ಕ್ಯಾಮೆರಾವನ್ನು HDR ಮಾದರಿಯೊಂದಿಗೆ ಹೊಂದಿದೆ. ಫೋನ್ ಹಗಲು ಮತ್ತು ರಾತ್ರಿಯಲ್ಲಿ ಉತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡುತ್ತದೆ. ಕಡಿಮೆ ಬೆಳಕಿರುವ ಪ್ರದೇಶಗಳಿಗೆ ಬೆಳಕಿನ ಮೂಲವಾಗಿ LED ಫ್ಲ್ಯಾಷ್ ಬದಲಿಗೆ ಫೋನ್‌ನ ಸ್ಕ್ರೀನ್ ಪ್ರಕಾಶಮಾನವಾಗಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo