6.26 ಇಂಚಿನ HD+ ಡಿಸ್ಪ್ಲೇಯೊಂದಿಗಿನ Xiaomi Redmi Y3 ಇಂದು ಮಧ್ಯಾಹ್ನ ಮಾರಾಟಕ್ಕೆ ಬರಲಿದೆ

6.26 ಇಂಚಿನ HD+ ಡಿಸ್ಪ್ಲೇಯೊಂದಿಗಿನ Xiaomi Redmi Y3 ಇಂದು ಮಧ್ಯಾಹ್ನ ಮಾರಾಟಕ್ಕೆ ಬರಲಿದೆ
HIGHLIGHTS

12MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ f/ 2.2 ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಡೆಪ್ತ್ ಸೆನ್ಸರ್ ಒಳಗೊಂಡಿದೆ.

ಇದರ ಫ್ರಂಟಲ್ಲಿ f/ 2.25 ಅಪೆರ್ಚರ್ ಮತ್ತು EIS (Electronic Image Stabilization) ಬೆಂಬಲದೊಂದಿಗೆ 32MP ಕ್ಯಾಮೆರಾ ಒಳಗೊಂಡಿದೆ

ಚೀನಾದ ಈ Xiaomi ಬ್ರಾಂಡ್ ಹೊಸ ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ಫೋನ್ Redmi Y3 ಸ್ಮಾರ್ಟ್ಫೋನ್ ಇಂದು ಖರೀದಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುಂಚಿತವಾಗಿ ಪ್ರಯತ್ನಿಸಿದ ಕೆಲ ಫೋನ್ಗಳು ವಿಫಲವಾಗಿವೆ. ಆದರೆ ಇಂದು ತಮ್ಮ ಕೈಗಳನ್ನು ಈ ಹೊ ಸ ಸ್ಮಾರ್ಟ್ಫೋನ್ ಮೇಲೇರಿಸಬವುದು. ಅಂದ್ರೆ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಈ ಹೊಸ ಸೆಲ್ಫಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದಿದೆ. ಒಟ್ಟಾರೆಯಾಗಿ Xiaomi Redmi Y3 ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12ಕ್ಕೆ ಸೇಲ್ ನಡೆಯಲಲಿದ್ದು ಇದರ ಬೆಲೆ, ಮತ್ತು ಸ್ಪೆಸಿಫಿಕೇಷನ್ ಮಾಹಿತಿಯನ್ನು ಇಲ್ಲಿಂದ ನೋಡಿ ಇಷ್ಟವಾದರೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ. 

Xiaomi's Redmi Y3 ಬೆಲೆ ಮತ್ತು ಆಫರ್ಗಳು 

ಭಾರತದಲ್ಲಿ ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ ಅಮೆಜಾನ್ ಇಂಡಿಯಾ ಮೂಲಕ ಲಭ್ಯವಾಗುತ್ತದೆ. ಮತ್ತು Xiaomi ಯ mi.com. ಆಫ್ಲೈನ್ನಲ್ಲಿ ಖರೀದಿಸಲು ಆದ್ಯತೆ ನೀಡುವವರು ಹತ್ತಿರದ Mi ಹೋಮ್ ಸ್ಟೋರ್ಗೆ ಕೂಡಾ ಹೋಗಬಹುದು. ಈ ಫೋನ್ ಖರೀದಿದಾರರು ಎರಡು ಮಾರಾಟದ ಕೊಡುಗೆಗಳನ್ನು ಲಾಭ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಭಾರ್ತಿ ಏರ್ಟೆಲ್ 1120GB ಯ 4G ಡೇಟಾದ ಆಫರ್ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳು ಸಹ ಸೇರಿವೆ. ಖರೀದಿದಾರರಿಗೆ ಲಭ್ಯವಿರುವ ಬಣ್ಣದ  ಆಯ್ಕೆಗಳೆಂದರೆ ಬೋಲ್ಡ್ ರೆಡ್, ಎಲಿಗೆಂಟ್ ಬ್ಲೂ ಮತ್ತು ಪ್ರೈಮ್ ಬ್ಲಾಕ್ ಒಳಗೊಂಡಿದೆ.

Xiaomi's Redmi Y3 3GB RAM 32GB ಸ್ಟೋರೇಜ್ 9,999 ರೂಗಳು 

Xiaomi's Redmi Y3 4GB RAM 64GB ಸ್ಟೋರೇಜ್ 11999 ರೂಗಳು

Xiaomi's Redmi Y3 ಸ್ಪೆಸಿಫಿಕೇಷನ್ 

ಈ ಸ್ಮಾರ್ಟ್ಫೋನ್ 6.26 ಇಂಚಿನ HD+ ಡಿಸ್ಪ್ಲೇಯನ್ನು 19: 9 ಅಸ್ಪೆಟ್ ರೇಷು ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಅನ್ನು ಪ್ರೊಟೆಕ್ಷನ್ಗಾಗಿ ಬಳಸಲಾಗುತ್ತಿದೆ. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 632 ಆಕ್ಟಾ ಕೋರ್ ಚಿಪ್ಸೆಟ್ ನೀಡಲಾಗಿದ್ದು ಈ ಫೋನಲ್ಲಿ ನೀವು ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 32GB ಯ ಆರಂಭದ ಸ್ಟೋರೇಜ್ ರೂಪಾಂತರದೊಂದಿಗೆ 512GB ವರೆಗೆ ವಿಸ್ತರಿಸಬಹುದು.

ಈಗಾಗಲೇ ಮೇಲೆ ನಾವು ಉಲ್ಲೇಖಿಸಿದಂತೆ ಇದರ 'ಸೆಲ್ಫ್ ಕ್ಯಾಮೆರಾ' ಇದರ ಅತಿ ಮುಖ್ಯ ಪ್ರಮುಖ ಲಕ್ಷಣವಾಗಿದೆ. ಅದರ ಮುಂಭಾಗದಲ್ಲಿ f/ 2.25 ಅಪೆರ್ಚರ್ ಮತ್ತು EIS (Electronic Image Stabilization) ಬೆಂಬಲದೊಂದಿಗೆ 32MP ಮೆಗಾಪಿಕ್ಸೆಲ್ ಸ್ನ್ಯಾಪರ್ ಒಳಗೊಂಡಿದೆ. ಇದರ ಇತರ ಲಕ್ಷಣಗಳು ಆಟೋ HDR ಮತ್ತು AI ಪೋಟ್ರೇಟ್ ಮೋಡ್ ಸಹ ನೀಡಲಾಗಿದೆ. ಇದರ ಹಿಂಭಾಗದಲ್ಲಿ ಇದು ಡ್ಯುಯಲ್ ಕ್ಯಾಮೆರಾ ಸೆಟಪ್ನೊಂದಿಗೆ ಹೊಂದಿಕೊಳ್ಳುತ್ತದೆ. 12MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ f/ 2.2 ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಡೆಪ್ತ್ ಸೆನ್ಸರ್ ಒಳಗೊಂಡಿದೆ. 

ಇದರಲ್ಲಿ 4000mAh ಬ್ಯಾಟರಿಯೊಂದಿಗೆ ಧೀರ್ಘಕಾಲವನ್ನು ನಿಮಗೆ ನೀಡುತ್ತದೆಂದು ಖಚಿತಪಡಿಸಿದೆ. ಇದರ ಸೆಕ್ಯೂರಿಟಿ ಮೇರೆಗೆ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸೆನ್ಸರ್ ಕಾಳಜಿಯನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿನ ಕನೆಕ್ಷನ್ ಆಯ್ಕೆಗಳೆಂದರೆ 4G ವೋಲ್ಟಿ ಬೆಂಬಲ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಗಳು ವೈ-ಫೈ 802, ಬ್ಲೂಟೂತ್ 4.2, ಜಿಪಿಎಸ್ / ಎ-ಜಿಪಿಎಸ್, ಮೈಕ್ರೊ ಯುಎಸ್ಬಿ, IR ಬ್ಲಾಸ್ಟರ್ ಮತ್ತು 3.5mm ಆಡಿಯೋ ಜ್ಯಾಕ್. Xiaomi's Redmi Y3 ಸಾಫ್ಟ್ವೇರ್ ವಿಭಾಗದಲ್ಲಿ MIUI 10 ಆಧಾರಿತದೊಂದಿಗೆ  ಆಂಡ್ರಾಯ್ಡ್ 9 ಪೈ ಜೊತೆಗೆ ನಡೆಯುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo