ಚೀನೀ ಸ್ಮಾರ್ಟ್ಫೋನ್ ತಯಾರಕ ಮತ್ತು ಭಾರತದ ನಂಬರ್ 1 ಸ್ಮಾರ್ಟ್ಫೋನ್ ಮಾರಾಟಗಾರ Xiaomi ಸ್ಮಾರ್ಟ್ಫೋನ್ ಕಂಪನಿ ತನ್ನ ಕೆಲ ಬಳಕೆದಾರರಿಗೆ ಕಹಿ ಸುದ್ದಿಯನ್ನು ಘೋಷಿಸಿದೆ. ಅಂದ್ರೆ ಇವರ ಕೆಲವು ಸ್ಮಾರ್ಟ್ಫೋನ್ಗಳ ಅದರಲ್ಲೂ ಮುಖ್ಯವಾಗಿ ರೆಡ್ಮಿ ಸರಣಿಯಲ್ಲಿ MIUI ಯ ಇತ್ತೀಚಿನ ಅಂದ್ರೆ ಇನ್ಮುಂದೆ ಯಾವುದೇ ಹೊಸ ಅಪ್ಡೇಟ್ಗಳನ್ನು ಈ ಫೋನ್ಗಳು ಬರೋದಿಲ್ಲ. ಈ ಸ್ಮಾರ್ಟ್ಫೋನ್ MIUI 10 ವರೆಗಿನ ಅಪ್ಡೇಟ್ಗಳನ್ನು ಮಾತ್ರ ಪಡೆಯಬವುದು ಆದರೆ ಇದರ ಮುಂದಿನ ಅಂದ್ರೆ MIUI 11 ಅಪ್ಡೇಟ್ಗಳನ್ನು ಈ ಕೆಲ ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಾಗುವುದಿಲ್ಲವೆಂದು ಘೋಷಿಸಲಾಗಿದೆ. ಈ ಸ್ಮಾರ್ಟ್ಫೋನ್ಗಳು MIUI 11 ರ ಹೊರಗಿನ ಬೀಟಾ ಅಪ್ಡೇಟ್ ಅಥವಾ ಸ್ಟೇಟಸ್ ಅಪ್ಡೇಟ್ ರೋಲ್ ಆಗುವುದಿಲ್ಲ. ಇದರಿಂದಾಗಿ ಈ ಸ್ಮಾರ್ಟ್ಫೋನ್ಗಳ ಬಳಕೆದಾರರು ಇತ್ತೀಚಿನ ಸೆಕ್ಯೂರಿಟಿ ಫೀಚರ್ಗಳನ್ನು ಒಳಗೊಂಡಂತೆ ಯಾವುದೇ ಬೇರೆ ಹೊಸ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಪಡೆಯುವುದಿಲ್ಲ. ಈ ಪಟ್ಟಿಯಲ್ಲಿ ಯಾವ ಸ್ಮಾರ್ಟ್ಫೋನ್ಗಳು ಈ ಪಟ್ಟಿಗೆ ಸೇರಿವೆ ಎಂದು ನೋಡಬವುದು.
ಈ ಸ್ಮಾರ್ಟ್ಫೋನ್ ಅನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ಈ ಸ್ಮಾರ್ಟ್ಫೋನ್ ವೈಶಿಷ್ಟ್ಯಗಳ ಕುರಿತು ಮಾತನಾಡಬೇಕೆಂದರೆ ಇದು 5.5 ಇಂಚಿನ ಡಿಸ್ಪ್ಲೇ ಹೊಂದಿದೆ. ಅದರ ಪ್ರೊಸೆಸರ್ ಬಗ್ಗೆ ಹೇಳಬೇಕೆಂದರೆ ಮೆಡಿಯೇಟ್ ಹೆಲಿಯೊ ಎಕ್ಸ್ 10 ಆಕ್ಟಾಕ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಇದು 2GB + 16GB ಸ್ಟೋರೇಜ್ ಮತ್ತು 4000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿನ ಕ್ಯಾಮರಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡಬೇಕೆಂದರೆ ಇದು 16MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಮತ್ತು 8MP ಮೆಗಾಪಿಕ್ಸೆಲ್ ಸೆಲ್ಫ್ ಕ್ಯಾಮೆರಾವನ್ನು ಹೊಂದಿದೆ.
5.5 ಇಂಚಿನ ಪೂರ್ಣ ಎಚ್ಡಿ ಡಿಸ್ಪ್ಲೇಯೊಂದಿಗೆ ಈ ಸ್ಮಾರ್ಟ್ಫೋನ್ ಬರುತ್ತದೆ. ಇದರ ಸ್ಕ್ರೀನ್ ಪ್ರೊಟೆಕ್ಷನ್ಗಾಗಿ ಇದು 2.5 ಡಿ ಸರೌಂಡ್ ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ. ಈ ಫೋನಿನ ಪ್ರೊಸೆಸರ್ ಬಗ್ಗೆ ಮಾತನಾಡಬೇಕೆಂದರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ 2GB, 3GB ಮತ್ತು 4GBಗಳೊಂದಿಗಿನ RAM ಜೊತೆಗೆ ಬರುತ್ತದೆ. ಇದಲ್ಲದೆ ಫೋನ್ ಎರಡು ಸ್ಟೋರೇಜ್ ಆಯ್ಕೆಗಳನ್ನು 32GB ಮತ್ತು 64GB ಬರುತ್ತದೆ. ಫೋನ್ನ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ 13MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾವನ್ನು ಹೊಂದಿದೆ. ಫೋನ್ ಅನ್ನು ಪವರ್ ನೀಡಲು ಇದರಲ್ಲಿ 4100mAh ಬ್ಯಾಟರಿಯನ್ನು ಹೊಂದಿದೆ.
ಇದು ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಬರುವ ಬೆಸ್ಟ್ ಸ್ಮಾರ್ಟ್ಫೋನ್ ಆಗಿದ್ದು 5.45 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 2GB RAM + 32GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಬರುತ್ತದೆ. ಇದರ ಕ್ಯಾಮರಾ ವೈಶಿಷ್ಟ್ಯಗಳ ಬಗ್ಗೆ ಹೇಳಬೇಕೆಂದರೆ 13MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿಗಾಗಿ 5MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ ಆಂಡ್ರಾಯ್ಡ್ 8.1 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ಗೆ ಪವರ್ ನೀಡಲು 3000mAh ಬ್ಯಾಟರಿ ಹೊಂದಿದೆ. Xiaomi Redmi 6A ಮೆಡಿಯಾಟೆಕ್ ಹೆಲಿಯೊ A22 ಪ್ರೊಸೆಸರ್ ನೀಡಲಾಗಿದೆ.