Redmi Note 9 Pro ಸ್ಮಾರ್ಟ್ಫೋನ್ 48MP ಕ್ಯಾಮೆರಾ 5020mAh ಬ್ಯಾಟರಿದೊಂದಿಗೆ ಬಿಡುಗಡೆ

Redmi Note 9 Pro ಸ್ಮಾರ್ಟ್ಫೋನ್ 48MP ಕ್ಯಾಮೆರಾ 5020mAh ಬ್ಯಾಟರಿದೊಂದಿಗೆ ಬಿಡುಗಡೆ
HIGHLIGHTS

ಆದ್ದರಿಂದ ಈ ಫೋನ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ವಿವರಗಳನೊಮ್ಮೆ ಇಲ್ಲಿ ನೋಡ್ಕೊಂಡು ತಿಳಿಯದವರಿಗೆ ಶೇರ್ ಮಾಡಿ.

ಭಾರತದಲ್ಲಿ Xiaomi ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಿದ್ದು ಅದನ್ನು Redmi Note 9 Pro ಎಂದು ಹೆಸರಿಸಲಾಗಿದೆ. ಈ ಫೋನ್‌ನ ಆರಂಭಿಕ ಬೆಲೆ ಕೇವಲ 12,999 ರೂಗಳು. ಈ ಬೆಲೆ ಅದರ ಆರಂಭಿಕದ ವೆರಿಯಂಟ್ 4/6GB RAM ಮತ್ತು 64/128GB ಸ್ಟೋರೇಜ್ ಮಾತ್ರ ಆಗಿರುತ್ತದೆ. ಇದರೊಂದಿಗೆ  ಈ ಫೋನ್ ಅನೇಕ ವಿಶೇಷ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. ಇದು 5ನೇ ಜನರೇಷನ್ AI ಎಂಜಿನ್ ನ್ಯಾವಿಕ್ ಬೆಂಬಲದೊಂದಿಗೆ 48MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 5020mAh ಬ್ಯಾಟರಿಯನ್ನು ಒಳಗೊಂಡಿದೆ. ಆದ್ದರಿಂದ ಈ ಫೋನ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ವಿವರಗಳನೊಮ್ಮೆ ಇಲ್ಲಿ ನೋಡ್ಕೊಂಡು ತಿಳಿಯದವರಿಗೆ ಶೇರ್ ಮಾಡಿ.

ಇದರ ಸ್ಪೆಸಿಫಿಕೇಷನ್ ನೋಡುವುದಾದರೆ ಈ ಫೋನ್ 6.67 ಇಂಚಿನ ಸಿನಿಮೀಯ ಡಿಸ್ಪ್ಲೇಯನ್ನು 20: 9 ರ ಅನುಪಾತದೊಂದಿಗೆ ಹೊಂದಿದ್ದು  ಅರೋರಾ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಇಂಟರ್ ಸ್ಟೆಲ್ಲಾರ್ ಬ್ಲ್ಯಾಕ್ ಕಲರ್ ನಲ್ಲಿಯೂ ಖರೀದಿಸಬಹುದು. ಈ ಫೋನ್ ಸ್ಪ್ಲಾಶ್-ಪ್ರೂಫ್ ವಿನ್ಯಾಸವನ್ನು ಹೊಂದಿದೆ. ಇದನ್ನು P2i ನೊಂದಿಗೆ ರಕ್ಷಿಸಲಾಗಿದೆ. ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G ಪ್ರೊಸೆಸರ್ ಇದೆ. ಅಲ್ಲದೆ Z-Axis Vibration Motor ಅನ್ನು ಸಹ ನೀಡಲಾಗಿದೆ. ಫೋನ್‌ನಲ್ಲಿ ಗೇಮಿಂಗ್‌ಗಾಗಿ ಸ್ನಾಪ್‌ಡ್ರಾಗನ್ ಎಲೈಟ್ ಗೇಮಿಂಗ್ ವೈಶಿಷ್ಟ್ಯವನ್ನು ಸಹ ಲಭ್ಯಗೊಳಿಸಲಾಗಿದೆ. 6GB ವರೆಗೆ ಮತ್ತು 128GBGB UFS 2.1 ಸ್ಟೋರೇಜ್ ಸಹ ಲಭ್ಯಗೊಳಿಸಲಾಗಿದೆ. ಅದೇ ಸಮಯದಲ್ಲಿ 5ನೇ ಜನರೇಷನ್ AI ಎಂಜಿನ್ ನ್ಯಾವಿಕ್ ಬೆಂಬಲದೊಂದಿಗೆ ಬರುತ್ತದೆ. 

ಅದ್ರಲ್ಲಿ ಕ್ವಾಡ್ ರಿಯರ್ ಕ್ಯಾಮೆರಾವನ್ನು ಫೋನ್‌ನಲ್ಲಿ ನೀಡಲಾಗಿದೆ. ಇದರ ಪ್ರೈಮರಿ ಸೆನ್ಸರ್ 48MP ಮೆಗಾಪಿಕ್ಸೆಲ್‌ಗಳು. ಎರಡನೆಯದು 8MP  ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ. ಮೂರನೆಯದು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ. ಅದೇ ಸಮಯದಲ್ಲಿ ನಾಲ್ಕನೆಯದು 5MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ನೀಡಲಾಗಿದೆ. ಅದರ ಮುಂಭಾಗದ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಈ ಫೋನ್ 16MP ಮೆಗಾಪಿಕ್ಸೆಲ್ ಇನ್ ಡಿಸ್ಪ್ಲೇ ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ. ಫೋನ್ ಸೂಪರ್ ಸ್ಟೆಬಿಲೈಸೇಶನ್ ವೈಶಿಷ್ಟ್ಯವನ್ನು ಹೊಂದಿದೆ. ಫೋನ್‌ನಲ್ಲಿ ಪ್ರೊ ವಿಡಿಯೋ ಮೋಡ್ ಇದ್ದು ವಿಡಿಯೋಗ್ರಾಫರ್‌ಗಳು ತುಂಬಾ ಇಷ್ಟಪಡುತ್ತಾರೆ. ಫೋನ್ 5020mAh ಬ್ಯಾಟರಿಯನ್ನು ಹೊಂದಿದ್ದು ಅದು 18W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo