ಈಗಾಗಲೇ ಮೇಲೆ ನೀವು ಓದಿರುವಂತೆ ಭಾರತದಲ್ಲಿ 48MP ಕ್ಯಾಮೆರಾದೊಂದಿಗೆ Redmi Note 7S ಇಂದು ಮಧ್ಯಾಹ್ನ 12ಕ್ಕೆ ಬಿಡುಗಡೆಯಾಗಲಿದೆ. Xiaomi ಕಂಪನಿ ವತಿಯಿಂದ ಇತ್ತೀಚಿನ 48MP ಮೆಗಾಪಿಕ್ಸೆಲ್ ಒಳಗೊಂಡಿರುವ ಮತ್ತೊಂದು ಅದ್ದೂರಿಯ ಸ್ಮಾರ್ಟ್ಫೋನ್ ಆಗಿದೆ. ಇದು ಈಗಾಗಲೇ ಚೀನಾ ಎಲೆಕ್ಟ್ರಾನಿಕ್ಸ್ ಕಂಪೆನಿ ಕಳೆದ ವಾರವೇ ಈ Redmi Note 7S ಸ್ಮಾರ್ಟ್ಫೋನ್ ಭಾರತದ ಬಿಡುಗಡೆಗೆ ಹಾಜರಾಗುವಂತೆ ಆಮಂತ್ರಣ ನೀಡಿತ್ತು. ಮತ್ತು ಇಂದು ಅಂದ್ರೆ ಸೋಮವಾರ ಮಧ್ಯಾಹ್ನ 12ಕ್ಕೆ ಅನಾವರಣಗೊಳ್ಳಲಿದೆ. ಇಲ್ಲಿಯವರೆಗೆ ನಾವು ನೀವೆಲ್ಲಾ Redmi Note 7Sಸ್ಮಾರ್ಟ್ಫೋನಲ್ಲಿ ಬರುವ 48MP ಮೆಗಾಪಿಕ್ಸೆಲ್ ಕ್ಯಾಮೆರಾದ ಬಗ್ಗೆ ತಿಳಿದೇ ಇದ್ದೇವೆ.
ಅದರೊಂದಿಗೆ Xiaomi ಇಂಡಿಯಾ ಮುಖ್ಯಸ್ಥರಾದ ಮನುಕುಮಾರ್ ಜೈನ್ ಸಹ ಈ ಫೋನ್ ಅನ್ನು ಹಿಡಿದಿರುವ ಟೀಯರ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮರಾ ಸೆಟಪ್ನಲ್ಲಿ ಪ್ರೈಮರಿ ಸೆನ್ಸರ್ ಜೊತೆಗೆ ಬರಬವುದು. ಅವರ ಕೈಯಲ್ಲಿನ ಟೀಸರ್ ಫೋಟೋದಲ್ಲಿ ಒಂದು ಕೆಂಪು ಬಣ್ಣದ ರೂಪಾಂತರವನ್ನು ದೃಢೀಕರಿಸಿದ್ದಾರೆ. ಅಲ್ಲದೆ ಈಗಾಗಲೇ ಫ್ಲಿಪ್ಕಾರ್ಟ್ ಮೂಲಕ ಇದರ ಲ್ಯಾಂಡಿಂಗ್ ಪೇಜ್ ಸಹ ರಚಿತವಾಗಿದೆ.
ಈ ಸ್ಮಾರ್ಟ್ಫೋನಿನ ಲೈವ್ ಸ್ಟ್ರೀಮಿಂಗ್ ಸಹ ನಡೆಯಲಿದ್ದು ಇದನ್ನು ನೀವು ಕಂಪನಿಯ ವೆಬ್ಸೈಟ್ ಆಗಿರುವ Mi.com ನಲ್ಲಿ ನೋಡಬವುದು.ಇದರ ಲೈವ್ ಸ್ಟ್ರೀಮ್ ಸಮಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಈ Redmi Note 7S ಕಂಪೆನಿಯು ಟೀಸರ್ ಸರಣಿಯ ಭಾಗವಾಗಿದೆ. Xiaomi ಮೊದಲಿಗೆ Redmi Note 7S ಸ್ಮಾರ್ಟ್ಫೋನ್ 48MP ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದುತ್ತದೆ ಎಂದು ಲೇವಡಿ ಮಾಡಿದ್ದರು. ನಂತರ ಇದನ್ನು ಡ್ಯುಯಲ್ ಹಿಂಭಾಗದ ಕ್ಯಾಮೆರಾ ಸೆಟಪ್ ಜೊತೆಗೆ ಇದರ ಹಿಂಭಾಗದ ಫಿಂಗರ್ಪ್ರಿಂಟ್ ಸಂವೇದಕ ಜೊತೆಗೆ ಬರುತ್ತದೆ. ಮತ್ತು ಕಂಪನಿಯ ಇಂಡಿಯಾ ಮುಖ್ಯಸ್ಥರನ್ನು ಒಳಗೊಂಡಿರುವ ಒಂದು ಫೋಟೋದಲ್ಲಿ ಕೆಂಪು ಬಣ್ಣದ ರೂಪಾಂತರದ ದೃಢೀಕರಣವು ಅನುಸರಿಸಿತು.
ಇದರ ಅಂತಿಮವಾಗಿ ಕ್ಯಾಮೆರಾ ಮಾದರಿಗಳ ಬಗ್ಗೆ ಕಂಪೆನಿಯು ಹಂಚಿಕೊಂಡಿತ್ತು ಇದರಲ್ಲಿ ವಿವರವಾದ ಡೇ ಲೈಟ್ ಶಾಟ್ಗಳು, ಪೋಟ್ರೇಟ್ ಮೋಡ್ ಅನ್ನು ಸೆಲ್ಫ್ ಕ್ಯಾಮೆರಾಗಾಗಿ ಆಳವಾದ ಕ್ಷೇತ್ರದ ಬೊಕೆ ಎಫೆಕ್ಟ್ಗಳ ಜೊತೆಗೆ ಅದ್ಭುತ ಲೊ ಲೈಟ್ ಶಾಟ್ಗಳಿಗೂ ಅದ್ದೂರಿಯಾಗಿ ನಡೆಯುವ ನಿರೀಕ್ಷೇಯಿದೆ. ಅಲ್ಲದೆ ಈವರೆಗೆ ಈ ಹೊಸ ಸ್ಮಾರ್ಟ್ಫೋನಿನ ಲಭ್ಯತೆಯ ದಿನಾಂಕ ಅಥವಾ ಇದರ ಬೆಳೆಯನ್ನು ಇನ್ನು ಯಾವುದೇ ರೀತಿಯಲ್ಲಿ ಬಹಿರಂಗಪಡಿಸಿಲ್ಲ. ಈ ಎಲ್ಲ ಮಾಹಿತಿಗಾಗಿ ನೀವು ನಮ್ಮೊಂದಿಗೆ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ಏಕೆಂದರೆ ಡಿಜಿಟ್ ಕನ್ನಡ ಇದರ ಲೈವ್ ಅಪ್ಡೇಟ್ ಜೊತೆಗೆ ನಿಮಗೆ ಸಂಪೂರ್ಣವಾದ ಮಾಘಿತಿಯನ್ನು ನೀಡಲಿದ್ದೇವೆ.