ಭಾರತದಲ್ಲಿ Xiaomi Redmi Note 7 ಸ್ಮಾರ್ಟ್ಫೋನನ್ನು 48MP ಕ್ಯಾಮೆರಾ ಮತ್ತು 4000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.
6.5 ಇಂಚಿನ ಪೂರ್ಣ HD+ ವಾಟರ್ಡ್ರಾಪ್ ನಾಚ್ ವಿನ್ಯಾಸದೊಂದಿಗೆ 19.5: 9 ಆಕಾರ ಅನುಪಾತದ ಡಿಸ್ಪ್ಲೇಯನ್ನು ಹೊಂದಿದೆ.
ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಈಗ ಹೊಸ Xiaomi Redmi Note 7 ಬಿಡುಗಡೆ ಮಾಡಿದೆ. ಈ ಫೋನ್ ರೆಡ್ಮಿಯ ಪ್ರತ್ಯೇಕ ಉಪ ಬ್ರಾಂಡ್ ಆದ ನಂತರ ಪರಿಚಯಿಸಲ್ಪಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದೆ. ಇದೀಗ ಇದು ಚೀನಾದಲ್ಲಿ ಬಿಡುಗಡೆಯಾಗಿದ್ದು ಇದು ಭಾರತದಲ್ಲಿ ಬಿಡುಗಡೆಯಾದಾಗ ಈ ಸಮಯದಲ್ಲಿ ತಿಳಿಸಲಾಗುವುದಿಲ್ಲ.
ಈ Xiaomi Redmi Note 7 ಸ್ಮಾರ್ಟ್ಫೋನನ್ನು ಚೀನಾದಲ್ಲಿ ಕೇವಲ 999 ಯುವಾನ್ ಆರಂಭಿಕ ದರದಲ್ಲಿ ಅಂದರೆ ಭಾರತದಲ್ಲಿ ಸುಮಾರು 10,300 ರೂಪಾಯಿಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ Xiaomi Redmi Note 7 ಒಟ್ಟು ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗುತ್ತದೆ. ಅದರ 3GB ಯ RAM ಮತ್ತು 32GB ಯ ಸ್ಟೋರೇಜ್ ರೂಪಾಂತರದ ಬೆಲೆ 999 ಚೈನೀಸ್ ಯುವಾನ್ ಅಂದರೆ ಸುಮಾರು 10,300ರೂಗಳು.
ಅದೇ ಸಮಯದಲ್ಲಿ ಅದರ 4GB ಯ RAM ಮತ್ತು 64GB ಯ ಸ್ಟೋರೇಜ್ ರೂಪಾಂತರ ಸುಮಾರು 12,400 ರೂಗಳು ಇದಲ್ಲದೆ 6GB ಯ RAM ಮತ್ತು 64GB ಯ ರೂಪಾಂತರಗಳ ಬೆಲೆ 1399 ಚೀನೀಯ ಯುವಾನ್ ಅಂದರೆ ಸುಮಾರು 14,500 ರೂ. ಇದನ್ನು ಟ್ವಿಲೈಟ್ ಗೋಲ್ಡ್, ಫ್ಯಾನ್ಸಿ ಬ್ಲೂ ಮತ್ತು ಬ್ರೈಟ್ ಬ್ಲಾಕ್ ಕಲರ್ ರೂಪಾಂತರಗಳಲ್ಲಿ ಖರೀದಿಸಬಹುದು. ಈ Xiaomi Redmi Note 7 ಸ್ಮಾರ್ಟ್ಫೋನ್ ಚೀನಾದಲ್ಲಿ ಜನವರಿ 15 ರಿಂದ ಲಭ್ಯವಾಗುತ್ತದೆ.
ಇದು 6.5 ಇಂಚಿನ ಪೂರ್ಣ HD+ ವಾಟರ್ಡ್ರಾಪ್ ನಾಚ್ ವಿನ್ಯಾಸದೊಂದಿಗೆ 19.5: 9 ಆಕಾರ ಅನುಪಾತದ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನನ್ನು ಕ್ವಾಲ್ಕಾಮ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 ಸೋಕ್ ಆಡ್ರಿನೊ 512 ಜಿಪಿಯು ಜೊತೆಗೂಡಿಸಿದ್ದು ಮೈಕ್ರೊ ಎಸ್ಡಿ ಮೂಲಕ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 8.1 Oreo ಮೇಲೆ MIUI ನೊಂದಿಗೆ ಚಾಲನೆಯಾಗುತ್ತದೆ. ಇದು ಡ್ಯುಯಲ್ ಸಿಮ್ ಸಂಪರ್ಕದೊಂದಿಗೆ ಬರುತ್ತದೆ.
ಆಪ್ಟಿಕ್ಸ್ಗಾಗಿ f/ 1.8 ಅಪೆರ್ಚರೊಂದಿಗೆ 48MP ಮೆಗಾಪಿಕ್ಸೆಲ್ ಇನ್ಸೋರ್ ಮತ್ತು LED ಫ್ಲ್ಯಾಷ್ನೊಂದಿಗೆ 5MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಸೇರಿದಂತೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ Xiaomi ರೆಡ್ಮಿ ನೋಟ್ 7 ಬರುತ್ತದೆ. ಫ್ರಂಟಲ್ಲಿ f/ 2.0 ಅಪೆರ್ಚರೊಂದಿಗೆ ಆಟೋಫೋಕಸ್, AI ಸೌಂದರ್ಯ ಮತ್ತು ಹೆಚ್ಚಿನ 13MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಹಿಂಬದಿಯ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್, 3.5mm ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ ಟೈಪ್-ಸಿ ಬೆಂಬಲದೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile