ಭಾರತದಲ್ಲಿ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಮತ್ತೊಂದು ಆಫರನ್ನು ಘೋಷಿಸಿದೆ. ಭಾರತದಲ್ಲಿ ನೆನ್ನೆ ಅದರ Xiaomi Mi A2 ಸ್ಮಾರ್ಟ್ಫೋನಿನ ಮೇಲೆ ಬೆಲೆ ಕಡಿತ ನೀಡಿತ್ತು. ಇಂದು ಈಗ ಕಂಪನಿಯು ಶಾಶ್ವತವಾಗಿ ಅದರ ಮತ್ತೊಂದು ಅದ್ದೂರಿಯ ಸ್ಮಾರ್ಟ್ಪ್[ಸ್ಮಾರ್ಟ್ಫೋನ್ ಆಗಿರುವ Xiaomi Redmi Note 5 Pro ಸ್ಮಾರ್ಟ್ಫೋನಿನ ಮೇಲೆ ಪೂರ್ತಿಯಾಗಿ 2000 ರೂಪಾಯಿಗಳವರೆಗೆ ಕಡಿಮೆ ಮಾಡಿದೆ.
ಈ Xiaomi Redmi Note 5 Pro ಸ್ಮಾರ್ಟ್ಫೋನ್ ಈಗ ಫ್ಲಿಪ್ಕಾರ್ಟ್, ಅಮೆಜಾನ್, Mi.com ಮತ್ತು ಆಫ್ಲೈನ್ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಂದ್ರೆ ಈ ಫೋನ್ 4GB ಯ RAM ಮತ್ತು 64GGB ಯ ಸ್ಟೋರೇಜ್ ರೂಪಾಂತರ ಈಗ ಕೇವಲ 12,999 ರೂಪಾಯಿಗಳಲ್ಲಿ ಲಭ್ಯವಿದೆ. ಅಲ್ಲದೆ ಇದರ 6GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರ ಕೇವಲ 13,999 ರೂಪಾಯಿಗಳಲ್ಲಿ ಲಭ್ಯವಿದೆ.
ಈ ಫೋನ್ ಕಳೆದ ಎರಡು ತಿಂಗಳಲ್ಲಿ ಇಂದು ಎರಡನೇ ಬಾರಿ ತನ್ನ ನೈಜ ಬೆಲೆಯನ್ನು ಕಡಿತಗೊಳಿಸಿರುವುದು ಪರಿಣಿಸಬೇಕಾಗಿದೆ. ಕಳೆದ ನವೆಂಬರ್ನಲ್ಲಿ ಸುಮಾರು 1000 ರೂಗಳ ಬೆಲೆಯ ನಂತರ ಸ್ಮಾರ್ಟ್ಫೋನ್ ಬೆಲೆ ಕ್ರಮವಾಗಿ 4GB/6GB ಯ ಫೋನ್ಗಳು 13,999 ಮತ್ತು 15,999 ರೂಪಾಯಿಗಳಿಗೆ ಇಳಿದಿತ್ತು. ಆದರೆ Xiaomi Redmi Note 5 Pro ಅನ್ನು ಮೂಲತಃ ಎರಡು ರೂಪಾಂತರಗಳ ಪ್ರಾರಂಭದ ಬೆಲೆ 4GB + 64GB ಮತ್ತು 6GB + 64GB ರೂ 14,999 ಮತ್ತು 16,999 ರೂಗಳಾಗಿತ್ತು.
ಇದರ ಮೊದಲ ವಿಶೇಷಣವೆಂದರೆ ಇದರ ಹಾರ್ಡ್ವೇರ್. ಈ ಸ್ಮಾರ್ಟ್ಫೋನ್ ಸುಮಾರು 5.99 ಇಂಚಿನ Full HD+ ಡಿಸ್ಪ್ಲೇಯನ್ನು ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಚಿಪ್ಸೆಟ್ನಿಂದ ಉತ್ತೇಜಿಸುತ್ತದೆ. ಈ ಸ್ಮಾರ್ಟ್ಫೋನ್ 4GB / 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜಿನೊಂದಿಗೆ ಬರುತ್ತದೆ. ಇದು ನಿಮಗೆ ಪೂರ್ತಿ 12MP ಪ್ರೈಮರಿ ಸೆನ್ಸಾರ್ ಮತ್ತು 5MP ಯಾ ಸೆಕೆಂಡರಿ ಸಂವೇದಕದ ಡ್ಯೂಯಲ್ ಕ್ಯಾಮರಾ ಸೆಟಪನ್ನು ಹಿಂಭಾಗದಲ್ಲಿ ಒದಗಿಸುತ್ತದೆ.
ಇದರ ಜೋತೆಗೆ ಇದರ ಫ್ರಂಟಲ್ಲಿ 20MP ಸೆಲ್ಫ್ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. ಈ ಫೋನ್ Android 8.1 Oreo ಆಧಾರಿತ MIUI 9.5 ಅನ್ನು ಹೊಂದಿದೆ. ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ. Xiaomi ಇಂದು MIUI ಜೋತೆಯಲ್ಲಿ ಈ ಹೊಸ Redmi Note 5 Pro ರಲ್ಲಿ ಹೊಸದಾಗಿ ನೈಟ್ಲಿ ನಿರ್ಮಾಣ ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ.