ಭಾರತದಲ್ಲಿ ರೆಡ್ಮಿ (Redmi) ಅತಿ ಕಡಿಮೆ ಬೆಲೆಗೆ ತನ್ನ ಲೇಟೆಸ್ಟ್ Redmi A4 5G ಸ್ಮಾರ್ಟ್‌ಫೋನ್ ಅನ್ನು ಇಂದು 20ನೇ ನವೆಂಬರ್ 2024 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ನೀವೊಂದು ಕಾಡಿಲೇ ಬಜೆಟ್ ಒಳಗೆ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಇದೊಂದು ಒಳ್ಳೆ ಅವಕಾಶವಾಗಲಿದೆ. Redmi ತನ್ನ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ Redmi A4 5G ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು ಇದರ ಮಾರಾಟವನ್ನು 27ನೇ ನವೆಂಬರ್ನಿಂದ ಆರಂಭಿಸಲಿದೆ.
ಈ ಲೇಟೆಸ್ಟ್ Redmi A4 5G ಸ್ಮಾರ್ಟ್‌ಫೋನ್ ಬೆಲೆಯನ್ನು ಕೇವಲ 8,500 ರೂಗಳಿಗಿಂತ ಕಡಿಮೆ ಬೆಲೆಗೆ ಪರಿಚಯಿಸಿದ್ದು ಈ ಫೋನ್‌ನಲ್ಲಿ ಹೆಚ್ಚಿನ ವಿಶೇಷತೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಅಧಿಕೃತ ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ಫೋನ್ 8GB RAM, ದೊಡ್ಡ 5160 mAh ಬ್ಯಾಟರಿ ಮತ್ತು ಪವರ್ಫುಲ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿರುವುದು ವಿಶೇಷ. ಈ ಫೋನ್ ವಿಭಾಗದಲ್ಲಿ ಅತಿ ದೊಡ್ಡ ಮತ್ತು ನಯವಾದ ಡಿಸ್‌ಪ್ಲೇಯನ್ನು ಹೊಂದಿದೆ.
Also Read: ಅತಿ ಕಡಿಮೆ ಬೆಲೆಗೆ 160 ದಿನಗಳ ವ್ಯಾಲಿಡಿಟಿಯ ಜಬರ್ದಸ್ತ್ ಆಫರ್ ನೀಡುತ್ತಿರುವ BSNL ಪ್ಲಾನ್!
ಈ ಲೇಟೆಸ್ಟ್ ಫೋನ್ ಆರಂಭಿಕ ಬೆಲೆ 8,500 ರೂಗಿಂತ ಕಡಿಮೆಯಿದೆ. ವಾಸ್ತವವಾಗಿ ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 8,499 ರೂಗಳಾದರೆ ಇದರ ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 9,499 ರೂಗಳಾಗಿವೆ.
ಈ ಫೋನ್ ಮೊದಲ ಮಾರಾಟವು 27ನೇ ನವೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ. Redmi A4 5G ಸ್ಮಾರ್ಟ್‌ಫೋನ್ ಸ್ಟಾರ್ರಿ ಬ್ಲ್ಯಾಕ್ ಮತ್ತು ಸ್ಪಾರ್ಕಲ್ ಪರ್ಪಲ್ ಎಂಬ ಎರಡು ಬಣ್ಣದ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ 1,999 ರೂಪಾಯಿ ಮೌಲ್ಯದ 33W ಚಾರ್ಜರ್ ಅನ್ನು ಫೋನ್ ಬಾಕ್ಸ್‌ನಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಈ ಫೋನ್ 6.88 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು 120 Hz ರಿಫ್ರೆಶ್ ರೇಟ್ ಹೊಂದಿದೆ. ಇದು 600 ನಿಟ್‌ಗಳ ಹೊಳಪನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹೊಂದಿರುವ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ಪ್ರೀಮಿಯಂ ಹಲೋ ಗ್ಲಾಸ್ ಸ್ಯಾಂಡ್‌ವಿಚ್ ವಿನ್ಯಾಸದೊಂದಿಗೆ ಬರುತ್ತದೆ. ಇದು HyperOS ಆಧಾರಿತ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 2 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಭದ್ರತಾ ಅಪ್ಡೇಟ್ ಪಡೆಯಲಿದೆ.
4nm Snapdragon 4s Gen 2 5G ಪ್ರೊಸೆಸರ್ ಹೊಂದಿರುವ ಈ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ಒಟ್ಟಾರೆಯಾಗಿ 8GB RAM (4GB+4GB ವರ್ಚುವಲ್) ಹೊಂದಿದೆ. ಇದರೊಂದಿಗೆ ಸುಮಾರು 128GB ಸ್ಟೋರೇಜ್ ಅನ್ನು ಸಹ ಹೊಂದಿರುತ್ತದೆ. ಅಮೆಜಾನ್‌ನ ಅತ್ಯುತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ನೋಡಲು ಮೈಕ್ರೋ ಎಸ್‌ಡಿ ಕಾರ್ಡ್‌ನ ಸಹಾಯದಿಂದ ಸ್ಟೋರೇಜ್ ಅನ್ನು 1TB ವರೆಗೆ ವಿಸ್ತರಿಸಬಹುದು.
ಫೋನ್ 50MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ ಫೋನ್ 5MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ ಟೈಪ್-ಸಿ ಪೋರ್ಟ್ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಫೋನ್ ಧೂಳು ಮತ್ತು ನೀರಿನಿಂದ ಸುರಕ್ಷಿತವಾಗಿರಲು IP54 ರೇಟಿಂಗ್‌ನೊಂದಿಗೆ ಬರುತ್ತದೆ. ಫೋನ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವೂ ಲಭ್ಯವಿದೆ.