5,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾದ Redmi 9 ಸ್ಮಾರ್ಟ್ಫೋನ್ ಬೆಲೆ 8,999 ರೂಗಳು, ಇಂದಿನಿಂದ ಮಾರಾಟ ಶುರು

Updated on 31-Aug-2020
HIGHLIGHTS

Redmi 9 ಸ್ಮಾರ್ಟ್‌ಫೋನ್ 6.53 ಇಂಚಿನ HD+ ಡಿಸ್ಪ್ಲೇ ಮತ್ತು 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಒಳಗೊಂಡಿದೆ.

ಇಂದು ಮಧ್ಯಾಹ್ನ 12 ಗಂಟೆಗೆ Redmi 9 ಅಮೆಜಾನ್ ಇಂಡಿಯಾ ವೆಬ್‌ಸೈಟ್ ಹೊರತುಪಡಿಸಿ ಗ್ರಾಹಕರು ಇದನ್ನು ಮಿ.ಕಾಂನಿಂದ ಖರೀದಿಸಲು ಸಾಧ್ಯವಾಗುತ್ತದೆ.

Redmi 9 ಸ್ಮಾರ್ಟ್ಫೋನ್ 4GB RAM + 64GB ಸ್ಟೋರೇಜ್ ಮತ್ತೊಂದು 4GB RAM + 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯ

ಇಂದು ಹೊಸ Xiaomi Redmi 9 ಸ್ಮಾರ್ಟ್‌ಫೋನ್ ಅನ್ನು ಇಂದು ಮೊದಲ ಬಾರಿಗೆ ಮಾರಾಟಕ್ಕೆ ಪರಿಚಯಿಸಲಾಗಿದೆ. ಫೋನ್ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್ ಹೊರತುಪಡಿಸಿ ಗ್ರಾಹಕರು ಇದನ್ನು ಮಿ.ಕಾಂನಿಂದ ಖರೀದಿಸಲು ಸಾಧ್ಯವಾಗುತ್ತದೆ. ಫೋನ್ ಖರೀದಿಯಲ್ಲಿ ರಿಯಾಯಿತಿಗಳು ಸೇರಿದಂತೆ ಇನ್ನೂ ಅನೇಕ ಕೊಡುಗೆಗಳಿವೆ. ಈ ಸ್ಮಾರ್ಟ್‌ಫೋನ್ ಸ್ಪೋರ್ಟಿ ಒರೆಂಜ್, ಸ್ಕೈ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. Redmi 9 ಸ್ಮಾರ್ಟ್‌ಫೋನ್ ಬಿಡುಗಡೆ ಆಗಸ್ಟ್ 27 ರಂದು ಬಿಡುಗಡೆಗೊಳಿಸಲಾಯಿತು.

Xiaomi Redmi 9 ಬೆಲೆ ಮತ್ತು ಕೊಡುಗೆಗಳು

Redmi 9 ಸ್ಮಾರ್ಟ್ಫೋನ್ 4GB RAM + 64GB ಸ್ಟೋರೇಜ್ ಮತ್ತೊಂದು 4GB RAM + 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದ್ದು ಇವುಗಳ ಬೆಲೆ ಕ್ರಮವಾಗಿ 8,999 ರೂಗಳು ಮತ್ತು 9,999 ರೂಗಳಾಗಿವೆ. ಈ ಸ್ಮಾರ್ಟ್‌ಫೋನ್ ಸ್ಪೋರ್ಟಿ ಕಿತ್ತಳೆ, ಸ್ಕೈ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ನಲ್ಲಿ EMI ವಹಿವಾಟಿನಲ್ಲಿ 5% ರಿಂದ ಗರಿಷ್ಠ 1500 ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ. ಎಚ್‌ಎಸ್‌ಬಿಸಿ ಕ್ಯಾಶ್‌ಬ್ಯಾಕ್ ಕಾರ್ಡ್‌ನಲ್ಲಿ 5% ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ 1000 ರೂಪಾಯಿಗಳ ಇಎಂಐನಲ್ಲಿ ಫೋನ್ ಖರೀದಿಸುವ ಆಯ್ಕೆ ಇರುತ್ತದೆ.

Xiaomi Redmi 9 ಸಂಪೂರ್ಣ ವಿವರಣೆ

ಈ Redmi 9 ಸ್ಮಾರ್ಟ್‌ಫೋನ್ 6.53 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 2.3GHz ಜೊತೆಗೆ Mediatek Helio G35 ಪ್ರೊಸೆಸರ್ ನೀಡಲಾಗಿದೆ. SD ಕಾರ್ಡ್ ಸಹಾಯದಿಂದ ಇದರ ಆಂತರಿಕ ಸಂಗ್ರಹಣೆಯನ್ನು 512GB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು. ಅದೇ ಸಮಯದಲ್ಲಿ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಬಳಕೆದಾರರು ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆಯುತ್ತಾರೆ. ಇದರಲ್ಲಿ ಮೊದಲನೆಯದು 13MP ಪ್ರೈಮರಿ ಸೆನ್ಸರ್ ಮತ್ತು ಎರಡನೆಯದು 2MP ಸಂವೇದಕವಾಗಿದೆ. ಅಲ್ಲದೆ ಈ ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5MP ಕ್ಯಾಮೆರಾವನ್ನು ನೀಡಲಾಗಿದೆ.

 

Xiaomi ಕಂಪನಿಯು ಈ Redmi 9 ಸ್ಮಾರ್ಟ್‌ಫೋನ್‌ನಲ್ಲಿ 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ನೀಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ಕನೆಕ್ಟಿವಿಟಿ ವೈಶಿಷ್ಟ್ಯಗಳಾದ 4G ವೋಲ್ಟಿಇ, ವೈ-ಫೈ, ಜಿಪಿಎಸ್, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಒದಗಿಸಲಾಗಿದೆ. ಒಟ್ಟಾರೆಯಾಗಿ ಧೀರ್ಘಕಾಲದ ಬ್ಯಾಟರಿಯೊಂದಿಗೆ ಅತ್ಯುತ್ತಮ ಡಿಸ್ಪ್ಲೇಯನ್ನು ಕೇವಲ 9,000 ರೂಗಳ ಬಜೆಟ್ ಒಳಗೆ ಹುಡುಕುತ್ತಿದ್ದರೆ ಇದೊಂದು ಸೂಕ್ತವಾದ ಆಯ್ಕೆ ನಿಮಗಾಗಲಿದೆ. ಈ ಸ್ಮಾರ್ಟ್ಫೋನ್ ಖರೀದಿಸಲು ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆಯಲು Xiaomi Redmi 9 ಬೆಲೆ ಮತ್ತು ಕೊಡುಗೆಗಳು ಅಥವಾ Xiaomi Redmi 9 ಸಂಪೂರ್ಣ ವಿವರಣೆ ಮೇಲೆ ಕ್ಲಿಕ್ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :