Xiaomi Redmi 7A ಫೋನ್ 4000mAh ಬ್ಯಾಟರಿ ಮತ್ತು 13MP AI ಬ್ಯಾಕ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ

Xiaomi Redmi 7A ಫೋನ್ 4000mAh ಬ್ಯಾಟರಿ ಮತ್ತು 13MP AI ಬ್ಯಾಕ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ
HIGHLIGHTS

Redmi 7A ಫೋನ್ 5.45 ಇಂಚಿನ IPS LCD HD ಡಿಸ್ಪ್ಲೇಯೊಂದಿಗೆ 18: 9 ಅಸ್ಪೆಟ್ ರೇಷುವನ್ನು ಹೊಂದಿದೆ.

Redmi 7A ಮುಂಭಾಗದ ಕ್ಯಾಮರಾ AI ಫೇಸ್ ಕ್ಯಾಮೆರಾ & AI ಬ್ಯಾಕ್ಗ್ರೌಂಡ್ ಬ್ಲರ್ ಸೇರಿದಂತೆ AI ಫೇಸ್ ಅನ್ಲಾಕ್ನೊಂದಿಗೆ ಬರುತ್ತದೆ.

Xiaomi ಯ ಸಬ್ ಬ್ರಾಂಡ್ ಆಗಿರುವ ರೆಡ್ಮಿ ಇಂದು ಮತ್ತೊಂದು ಹೊಸ ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಇದನ್ನು Xiaomi ಯ Redmi 7A ಇಂದು ಕರೆಯಲಾಗಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ Redmi 6A ಫೋನಿನ ನವೀಕರಿಸಲಾದ ರೂಪಾಂತರವಾಗಿದೆ. ಚೀನಾದಲ್ಲಿ ಈ ಫೋನ್ ಈಗಾಗಲೇ ಪರಿಚಯಿಸಿ ಮಾತ್ರ ಮಾಡಲಾಗುತ್ತಿದೆ. ಭಾರತದಲ್ಲಿ ಶೀಘ್ರದಲ್ಲೇ ಈ ಫೋನ್ ಬಿಡುಗಡೆಯಾಗಿ ಮಾರಾಟಕ್ಕೆ ಬರುವುದಾಗಿ  ನಂಬಲಾಗಿದೆ. ಈ ಸಮಯದಲ್ಲಿ ಫೋನ್ ಮೌಲ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ನೀಡಲಾಗಿಲ್ಲ. ಕೆಲ ವರದಿಗಳ ಪ್ರಕಾರ ಇದರ ಬೆಲೆಯನ್ನು Redmi K20 ಅನಾವರಣದೊಂದಿಗೆ ಘೋಷಿಸುವ ನಿರೀಕ್ಷೆಯಿದೆ.

Redmi 7A ಡಿಸ್ಪ್ಲೇ ಮತ್ತು ಹೈಲೈಟ್ 

ಇದು 5.45 ಇಂಚಿನ IPS LCD HD ಡಿಸ್ಪ್ಲೇಯೊಂದಿಗೆ 18: 9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದರ ಬೆಜೆಲ್ಗಳು ಸ್ವಲ್ಪ ದಪ್ಪವಾಗಿದ್ದು  ಫೋನ್ನಲ್ಲಿ ಡಿಸ್ಪ್ಲೇಯಲ್ಲಿ ಯಾವುದೇ ನಾಚ್ ನೀಡಿಲ್ಲ. ಈ ಫೋನ್ ಅನ್ನು P2i ನ್ಯಾನೊ ಲೇಪನದೊಂದಿಗೆ ಪರಿಚಯಿಸಲಾಗಿದ್ದು ವಾಟರ್ಪ್ರೊಫ್  ಆಗಿದೆ. ಈ ಫೋನ್ ಅನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 439 ಪ್ರೊಸೆಸರ್ ಅಳವಡಿಸಲಾಗಿದೆ. ಫೋನ್ಗೆ ಪವರ್ ನೀಡಲು ಇದರಲ್ಲಿ 4000mAh ಬ್ಯಾಟರಿ ಒದಗಿಸಲಾಗುತ್ತದೆ. ಅದರಲ್ಲಿ ಯಾವುದೇ ರೀತಿಯ ಫಾಸ್ಟ್ ಚಾರ್ಜ್ ಬೆಂಬಲವಿಲ್ಲ. ಇದು ಡ್ಯುಯಲ್ ಸಿಮ್ ಸ್ಮಾರ್ಟ್ಫೋನ್ ಮತ್ತು ಮೈಕ್ರೊ SD ಸ್ಲಾಟ್ ಸಹ ಇರುತ್ತದೆ. ಇದರ ಸ್ಟೋರೇಜ್ 256GB ವರೆಗೆ ಹೆಚ್ಚಿಸಬಹುದು.

Redmi 7A ಕ್ಯಾಮೆರಾ ಮಾಹಿತಿ

ಈ Redmi 7A ಸ್ಮಾರ್ಟ್ಫೋನ್ ಕ್ಯಾಮರಾ ವಿಭಾಗದಲ್ಲಿ ಪ್ರೈಮರಿ ಕ್ಯಾಮೆರಾ 13MP ಮೆಗಾಪಿಕ್ಸೆಲ್ ಹಿಂಬದಿಯಲ್ಲಿ ಫೋಟೊಗ್ರಫಿಗಾಗಿ  ನೀಡಲಾಗಿದೆ. ಅಲ್ಲದೆ ಇದರ ಮುಂಭಾಗದಲ್ಲಿ 5MP ಮೆಗಾಪಿಕ್ಸೆಲ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. ಈ ಫೋನ್ AI ಟೆಕ್ಸ್ಚರ್ ಮೋಡ್ನೊಂದಿಗೆ ಹೊಂದಿಕೊಳ್ಳುತ್ತದೆ. ಅದೇ ಸಮಯದಲ್ಲಿ ಅದರ ಮುಂಭಾಗದ ಕ್ಯಾಮರಾ AI ಫೇಸ್ ಕ್ಯಾಮೆರಾ & AI ಬ್ಯಾಕ್ಗ್ರೌಂಡ್ ಬ್ಲರ್ ಸೇರಿದಂತೆ AI ಫೇಸ್ ಅನ್ಲಾಕ್ನೊಂದಿಗೆ ಬರುತ್ತದೆ. ಈ ಫೋನ್ ಹಿಂಭಾಗದಲ್ಲಿ ಯಾವುದೇ ರೀತಿಯ ಫಿಂಗರ್ಪ್ರಿಂಟ್ ಸೆನ್ಸರ್ ನೀಡಿಲ್ಲ.

ಇಮೇಜ್ ಕ್ರೆಡಿಟ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo