ಭಾರತದಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಮಾರ್ಟ್ಫೋನ್ ಮಾರಾಟಗಾರರಾದ ಚೀನಿದ Xiaomi ಕಂಪನಿ ಟ್ಯಾಬ್ಲೆಟ್ ವಲಯದಲ್ಲಿ ತಮ್ಮ ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ Xiaomi Pad 6 ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ. ಇದನ್ನು ಸದ್ಯಕ್ಕೆ ಎರಡು ರೂಪಾಂತರಗಳಲ್ಲಿ ತಂದಿದ್ದು ಪವರ್‌ಫುಲ್ ಚಿಪ್‌ನೊಂದಿಗೆ 144Hz ಡಿಸ್ಪ್ಲೇಯನ್ನು ಈ ಟ್ಯಾಬ್ಲೆಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಬದಲು ನೀವು ನಿಜವಾಗಿಯೂ ಹೆಚ್ಚಾಗಿ ಕಂಟೆಂಟ್ ಬಳಕೆ, ಸಣ್ಣ ಪುಟ್ಟ ಆಫೀಸ್ ಕೆಲಸ ಮತ್ತು ಗೇಮಿಂಗ್‌ಗಾಗಿ ನೀವೊಂದು ಟ್ಯಾಬ್ಲೆಟ್‌ಗಾಗಿ ಹುಡುಕುತ್ತಿದ್ದರೆ ಈ ಹೊಸ Xiaomi Pad 6 ಸೂಕ್ತವಾದ ಆಯ್ಕೆಯಾಗಿದೆ.
ಭಾರತದಲ್ಲಿ ಬಿಡುಗಡೆಯಾಗಿರುವ Xiaomi Pad 6 ಮೂಲ ಮಾದರಿಯು 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು 26,999 ರೂಗಳಿಗೆ ಬಿಡುಗಡೆಯಾದರೆ ಇದರ 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 28,999 ರೂಗಳಾಗಿವೆ.ಇದರ ಕ್ರಮವಾಗಿ ICICI ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ತತ್‌ಕ್ಷಣ ರೂ 3,000 ನೊಂದಿಗೆ Xiaomi ಪ್ಯಾಡ್ 6 ಕ್ರಮವಾಗಿ ರೂ 23,999 ಮತ್ತು ರೂ 25,999 ರೂಗಳಲ್ಲಿ ಎಫೆಕ್ಟಿವ್ ಬೆಲೆಗೆ ಲಭ್ಯವಿದೆ. ಅಲ್ಲದೆ ಜೂನ್ 21 ರಿಂದ ಅಮೆಜಾನ್, Mi.com ಮತ್ತು Xiaomi ಚಿಲ್ಲರೆ ಅಂಗಡಿಗಳ ಮೂಲಕ ದೇಶಾದ್ಯಂತ ಟ್ಯಾಬ್ಲೆಟ್ ಖರೀದಿಗೆ ಲಭ್ಯವಿರುತ್ತದೆ.
ಈ ಹೊಸ ಟ್ಯಾಬ್ಲೆಟ್ ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ Xiaomi Pad 6 ಟ್ಯಾಬ್ಲೆಟ್ ಒಳಗೆ HDR 10+ ಮತ್ತು Dolby Vision ಪ್ರಮಾಣೀಕರಣದೊಂದಿಗೆ 11 ಇಂಚಿನ 2.8K ಡಿಸ್ಪ್ಲೇ 144Hz IPS LCD ಜೊತೆಗೆ 2880×1800 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಟ್ಯಾಬ್ಲೆಟ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸ್ಕ್ರೀನ್ ಅನ್ನು ಬರುತ್ತದೆ. ಟ್ಯಾಬ್ಲೆಟ್ 6/8GB LPDDR5 RAM ಮತ್ತು 128/256 GB UFS 3.1 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಚಿಪ್‌ಸೆಟ್ ಮೂಲಕ ನಡೆಯುತ್ತದೆ.
Xiaomi Pad 6 ಟ್ಯಾಬ್ಲೆಟ್‌ಗಳಿಗಾಗಿ ಕಂಪನಿಯ ಸ್ವಂತ MIUI 14 ಕಸ್ಟಮ್ ಸ್ಕಿನ್‌ನೊಂದಿಗೆ Android 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಅಲ್ಲದೆ ನಿಮಗೆ f/2.2 ಅಪರ್ಚರ್ ಜೊತೆಗೆ ಹಿಂಭಾಗದಲ್ಲಿ 13MP ಸಂವೇದಕವಿದೆ. ಮುಂಭಾಗದಲ್ಲಿ ಟ್ಯಾಬ್ಲೆಟ್ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 8MP ಕ್ಯಾಮೆರಾದೊಂದಿಗೆ ಬರುತ್ತದೆ. Xiaomi Pad 6 ಟ್ಯಾಬ್ಲೆಟ್ 8840mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್‌ನೊಂದಿಗೆ ಬರುತ್ತದೆ.