ಚೀನಿಯ ಕಂಪನಿಯಾದ Xiaomi ಮತ್ತೊಂಮ್ಮೆ ತನ್ನ ಎರಡನೇ ಬಾರಿ ತಲೆಮಾರಿನ ಆಂಡ್ರಾಯ್ಡ್ ಒನ್ ಸ್ಮಾರ್ಟ್ಫೋನ್ ಆಗಿರುವ Xiaomi Mi A2 ಸ್ಮಾರ್ಟ್ಫೋನಿನ ಬೆಲೆಯನ್ನು ಕಡಿತಗೊಳಿಸಿದೆ. ಈ ಬೆಲೆ ಕಡಿತವನ್ನು ತನ್ನ 4GB ಯ RAM ರೂಪಾಂತರದಲ್ಲಿ ಮಾಡಿದೆ. ಮತ್ತು ಅದರ 6GB ಯ RAM ರೂಪಾಂತರವನ್ನು ಇನ್ನೂ ಹಳೆಯ ಬೆಲೆಯಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಈ ಹೊಸ ಬೆಲೆಯೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಮಿ.ಕಾಂ ಮತ್ತು ಅಮೆಜಾನ್ ಇಂಡಿಯಾ ಮೂಲಕ ಕೊಳ್ಳಬಹುದು. ಇದರ ಬಗ್ಗೆ Xiaomi ಕಂಪನಿಯ ಭಾರತದ CEO ಮತ್ತು MD ಆಗಿರುವ ಮನು ಕುಮಾರ್ ಜೈನ್ ಈ ರೀತಿ ಟ್ವಿಟ್ ಮಾಡಿದ್ದಾರೆ.
ಈ ಸ್ಮಾರ್ಟ್ಫೋನಿನ ಈ 6GB ಯ RAM ರೂಪಾಂತರ ಸ್ಮಾರ್ಟ್ಫೋನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಝೋನ್ ನಲ್ಲಿ ಇನ್ನೂ ಹಳೆಯ ಅಂದ್ರೆ 15,999 ರೂಗಳ ಬೆಲೆಗೆ ಮಾರಾಟವಾಗುತ್ತಿದೆ. ಈ Xiaomi Mi A2 ಮಾದರಿಯ ಬೇಸ್ ರೂಪಾಂತರವು 4GB ಯ RAM ಮತ್ತು 64GB ಸ್ಟೋರೇಜ್ ಸ್ಮಾರ್ಟ್ಫೋನ್ ನೈಜ ಬೆಲೆ ಈವರೆಗೆ 13,999 ರೂಗಳಲ್ಲಿ ಲಭ್ಯವಿತ್ತು.
ಈಗ ಇದನ್ನು ಸುಮಾರು ನೇರವಾಗಿ 2000 ರೂಗಳನ್ನು ಕತ್ತರಿಸಿದ ನಂತರ ಅದನ್ನು ಈಗ ಕೇವಲ 11,999 ರೂಗಳಿಗೆ ನಿಗದಿಪಡಿಸಲಾಗಿದೆ. ಇದು 1080 × 2160 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 5.9 ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು 18: 9 ಆಕಾರ ಅನುಪಾತವನ್ನು ಹೊಂದಿದೆ. ಈ ಹೊಸ Xiaomi Mi A2 ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟಪ್ ಅನ್ನು ಹೊಂದಿದೆ. ಇದು 12MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ಡುಯಲ್ LED ಫ್ಲಾಶ್ನೊಂದಿಗೆ 20MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ.
ಇದರಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗೆ 20MP ಮೆಗಾಪಿಕ್ಸೆಲ್ ಕ್ಯಾಮೆರಾ ಫ್ರಂಟಲ್ಲಿ ಕೂಡ ಇದೆ. ಇದರಲ್ಲಿ ಮತ್ತೊಂದು ವಿಶೇಷತೆಯೆಂದರೆ 3.5mm ಆಡಿಯೋ ಪೋರ್ಟ್ ನೀಡಿಲ್ಲದೆ ಟೈಪ್ ಸಿ ಪೋರ್ಟ್ ನೀಡಿ ಅದಕ್ಕೆ ಬೇಕಾದ ಆಡಿಯೋ ಜಾಕ್ ಬಾಕ್ಸ್ ಒಳಗೆ ನೀಡಿದೆ. ಮತ್ತು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ನೊಂದಿಗೆ 3000mAh ಬ್ಯಾಟರಿ 4.0 ಹೊಂದಾಣಿಕೆ ಸಂಪೂರ್ಣ ಪ್ಯಾಕೇಜನ್ನು ಬ್ಯಾಕಪ್ ಮಾಡುತ್ತದೆ.