ಹೌದು ಶೀಘ್ರದಲ್ಲೇ Xiaomi ಈ ಫೋನ್ಗಳಿಗೆ ಕಂಪನಿ ಆಂಡ್ರಾಯ್ಡ್ 10 ಅಪ್ಡೇಟ್ ಬರಲಿದೆ ಭಾರತದಲ್ಲಿ ಲಭ್ಯವಿರುವ Xiaomi ಯ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಾದ Mi A2 ಮತ್ತು Mi A3 ಫೋನ್ಗಳಿಗೆ ಶೀಘ್ರದಲ್ಲೇ ಆಂಡ್ರಾಯ್ಡ್ 10 ರ ಸ್ಟೇಬಲ್ ಅಪ್ಡೇಟ್ ಬಿಡುಗಡೆ ಮಾಡಲಾಗುವುದೆಂದು ಕಂಪನಿ ಖಚಿತಪಡಿಸಿದೆ. ಆದರೆ ಇನ್ನು ಯಾವುದೇ ಅಧಿಕೃತ ದಿನಾಂಕವನ್ನು ನಿಗದಿಪಡಿಸಿಲ್ಲ.
ಈ ಎರಡು ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಈಗ ಆಂಡ್ರಾಯ್ಡ್ 10 ಅಲ್ಲಿ ಬರುವ ಕೆಲವು ಇಂಟ್ರೆಸ್ಟಿಂಗ್ ಫೀಚರ್ ಅಂದ್ರೆ ಜನಪ್ರಿಯ ಸಿಸ್ಟಮ್ ವೈಡ್ ಡಾರ್ಕ್ ಮೋಡ್, ಡಿಜಿಟಲ್ ವೆಲ್ ಬೀಯಿಂಗ್ ನಂತಹ ವೈಶಿಷ್ಟ್ಯಗಳನ್ನು ಸಹ ಬಳಸಲು ಸಾಧ್ಯವಾಗುತ್ತದೆ. Xiaomi ಇತ್ತೀಚೆಗೆ ಆಂಡ್ರಾಯ್ಡ್ 10 ಆಧಾರಿತ MIUI 11 ಅನ್ನು ತನ್ನ ಕೆಲವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊರತಂದಿದೆ. ಈಗ ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್‌ನೊಂದಿಗೆ ಬರುವ ಈ ಫೋನ್ಗಳಿಗೆ ಆಂಡ್ರಾಯ್ಡ್ 10 ಅಪ್ಡೇಟ್ ನೀಡುತ್ತಿದೆ.
ಈ Mi A2 ಫೋನಿನ ಕ್ಯಾಮೆರಾಗಳನ್ನು 12MP + 20MP ಹಿಂಭಾಗದಲ್ಲಿ ಮತ್ತು 20MP ಫ್ರಂಟ್ ಕ್ಯಾಮೆರಾ ಒಳಗೊಂಡಿದ್ದು ಈ ಮೂಲಕ ಅತ್ಯುತ್ತಮವಾಗಿ ಪಡೆದುಕೊಂಡಿದೆ. ಮತ್ತು ಈ ಬೆಲೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಪವರ್ಫುಲ್ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಅನ್ನು ಇಲ್ಲಿಯವರೆಗೆ ಹೆಚ್ಚು ಫೋನ್‌ಗಳಿಗೆ ಸೀಮಿತಗೊಳಿಸಲಾಗಿದ್ದು ಬಜೆಟ್‌ನಲ್ಲಿ ಹುಡುಕುತ್ತಿರುವ ಯಾರಿಗಾದರೂ ಈ ಫೋನ್ ಪ್ರಲೋಭನಗೊಳಿಸುವ ಆಯ್ಕೆಯಾಗಿದೆ. ಒಮ್ಮೆ ಈ ಸ್ಮಾರ್ಟ್ಫೋನ್ 15K ಬಜೆಟ್ ಶ್ರೇಣಿಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಇದು ಇಂದು ಅಮೆಜಾನಲ್ಲಿ ಕೇವಲ ₹8,919 ರೂಗಳಲ್ಲಿ ಲಭ್ಯವಿದೆ.
ಇದರ ನಂತರ ಈ Mi A3 ಸ್ಮಾರ್ಟ್ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಮತ್ತು ವಿಸ್ತರಿಸಬಹುದಾದ ಸ್ಟೋರೇಜ್ ಮರಳಿ ತಂದಿತು. ಆದರೆ ಸ್ಕ್ರೀನ್ ರೆಸಲ್ಯೂಶನ್ ಅನ್ನು HD+ ನೀಡಿದೆ. ಇದು ಹೊಸ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಸಮರ್ಥ ಪ್ರೊಸೆಸರ್ ಆಗಿದ್ದು ಈ ಬೆಲೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರಲ್ಲಿ ದೊಡ್ಡ ಬ್ಯಾಟರಿಯಿಂದಲೂ ಪ್ರಯೋಜನ ಪಡೆಯುತ್ತದೆ. ಮತ್ತು ಅದರ ಹಿಂದಿನದಕ್ಕಿಂತ ಒಂದೇ ಚಾರ್ಜ್‌ನಲ್ಲಿ ಹೆಚ್ಚು ಕಾಲ ಉಳಿಯುವ ಸಾಮರ್ಥ್ಯ ಹೊಂದಿದೆ. ಈ ಬೆಲೆ ಮಟ್ಟದಲ್ಲಿ ಫೋನ್‌ಗೆ ಕ್ಯಾಮೆರಾ ಕಾರ್ಯಕ್ಷಮತೆ ಸಾಕಷ್ಟು ಪ್ರಬಲವಾಗಿದೆ. ಇದು ಇಂದು ಅಮೆಜಾನಲ್ಲಿ ಕೇವಲ ₹12,499 ರೂಗಳಲ್ಲಿ ಲಭ್ಯವಿದೆ.