Xiaomi Mi 9 ಸ್ಮಾರ್ಟ್ಫೋನ್ ಇಂದು ಬಿಡುಗಡೆಯಾಗಲಿದೆ: ಬೆಲೆ ಲಭ್ಯತೆ ಮತ್ತು ಸ್ಪೆಸಿಫಿಕೇಷನ್ ಮಾಹಿತಿ ಪಡೆಯಿರಿ.

Updated on 22-Feb-2019
HIGHLIGHTS

Xiaomi ಯ ಈ ಹೊಸ Mi 9 ಸ್ಮಾರ್ಟ್ಫೋನ್ ಹೈಎಂಡ್ ಸ್ನ್ಯಾಪ್ಡ್ರಾಗನ್ 855 SoC ಪ್ರೊಸೆಸರೊಂದಿಗೆ ಬರಲಿದೆ.

ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಇಂದು ತನ್ನ ಹೊಸ ಫ್ಲಾಗ್ ಶಿಪ್ ಸ್ಮಾರ್ಟ್ಫೋನ್ ಆದ Xiaomi Mi 9 ಅನ್ನು ಇಂದು ಚೀನಾದಲ್ಲಿ ಬಿಡುಗಡೆಗೊಳಿಸುತ್ತಿದೆ. ಅಲ್ಲದೆ Samsung Galaxy S10 ಸರಣಿಯನ್ನು ಸಹ ಇಂದು ಅನಾವರಣಕ್ಕಾಗಿ ನಿರೀಕ್ಷಿಸಲಾಗಿದೆ. ಈಗ ಈ ಫೋನಿನ ಬಿಡುಗಡೆಗು ಮುಂಚೆ Xiaomi ತನ್ನ ಹೊಸ Mi 9 ಸ್ಮಾರ್ಟ್ಫೋನನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಚಿಪ್ಸೆಟ್ ಪ್ರೊಸೆಸರೊಂದಿಗೆ  ದೃಢಪಡಿಸಿದರು. ಇದು Xiaomi ಕಂಪನಿಯ ಮೊತ್ತ ಮೊಳದಳ ಸ್ಮಾರ್ಟ್ಫೋನ್ ಈ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸಲಿದೆ.

Xiaomi ಯ CEO ಆಗಿರುವ ಲೀ ಜುನ್ ಮತ್ತು ಬ್ರಾಂಡ್ ರಾಯಭಾರಿಯಾದ ವಾಂಗ್ ಯುವಾನ್ ನಡುವಿನ ಚಾಟ್ನಲ್ಲಿ ಲೀ ಜೂನ್ Xiaomi Mi 9 ಸ್ಮಾರ್ಟ್ಫೋನಿನ ಬಿಡುಗಡೆಯ ಬಗ್ಗೆ ದೃಢಪಡಿಸಿದ್ದಾರೆಂದು ಟ್ವಿಟ್ ಆಗಿದೆ. ಅಲ್ಲದೆ ಸ್ನಾಪ್ಡ್ರಾಗನ್ ಬಲದೊಂದಿಗೆ 855 ಮೊಬೈಲ್ ವೇದಿಕೆಯನ್ನು ನಡುಕುವಂತೆ ಮಾಡಲಿದೆ. ಏಕೆಂದರೆ ಇದೇ ಚಿಪ್ಸೆಟ್ನೊಂದಿಗೆ ಶೀಘ್ರದಲ್ಲೇ ಪ್ರಕಟಗೊಳ್ಳಲಿರುವ ಇತರೇ ಫ್ಲ್ಯಾಗ್ಶಿಪ್ಗಳ ಸ್ಮಾರ್ಟ್ಫೋನ್ಗಳ ಮುನ್ನ ಇದು ಬರಲಿದೆ.

ಈ ಸ್ಮಾರ್ಟ್ಫೋನ್ 6.4 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇಯನ್ನು 19: 9 ಆಕಾರ ಅನುಪಾತದಲ್ಲಿ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿರುತ್ತದೆ. ಇದರ ಸೋರಿಕೆಯ ಪ್ರಕಾರ Xiaomi Mi 9 ಪ್ರಾಥಮಿಕ 48MP ಮೆಗಾಪಿಕ್ಸೆಲ್ ಸೋನಿ IMX586 ಸೆನ್ಸರ್, 12MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್, ಮತ್ತು 3D ToF ಸೆನ್ಸರ್ ಸಂಯೋಜನೆಯೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ  24MP ಮೆಗಾಪಿಕ್ಸೆಲ್ ಸೋನಿ IMX576 ಕ್ಯಾಮರಾವನ್ನು ಸ್ಪೋರ್ಟ್ ಮಾಡಲು ವದಂತಿಯಾಗಿದೆ.

ಈ ಸ್ಮಾರ್ಟ್ಫೋನ್ LTE ಮೊಡೆಮ್ನೊಂದಿಗೆ ಬರುವುದಾಗಿ ಹೇಳಲಾಗಿದೆ. ಇದರರ್ಥ ಇದು 5G ಕನೆಕ್ಟಿವಿಟಿಗೆ ಬೆಂಬಲಿಸುವುದಿಲ್ಲ. ಏಕೆಂದರೆ ಅದು ಸ್ನಾಪ್ಡ್ರಾಗನ್ X50 LTE ಮೋಡೆಮ್ ಅನ್ನು ಮಾತ್ರ ಒಳಗೊಂಡಿರುತ್ತದೆ. ಈ ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿರುತ್ತದೆ.  ಮತ್ತು 8 ಅಥವಾ 10GB RAM ಮತ್ತು 512GB  ಸ್ಟೋರೇಜ್ ರೂಪಾಂತರವು ಹೊಂದಿರುವ ನಿರೀಕ್ಷೆಯಿದೆ. ಇದು ಆಂಡ್ರಾಯ್ಡ್ 9 ಪೈ ಅನ್ನು ಕಂಪೆನಿ ತನ್ನ ಸ್ವಂತ MIUI 10 ರೊಂದಿಗೆ ನಡೆಸುತ್ತದೆ.

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :