Xiaomi ತನ್ನ ಹೊಸ ಸ್ಮಾರ್ಟ್‌ಫೋನ್ Xiaomi Mi 10 Ultra ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ನ ಅತ್ಯಂತ ವಿಶೇಷವೆಂದರೆ ಅದರ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 120x ಅಲ್ಟ್ರಾ ಜೂಮ್ ಕ್ಯಾಮೆರಾವನ್ನು ನೀಡಲಾಗಿದೆ. ಕಂಪನಿಯು ಪ್ರಸ್ತುತ ತನ್ನ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವರ್ಚುವಲ್ ಈವೆಂಟ್ ಮೂಲಕ ಚೀನಾದಲ್ಲಿ ಈ ಫೋನ್ ಅನ್ನು ಪರಿಚಯಿಸಿದೆ. ಆದರೆ ಕಂಪನಿಯು ಶೀಘ್ರದಲ್ಲೇ ವಿಶ್ವದ ಉಳಿದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇದನ್ನು ಬಿಡುಗಡೆ ಮಾಡಲಿದೆ ಎಂದು ನಂಬಲಾಗಿದೆ.
ಈ ಸ್ಮಾರ್ಟ್ಫೋನ್ 6.67 ಇಂಚಿನ FHD+ OLED ಡಿಸ್ಪ್ಲೇ ಹೊಂದಿದ್ದು ಇದು 120Hz ರಿಫ್ರೆಶ್ ರೇಟ್ ಬರುತ್ತದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್ ಅನ್ನು ಆಂಡ್ರಾಯ್ಡ್ 10 ನಲ್ಲಿ ಎಂಐಯುಐ 12 ನೊಂದಿಗೆ ಪರಿಚಯಿಸಿದೆ. ವಿಶೇಷವೆಂದರೆ ಈ ಸ್ಮಾರ್ಟ್‌ಫೋನ್‌ನಲ್ಲಿ ವಿಸಿ ಲಿಕ್ವಿಡ್ ಕೂಲಿಂಗ್, ಮಲ್ಟಿ-ಲೇಯರ್ ಗ್ರ್ಯಾಫೈಟ್ ಮತ್ತು ಫೋನ್‌ನ ತಾಪಮಾನವನ್ನು ನಿರ್ವಹಿಸುವ ಥರ್ಮಲ್ ಸೆನ್ಸರ್ ಅರೇ ವೈಶಿಷ್ಟ್ಯಗಳಿವೆ.
ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು Xiaomi Mi 10 Ultra ಅಲ್ಲಿ ನೀಡಲಾಗಿದೆ. ಇದು 48MP ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ನಂತರ 20MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ನಂತರ 12MP ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು 120x ಅಲ್ಟ್ರಾ ಜೂಮ್ ಕ್ಯಾಮೆರಾವನ್ನು ಹೊಂದಿದೆ. ಇದು ಟೆಲಿಫೋಟೋ ಶೂಟರ್ನೊಂದಿಗೆ ಬರುತ್ತದೆ. ಫೋನ್‌ನ ಕ್ಯಾಮೆರಾದಲ್ಲಿ 8K ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ. ಸೆಲ್ಫಿ ಕ್ಯಾಮೆರಾಕ್ಕಾಗಿ ಫೋನ್‌ನ ಮುಂಭಾಗದಲ್ಲಿ 20MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಶಕ್ತಿಗಾಗಿ ಫೋನ್ 4500mAh ಬ್ಯಾಟರಿಯನ್ನು ಹೊಂದಿದೆ ಇದು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಈ Xiaomi Mi 10 Ultra ಸ್ಮಾರ್ಟ್ಫೋನ್ 8GB + 128GB ಸ್ಟೋರೇಜ್ ರೂಪಾಂತರದ ಬೆಲೆ CNY 5,299 (ಸುಮಾರು 57,000 ರೂಗಳಾಗಿವೆ.) ಅದರ 8GB + 256GB CNY 5,59 (ಸುಮಾರು 60,100 ರೂಗಳಾಗಿವೆ) ಮತ್ತು 12GB + 256GB ಸ್ಟೋರೇಜ್ ರೂಪಾಂತರದ ಬೆಲೆ CNY 5,999 (ಸುಮಾರು 64,400 ರೂಗಳಾಗಿವೆ). ಈ ಫೋನ್‌ನ ಹೈ ಎಂಡ್ ರೂಪಾಂತರದ ಬೆಲೆ CNY 6,999 (ಸುಮಾರು 75,200 ರೂಗಳಾಗಿವೆ) ಆಗಿದೆ.