Xiaomi ಅತಿ ಶೀಘ್ರದಲ್ಲೇ Redmi 9 ಮತ್ತು Redmi 9A ಫೋನ್ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ
ಇದನ್ನು "DESH KA DUMDAAR SMARTPHONE" ಎಂಬ ಇಮೇಜ್ ಸೋರಿಕೆಯೊಂದಿಗೆ ಕಂಫಾರ್ಮ್ ಮಾಡಿದೆ
ಭಾರತದಲ್ಲಿ ಈ Xiaomi ಇಂಡಿಯಾ ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾದ Redmi 8 ಅಥವಾ Redmi 8A ಫೋನ್ಗಳ ಯಶಸ್ಸಿನ ಫಲವಾಗಿ ಶೀಘ್ರದಲ್ಲೇ ಮತ್ತೊಂದು ಹೊಸ ಫೋನ್ ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ Redmi 9 ಮತ್ತು Redmi 9A ಎನ್ನುವುದು ಇನ್ನು ಖಾತ್ರಿಯಾಗಿಲ್ಲ. Xiaomi ಇದರ ಒಂದು ವಿವರವನ್ನು ಕಂಫಾರ್ಮ್ ಮಾಡಿದ್ದೂ ಇದನ್ನು "DESH KA DUMDAAR SMARTPHONE" ಎಂಬ ಇಮೇಜ್ ಸೋರಿಕೆಯೊಂದಿಗೆ 2020 ರ ಮೊದಲ Redmi ಫೋನ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.ಎಂದು ಹೇಳಿದೆ.
An Xciting design that keeps you gripped! A new device in an all new avatar is launching on 11th Feb 2020!
I'm giving away the next #Redmi phone to one of you who gives a #Dumdaar suggestion to improve #Redmi8A!
RT and tweet with #DeshKaDumdaarSmartphone.#Xiaomi pic.twitter.com/J0gBY6RxfH
— Manu Kumar Jain (@manukumarjain) February 7, 2020
ಈ ಮಾಹಿತಿಯನ್ನು ಭಾರತದ Xiaomi ಕಂಪನಿಯ ಮುಖ್ಯಸ್ಥರಾದ ಮನು ಜೈನ್ ಅವರ ಟ್ವೀಟ್ ಅಲ್ಲಿ 'ಕಂಪನಿಯು ವರ್ಷದ ಮೊದಲ Redmi ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 11 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದ್ದು ಇದು ಕೇವಲ ಒಂದಲ್ಲ ಎರಡು ಅದ್ಭುತ ಸರ್ಪ್ರೈಸ್ ಜೊತೆಗೆ ಬರಲಿದೆ ಎಂದು ಮಾಡಿರುವ ಟ್ವೀಟ್ ಮತ್ತಷ್ಟು ಬಹಿರಂಗಪಡಿಸುತ್ತದೆ. ಇದು ನಮಗೆಲ್ಲಾ ಆಶ್ಚರ್ಯವನ್ನುಂಟು ಮಾಡುತ್ತದೆ. Xiaomi ಹೇ;ಹೇಳಿರುವಂತೆ ಒಂದು ಫೋನಾದರೆ ಮತ್ತೊಂದು ಏನಾಗಿರಬವುದು ಕಂಪನಿ ಏನನ್ನು ಸಿದ್ಧತೆ ನಡೆಸುತ್ತಿದೆ? ಬಹುಶಃ ಪವರ್ ಬ್ಯಾಂಕ್ ಆಗಿರಬವುದುದೇ? ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
ಕಂಪನಿಯ ಮೈಕ್ರೋಸೈಟ್ ಪ್ರಕಾರ ಮುಂಬರುವ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು ಹಲವು ರೇಖೆಗಳಿಂದ ತುಂಬಿದ ಬ್ಯಾಕ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದುವ ಸಾಧ್ಯತೆಯಿದೆ. ಹಿಂದಿನ ವರದಿಯ ಪ್ರಕಾರ ಹೊಸದಾಗಿ ಪ್ರಾರಂಭಿಸಲಾದ Realme C3 ನಲ್ಲಿ ನಾವು ನೋಡಿರುವ ಮೀಡಿಯಾ ಟೆಕ್ ಹೆಲಿಯೊ G70 ಚಿಪ್‌ಸೆಟ್‌ನಿಂದ ಈ Redmi 9 ಸರಣಿಗಳು ಚಾಲಿತವಾಗುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile