Xiaomi ಇಂಡಿಯಾ ಭಾರತದಲ್ಲಿ ತನ್ನ ರೆಡ್ಮಿಯ ಹೊಸ Redmi Note 12 4G ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಇದರಲ್ಲಿ 6.67 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ತ್ರಟ್ ಅನ್ನು ಹೊಂದಿದೆ. ಅಲ್ಲದೆ ಜನಪ್ರಿಯ ಮತ್ತು ವೇಗದ Snapdragon 685 ಪ್ರೊಸೆಸರ್ ಜೊತೆಗೆ 6GB RAM ಒಳಗೊಂಡಿದೆ. ಫ್ರಂಟ್ ಸೆಲ್ಫಿಯಲ್ಲಿ 13MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಈ ಫೋನ್ 7.85 ಎಂಎಂ ಅಂದ್ರೆ ಇದು ಅತ್ಯಂತ ತೆಳುವಾದ ಲುಕ್ ಅನ್ನು ಈ ಫೋನ್ ಹೊಂದಿದೆ ಎಂದು ಕಂಪನಿ ಹೇಳಿದೆ.
Redmi Note 12 4G ಸ್ಮಾರ್ಟ್ಫೋನ್ MIUI 14 ಜೊತೆಗೆ Android 13 ಅನ್ನು ಚಾಲನೆ ಮಾಡುತ್ತದೆ. ಮತ್ತು ಕಂಪನಿಯು 2 Android OS ನವೀಕರಣಗಳು ಮತ್ತು 4-ವರ್ಷದ ಸೆಕ್ಯೂರಿಟಿ ಪ್ಯಾಚ್ ಅಪ್ಡೇಟ್ ಅನ್ನು ಸಹ ಫೋನ್ ದೃಢಪಡಿಸಿದೆ. ಇದರ ಹಿಂಭಾಗದಲ್ಲಿ ಫೋಟೋಗಳಿಗಾಗಿ ಫೋನ್ 50MP ಹಿಂಬದಿಯ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸೆನ್ಸರ್ ಜೊತೆಗೆ ಬರುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.
4G-ಬೆಂಬಲಿತ ಡ್ಯುಯಲ್ ನ್ಯಾನೊ SIM ಸಾಮರ್ಥ್ಯದ ನೂತನ Redmi Note 12 4G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್-HD+ (2400 x 1080 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯದಲ್ಲಿದೆ. Qualcomm Snapdragon 685 ಪ್ರೊಸೆಸರ್ ಮತ್ತು Adreno 610 GPU ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ.
https://twitter.com/RedmiIndia/status/1641403246207021056?ref_src=twsrc%5Etfw
ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ಗಳಿಂದ ಶಕ್ತವಾಗಿದೆ. ಸೆಲ್ಫಿಗಳಿಗಾಗಿ 13-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP53 ರೇಟಿಂಗ್ ಹೊಂದಿದೆ.
ಕಂಪನಿ ಈ ಫೋನಿಗೆ ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ICICI ಕಾರ್ಡ್ ಹೊಂದಿರುವವರಿಗೆ ಫ್ಲಾಟ್ ರೂ.1000 ರಿಯಾಯಿತಿ ಅಸ್ತಿತ್ವದಲ್ಲಿರುವ Xiaomi ಮತ್ತು Redmi ಬಳಕೆದಾರರು ಎರಡೂ ರೂಪಾಂತರಗಳಲ್ಲಿ INR 1500 ಹೆಚ್ಚುವರಿ ರಿಯಾಯಿತಿ ಲಭ್ಯ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ ಇದರ 6GB + 64GB ಆವೃತ್ತಿಗೆ 14,999 ರೂಗಳಾದರೆ ಇದರ 6GB + 128GB ಮಾದರಿಯ ಬೆಲೆ 16,999 ರೂಗಳಾಗಿವೆ. ಇದು Mi.com, Flipkart, Mi Home ಮತ್ತು Mi Studio ಮತ್ತು ಅಧಿಕೃತ ಚಿಲ್ಲರೆ ಅಂಗಡಿಗಳಲ್ಲಿ 6ನೇ ಏಪ್ರಿಲ್ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಾಗಲಿದೆ.