ಭರ್ಜರಿ ಆಫರ್‌ಗಳೊಂದಿಗೆ ಬಿಡುಗಡೆಯಾದ Redmi Note 12 4G ಫೋನ್! ಬೆಲೆ ಮತ್ತು ಫೀಚರ್‌ಗಳೇನು?
ರೆಡ್ಮಿಯ ಹೊಸ Redmi Note 12 4G ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ.
ಜನಪ್ರಿಯ ಮತ್ತು ವೇಗದ Snapdragon 685 ಪ್ರೊಸೆಸರ್ ಜೊತೆಗೆ 6GB RAM ಒಳಗೊಂಡಿದೆ.
Redmi Note 12 4G ಸ್ಮಾರ್ಟ್ಫೋನ್ MIUI 14 ಜೊತೆಗೆ Android 13 ಅನ್ನು ಚಾಲನೆ ಮಾಡುತ್ತದೆ.
Xiaomi ಇಂಡಿಯಾ ಭಾರತದಲ್ಲಿ ತನ್ನ ರೆಡ್ಮಿಯ ಹೊಸ Redmi Note 12 4G ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಇದರಲ್ಲಿ 6.67 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ತ್ರಟ್ ಅನ್ನು ಹೊಂದಿದೆ. ಅಲ್ಲದೆ ಜನಪ್ರಿಯ ಮತ್ತು ವೇಗದ Snapdragon 685 ಪ್ರೊಸೆಸರ್ ಜೊತೆಗೆ 6GB RAM ಒಳಗೊಂಡಿದೆ. ಫ್ರಂಟ್ ಸೆಲ್ಫಿಯಲ್ಲಿ 13MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಈ ಫೋನ್ 7.85 ಎಂಎಂ ಅಂದ್ರೆ ಇದು ಅತ್ಯಂತ ತೆಳುವಾದ ಲುಕ್ ಅನ್ನು ಈ ಫೋನ್ ಹೊಂದಿದೆ ಎಂದು ಕಂಪನಿ ಹೇಳಿದೆ.
Redmi Note 12 4G ಸ್ಮಾರ್ಟ್ಫೋನ್ MIUI 14 ಜೊತೆಗೆ Android 13 ಅನ್ನು ಚಾಲನೆ ಮಾಡುತ್ತದೆ. ಮತ್ತು ಕಂಪನಿಯು 2 Android OS ನವೀಕರಣಗಳು ಮತ್ತು 4-ವರ್ಷದ ಸೆಕ್ಯೂರಿಟಿ ಪ್ಯಾಚ್ ಅಪ್ಡೇಟ್ ಅನ್ನು ಸಹ ಫೋನ್ ದೃಢಪಡಿಸಿದೆ. ಇದರ ಹಿಂಭಾಗದಲ್ಲಿ ಫೋಟೋಗಳಿಗಾಗಿ ಫೋನ್ 50MP ಹಿಂಬದಿಯ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸೆನ್ಸರ್ ಜೊತೆಗೆ ಬರುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.
Redmi Note 12 ವಿಶೇಷಣಗಳು
4G-ಬೆಂಬಲಿತ ಡ್ಯುಯಲ್ ನ್ಯಾನೊ SIM ಸಾಮರ್ಥ್ಯದ ನೂತನ Redmi Note 12 4G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್-HD+ (2400 x 1080 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯದಲ್ಲಿದೆ. Qualcomm Snapdragon 685 ಪ್ರೊಸೆಸರ್ ಮತ್ತು Adreno 610 GPU ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ.
Let's start the #XiaomiFanFestival with the first launch, #RedmiNote12.
The #SuperNoteSuperDesign comes with
World's first Snapdragon®685 in a smartphone
Stunning Sunrise Gold Colour
120Hz Super AMOLED DisplayStarting at ₹13,999*
Know more: https://t.co/2rvag2C9wu pic.twitter.com/G8KIO9Nqeb— Redmi India (@RedmiIndia) March 30, 2023
ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ಗಳಿಂದ ಶಕ್ತವಾಗಿದೆ. ಸೆಲ್ಫಿಗಳಿಗಾಗಿ 13-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 5,000mAh ಬ್ಯಾಟರಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP53 ರೇಟಿಂಗ್ ಹೊಂದಿದೆ.
Redmi Note 12 ಬೆಲೆ, ಆಫರ್ ಮತ್ತು ಲಭ್ಯತೆ
ಕಂಪನಿ ಈ ಫೋನಿಗೆ ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ICICI ಕಾರ್ಡ್ ಹೊಂದಿರುವವರಿಗೆ ಫ್ಲಾಟ್ ರೂ.1000 ರಿಯಾಯಿತಿ ಅಸ್ತಿತ್ವದಲ್ಲಿರುವ Xiaomi ಮತ್ತು Redmi ಬಳಕೆದಾರರು ಎರಡೂ ರೂಪಾಂತರಗಳಲ್ಲಿ INR 1500 ಹೆಚ್ಚುವರಿ ರಿಯಾಯಿತಿ ಲಭ್ಯ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ ಇದರ 6GB + 64GB ಆವೃತ್ತಿಗೆ 14,999 ರೂಗಳಾದರೆ ಇದರ 6GB + 128GB ಮಾದರಿಯ ಬೆಲೆ 16,999 ರೂಗಳಾಗಿವೆ. ಇದು Mi.com, Flipkart, Mi Home ಮತ್ತು Mi Studio ಮತ್ತು ಅಧಿಕೃತ ಚಿಲ್ಲರೆ ಅಂಗಡಿಗಳಲ್ಲಿ 6ನೇ ಏಪ್ರಿಲ್ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile