32MP + 32MP ಡುಯಲ್ ಸೆಲ್ಫಿ ಕ್ಯಾಮೆರಾದ Xiaomi Civi 14 ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು?

32MP + 32MP ಡುಯಲ್ ಸೆಲ್ಫಿ ಕ್ಯಾಮೆರಾದ Xiaomi Civi 14 ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು?
HIGHLIGHTS

ಭಾರತದಲ್ಲಿ Xiaomi ಸ್ಮಾರ್ಟ್ಫೋನ್ ಕಂಪನಿ ತನ್ನ ಜನಪ್ರಿಯ Xiaomi 14 ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಸೇರಿಸಿದೆ.

Xiaomi Civi 14 ಮುಂಭಾಗದಲ್ಲಿ ನಿಮಗೆ 32MP + 32MP ಡುಯಲ್ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.

Xiaomi Civi 14 ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ₹39,999 ರೂಗಳಿಗೆ ನಿಗದಿಪಡಿಸಿದೆ.

ಭಾರತದಲ್ಲಿ Xiaomi ಸ್ಮಾರ್ಟ್ಫೋನ್ ಕಂಪನಿ ತನ್ನ ಜನಪ್ರಿಯ Xiaomi 14 ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಸೇರಿಸಿದೆ. ಇದನ್ನು ಕಂಪನಿ Xiaomi Civi 14 ಎಂದು ಹೆಸರಿಸಿದ್ದು ಇದನ್ನು ಕ್ಯಾಮೆರಾ ವಿಭಾಗದಲ್ಲಿ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಸ್ಮಾರ್ಟ್ಫೋನ್ Qualcomm Snapdragon 8s Gen 3 ಪ್ರೊಸೆಸರ್ನೊಂದಿಗೆ ಮುಂಭಾಗದಲ್ಲಿ ನಿಮಗೆ 32MP + 32MP ಡುಯಲ್ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ Xiaomi Civi 14 ಸ್ಮಾರ್ಟ್ಫೋನ್ ಖರೀದಿಸಲು ಒಂದಲ್ಲ ಎರಡಲ್ಲ ಹತ್ತಾರು ಫೀಚರ್ಗಳು ನಿಮಗೆ ತನ್ನತ್ತ ಸೆಳೆಸುತ್ತದೆ. ನೀವು ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನ್ನು ಪರಿಶೀಲಿಸಿಕೊಳ್ಳಿ.

Also Read: ಭಾರತದಲ್ಲಿ HMD 105 ಮತ್ತು HMD 110 ಫೀಚರ್ ಫೋನ್‌ಗಳು ಕೇವಲ ₹999 ರೂಗಳಿಗೆ ಬಿಡುಗಡೆ!

ಭಾರತದಲ್ಲಿ Xiaomi Civi 14 ಡಿಸ್ಪ್ಲೇ ವಿವರಗಳು

ಮೊದಲಿಗೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ Xiaomi 14 Civi ಸ್ಮಾರ್ಟ್ಫೋನ್ 1.5K ರೆಸಲ್ಯೂಶನ್‌ನೊಂದಿಗೆ 6.55 ಇಂಚಿನ Quad Curved AMOLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 120Hz ರಿಫ್ರೆಶ್ ರೇಟ್ ಅನ್ನು ಬರೋಬ್ಬರಿ 240Hz ವರೆಗೆಗಿನ ಟಚ್ ಸ್ಯಾಂಪ್ಲಿಂಗ್ ಸಪೋರ್ಟ್ ಮಾಡುತ್ತದೆ. ಡಿಸ್ಪ್ಲೇಯ ಅನುಭವವನ್ನು ಹೆಚ್ಚಿಸಲು HDR10+ ಜೊತೆಗೆ Dolby Atmos ಸೌಂಡ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದ್ದು ಹೆಚ್ಚು ಶಕ್ತಿಶಾಲಿಯಾಗಿರುವುನ್ನು ಖಾತ್ರಿಪಡಿಸುವುದರೊಂದಿಗೆ ನಿಮ್ಮ ಕಣ್ಣುಗಳನ್ನು ನೇರಳಾತೀತ ಬ್ಲೂ ಕಿರಣಗಳಿಂದ ರಕ್ಷಿಸಲು TÜV Rheinland ಅನ್ನು ಸಹ ಹೊಂದಿದೆ.

Xiaomi 14 Civi launched in India here top 5 feature and price
Xiaomi 14 Civi launched in India here top 5 feature and price

ಭಾರತದಲ್ಲಿ Xiaomi Civi 14 ಕ್ಯಾಮೆರಾ ಹೇಗಿದೆ?

ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಒಳಗೆ ನಿಮಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದ್ದು ಲೈಕಾ (Leica) ಎಂಜಿನಿಯರಿಂಗ್‌ನೊಂದಿಗೆ ಕೈ ಜೋಡಿಸಿ ಅತ್ಯುತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ಸಹಕಾರಿಯಾಗಲಿದೆ. ಇದು 25mm ಸಿನಿಮೀಯ HDR ನೊಂದಿಗೆ 50MP ಮೆಗಾಪಿಕ್ಸೆಲ್ LEICA VARIO-SUMMILUX ಪ್ರೈಮರಿ f/1.63 ಅಪರ್ಚರ್ನೊಂದಿಗೆ ಕ್ಯಾಮೆರಾ 2x ಆಪ್ಟಿಕಲ್ ಜೂಮ್‌ನೊಂದಿಗೆ ಬರುತ್ತದೆ. ಮತ್ತೊಂದು 50MP ಮೆಗಾಪಿಕ್ಸೆಲ್ ಲೈಕಾ ಪೋಟ್ರೇಟ್ ಟೆಲಿಫೋಟೋ f/1.98 ಅಪರ್ಚರ್ನೊಂದಿಗೆ ಲೆನ್ಸ್ ಬಂದ್ರೆ ಕೊನೆಯದಾಗಿ 12MP ಮೆಗಾಪಿಕ್ಸೆಲ್ ಲೈಕಾ ಅಲ್ಟ್ರಾ-ವೈಡ್ ಲೆನ್ಸ್ f/2.2 ಅಪರ್ಚರ್ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಮೊದಲನೇಯದು 32MP ಮೆಗಾಪಿಕ್ಸೆಲ್ ಪ್ರೈಮರಿ f/2.0 ಅಪರ್ಚರ್ನೊಂದಿಗೆ ಬಂದ್ರೆ ಮತ್ತೊಂದು 32MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಹೊಂದಿದೆ.

ಭಾರತದಲ್ಲಿ Xiaomi ಸಿವಿ 14 ಹಾರ್ಡ್ವೇರ್ ಮಾಹಿತಿಗಳೇನು?

ಈ ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದ್ದು 8GB LPDDR5X RAM ಮತ್ತು 256GB UFS 4.0 ಸ್ಟೋರೇಜ್ ಮತ್ತು 12GB LPDDR5X RAM ಮತ್ತು 512GB UFS 4.0 ಸ್ಟೋರೇಜ್ ಬಿಡುಗಡೆಯಾಗಿದ್ದು ಸ್ಮಾರ್ಟ್ಫೋನ್ Qualcomm Snapdragon 8s Gen 3 ಪ್ರೊಸೆಸರ್ ಹೊಂದಿದ್ದು ಬಳಕೆದಾರರು ಇದರಲ್ಲಿ ಲೇಟೆಸ್ಟ್ ಆಂಡ್ರಾಯ್ಡ್ 14 ಆಧಾರಿತ HyperOS ಅನ್ನು ಪಡೆಯುತ್ತಾರೆ. ಅಲ್ಲದೆ ಇದರ CPU ಪ್ರೈಮ್ ಕೋರ್ ಸುಮಾರು 3.0GHz ವರೆಗೆ ಹೊಂದಿದೆ ಅಂದ್ರೆ ಯೋಚಿಸಿ ಇದೆಷ್ಟು ಸ್ಪೀಡ್ ಆಗಿರಬಹುದು.

Xiaomi 14 Civi launched in India here top 5 feature and price
Xiaomi 14 Civi launched in India here top 5 feature and price

ಭಾರತದಲ್ಲಿ Xiaomi ಸಿವಿ 14 ಬ್ಯಾಟರಿ ಮತ್ತು ಸೆನ್ಸರ್

ಈ ಲೇಟೆಸ್ಟ್ Xiaomi 14 Civi ಸ್ಮಾರ್ಟ್ಫೋನಲ್ಲಿ 67W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ ಇಲ್ಲಿ ಈ ಸ್ಮಾರ್ಟ್ಫೋನ್ ಕೊಂಚ ಬೇಸರ ಮಾಡುತ್ತವೆ ಯಾಕೆಂದರೆ ಇದಕ್ಕಿಂದ ಕಡಿಮೆ ಬೆಲೆಯ ಶ್ರೇಣಿಯಲ್ಲಿರುವ ಫೋನ್‌ಗಳು 120W ಫಾಸ್ಟ್ ಚಾರ್ಜಿಂಗ್ ಮತ್ತು 5000mAh ಬ್ಯಾಟರಿಯನ್ನು ನೀಡುವುದನ್ನು ಮರುಕ್ಕಟೆಯಲ್ಲಿ ಕಾಣಬಹುದು. ಅಲ್ಲದೆ ಸ್ಮಾರ್ಟ್ಫೋನ್ ನಿಮಗೆ ನಿಮ್ಮ Wi-Fi 6, NFC, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು Dolby Atmos ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಪಡೆಯುತ್ತೀರಿ.

ಭಾರತದಲ್ಲಿ Xiaomi Civi 14 ಬೆಲೆ ಮತ್ತು ಲಭ್ಯತೆಗಳು

ಈ ಸ್ಮಾರ್ಟ್ಫೋನ್ ಅನ್ನು ಆಸಕ್ತರು 20ನೇ ಜೂನ್ 2024 ರಿಂದ ಮೊದಲ ಮಾರಾಟದಲ್ಲಿ ಖರೀದಿಸಬಹುದು. Xiaomi 14 Civi ಪ್ರಸ್ತುತ ಕ್ರೂಸ್ ಬ್ಲೂ, ಮ್ಯಾಚಾ ಗ್ರೀನ್ ಮತ್ತು ಶಾಡೋ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳ ಬೆಲೆಯ ಬಗ್ಗೆ ಮಾತನಾಡುವುದಾದ್ರೆ ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ₹39,999 ರೂಗಳಿಗೆ ನಿಗದಿಪಡಿಸಿದರೆ ಇದರ 12GB RAM ಮತ್ತು 512GB ಸ್ಟೋರೇಜ್ ಅನ್ನು ₹44,999 ರೂಗಳಿಗೆ ನಿಗದಿಪಡಿಸಿದೆ.

Xiaomi 14 Civi launched in India here top 5 feature and price
Xiaomi 14 Civi launched in India here top 5 feature and price

ಈ ಸ್ಮಾರ್ಟ್ಫೋನ್ ಅನ್ನು Flipkart ಮತ್ತು Xiaomi ಅಧಿಕೃತ ವೆಬ್‌ಸೈಟ್ ಮತ್ತು ಇತರ ಹತ್ತಿರದ ಸ್ಮಾರ್ಟ್ಫೋನ್ ಅಂಗಡಿಗಳಲ್ಲಿ ಖರೀದಿಸಬಹುದು. Xiaomi 14 Civi ಸ್ಮಾರ್ಟ್ಫೋನ್ ಬಿಡುಗಡೆಯ ಹೆಚ್ಚುವರಿ ಕೊಡುಗೆಯಾಗಿ ICICI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 3000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಸಹ ವಿನಿಮಯ ಕೊಡುಗೆಯಾಗಿ ಬಳಸಿ 3,000 ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo