ಹೊಸ 5G ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ! ಹಾಗಾದ್ರೆ ಯಾವ ಬ್ರಾಂಡ್‌ನ ಸ್ಮಾರ್ಟ್​​ಫೋನ್ ಬೆಸ್ಟ್?

ಹೊಸ 5G ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ! ಹಾಗಾದ್ರೆ ಯಾವ ಬ್ರಾಂಡ್‌ನ ಸ್ಮಾರ್ಟ್​​ಫೋನ್ ಬೆಸ್ಟ್?
HIGHLIGHTS

ಈ ವರ್ಷದ ವರದಿಯಂತೆ Xiaomi, Realme ಮತ್ತು Motorola ಕಂಪನಿಗಳ 5G ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನರು ಇಷ್ಟಪಡುತ್ತಿದ್ದಾರೆ.

ಇದರಲ್ಲೂ ಸುಮಾರು ಕೇವಲ 10 ಸಾವಿರದಿಂದ 20 ಸಾವಿರ ರೂಪಾಯಿಯ ಒಳಗಿನ ಸ್ಮಾರ್ಟ್ ಫೋನ್ಗಳು ಹೆಚ್ಚಾಗಿ ಸೇರಿವೆ.

ವರದಿಯನ್ನು ನಂಬುವುದಾದರೆ 20 ಸಾವಿರ ರೂಪಾಯಿಯ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಹೆಚ್ಚು ಖರೀದಿಸಲಾಗುತ್ತದೆ.

Budget 5G Phones in India: ಈ ವರ್ಷದ ವರದಿಯಂತೆ Xiaomi, Realme ಮತ್ತು Motorola ಕಂಪನಿಗಳ 5G ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನರು ಇಷ್ಟಪಡುತ್ತಿದ್ದಾರೆ. ಹೊಸ 5G ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ! ಹಾಗಾದ್ರೆ ಯಾವ ಬ್ರಾಂಡ್‌ನ ಸ್ಮಾರ್ಟ್​​ಫೋನ್ ಬೆಸ್ಟ್ ಎಂದು ತಿಳಿಯೋದು ಹೆಚ್ಚು ಮುಖ್ಯವಾಗಿದೆ. ನೀವು ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ ಯಾವುದು ಉತ್ತಮ ಸ್ಮಾರ್ಟ್‌ಫೋನ್ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಪರವಾಗಿಲ್ಲ. ಭಾರತದಲ್ಲಿ ಯಾವ 5G ಸ್ಮಾರ್ಟ್‌ಫೋನ್ ಹೆಚ್ಚು ಇಷ್ಟವಾಗುತ್ತಿದೆ ಎಂಬುದನ್ನು ಇಂದು ನಾವು ವರದಿಯಿಂದ ವಿವರಿಸಲು ಪ್ರಯತ್ನಿಸುತ್ತೇವೆ. ಇದರಲ್ಲಿ ಯಾವ ಬ್ರಾಂಡ್ ನ ಸ್ಮಾರ್ಟ್ ಫೋನ್ ಪಾಲು ಎಷ್ಟು? ವಿವರವಾಗಿ ತಿಳಿಯೋಣ.

5G ಫೋನ್‌ ಮಾರುಕಟ್ಟೆಯನ್ನು Xiaomi ಮತ್ತು Realme ಕಂಪನಿಗಳು ಆಳುತ್ತಿವೆ

ಈ ವರ್ಷದ ವರದಿಯಂತೆ Xiaomi, Realme ಮತ್ತು Motorola ಕಂಪನಿಗಳ 5G ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನರು ಇಷ್ಟಪಡುತ್ತಿದ್ದಾರೆ. ಇದರಲ್ಲೂ ಸುಮಾರು ಕೇವಲ 10 ಸಾವಿರದಿಂದ 20 ಸಾವಿರ ರೂಪಾಯಿಯ ಒಳಗಿನ ಸ್ಮಾರ್ಟ್ ಫೋನ್ಗಳು ಹೆಚ್ಚಾಗಿ ಸೇರಿವೆ. ವರದಿಯನ್ನು ನಂಬುವುದಾದರೆ 20 ಸಾವಿರ ರೂಪಾಯಿಯ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಹೆಚ್ಚು ಖರೀದಿಸಲಾಗುತ್ತದೆ. 5G ಫೋನ್‌ ಮಾರುಕಟ್ಟೆಯನ್ನು Xiaomi ಮತ್ತು Realme ಕಂಪನಿಗಳು ಆಳುತ್ತಿವೆ. ಅವೆಂದರೆ ಈ ಕಂಪನಿಗಳು ಒಟ್ಟು ಪಾಲು ಸುಮಾರು 80% ಪ್ರತಿಶತ ಹೊಂದಿದ್ದು ಅತ್ಯುತ್ತಮ ಡೀಲ್‌ಗಳೊಂದಿಗೆ ಅಪ್‌ಗ್ರೇಡ್ ಮಾಡುವ ಸಮಯವನ್ನು ನಿಮಗೆ ನೀಡುತ್ತಿವೆ.

ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ನ ವ್ಯಾಪ್ತಿಯು ವೇಗವಾಗಿ ಹೆಚ್ಚುತ್ತಿದೆ

ಭಾರತದಲ್ಲಿ 5G ನೆಟ್‌ವರ್ಕ್ ಅನ್ನು Jio ಮತ್ತು Airtel ಟೆಲಿಕಾಂ ಕಂಪನಿಗಳು ನೀಡುತ್ತಿವೆ. ಅದರಲ್ಲೂ ಪ್ರಾರಂಭದ ಕಾರಣ ಈ ಏರ್‌ಟೆಲ್ ಮತ್ತು ಜಿಯೋ ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿಯೇ ನೀಡುತ್ತಿದ್ದರೆ. ಆದಾಗ್ಯೂ ಈ ಸೇವೆಯು ದಿನದಿಂದ ದಿನಕ್ಕೆ ದೇಶದ ಆಯ್ದ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಒಂದು ವರ್ಷದೊಳಗೆ ದೇಶಾದ್ಯಂತ 5G ನೆಟ್‌ವರ್ಕ್ ಹೊರತರಲಿದೆ ಎಂಬುದು ಜನರಿಗೆ ಕಂಪನಿಗಳು ತಿಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯರು ತಮ್ಮ ಹೊಸ ಸ್ಮಾರ್ಟ್‌ಫೋನ್ ಆಗಿ ಕೇವಲ 5G ಅನ್ನು ಖರೀದಿಸುತ್ತಿದ್ದಾರೆ. ನಾವು ದುಬಾರಿ 5G ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುವಾದರೆ ಈ ವಿಭಾಗದಲ್ಲಿ Samsung, Vivo ಮತ್ತು Oppo ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಆಪಲ್ ಪ್ರೀಮಿಯಂ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.

ವರ್ಷದ ಅಂತ್ಯದ ವೇಳೆಗೆ ಅರ್ಧಕ್ಕಿಂತ ಹೆಚ್ಚು 5G ಫೋನ್‌ಗಳು

ಸೈಬರ್ ಮೀಡಿಯಾ ರಿಸರ್ಚ್ ವರದಿಯ ಪ್ರಕಾರ 2023 ರ ಅಂತ್ಯದ ವೇಳೆಗೆ 70% ಪ್ರತಿಶತ 5G ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2022 ರಲ್ಲಿ 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು ಶೇಕಡಾ 45 ಆಗಿರಬಹುದು. 2022 ರ ವರ್ಷದಲ್ಲಿ 100 ಕ್ಕೂ ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ನಾವು ಒಟ್ಟು ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಮಾತನಾಡಿದರೆ ಅದರಲ್ಲಿ 75 ಪ್ರತಿಶತ 5G ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo