32MP ಸೆಲ್ಫಿ ಕ್ಯಾಮೆರಾದೊಂದಿಗೆ Xiaomi 14 Series ಮುಂದಿನ ತಿಂಗಳು ಬಿಡುಗಡೆ ಸಿದ್ದ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 21-Feb-2024
HIGHLIGHTS

Xiaomi ತನ್ನ ಮುಂಬರಲಿರುವ 5G ಸ್ಮಾರ್ಟ್ಫೋನ್ ಸರಣಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

Xiaomi ಈ ಸ್ಮಾರ್ಟ್‌ಫೋನ್‌ ಸರಣಿಯನ್ನು ಮುಂದಿನ 7ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಚೀನಾದಲ್ಲಿ ಈಗಾಗಲೇ Xiaomi 14, Xiaomi 14 Pro ಮತ್ತು Xiaomi 14 Ultra ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರಾಂಡ್ Xiaomi ತನ್ನ ಮುಂಬರಲಿರುವ 5G ಸ್ಮಾರ್ಟ್ಫೋನ್ ಸರಣಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದನ್ನು ಕಂಪನಿ Xiaomi 14 Series ಎಂದು ಹೆಸರಿಸಿದ್ದು ಇದರ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ. Xiaomi ಈ ಸ್ಮಾರ್ಟ್‌ಫೋನ್‌ ಸರಣಿಯನ್ನು ಮುಂದಿನ 7ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಜ್ಜಾಗಿದ್ದು ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳನ್ನು ತಿಳಿಯಿರಿ. ಈಗಾಗಲೇ ಕಂಪನಿ ಈ ಫೋನ್ ಚೀನಾದಲ್ಲಿ ಒಟ್ಟು ಮೂರು Xiaomi 14, Xiaomi 14 Pro ಮತ್ತು Xiaomi 14 Ultra ಎಂಬ ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದೆ. ಇದರ ಕ್ರಮವಾಗಿ ಭಾರತಲ್ಲಿ ಎರಡು ರೂಪಾಂತರ ಬಿಡುಗಡೆಯಾಗಲು ನಿರೀಕ್ಷಿಸಬಹುದು.

Also Read: Unlimited ಕರೆ ಮತ್ತು 5G ಡೇಟಾದೊಂದಿಗೆ ಉಚಿತ Prime Video ಮತ್ತು Disney Hotstar ನೀಡುವ Jio ಅತ್ಯುತ್ತಮ ಪ್ಲಾನ್!

Xiaomi 14 Series ಮುಂದಿನ ತಿಂಗಳು ಬಿಡುಗಡೆ

ಈವರೆಗೆ ಶಿಯೋಮಿ ಇಂಡಿಯಾ ಭಾರತಕ್ಕೆ ಬರುವ Xiaomi 14 ಫೋನ್ ಬಗ್ಗೆ ದಿನಾಂಕವನ್ನು ಬಿಟ್ಟು ಬೇರೇನೂ ಬಹಿರಂಗಪಡಿಸಿಲ್ಲ. ಅದರಲ್ಲೂ ಸ್ಮಾರ್ಟ್ಫೋನ್ ಫೀಚರ್ ಅಥವಾ ಇವುಗಳ ಬೆಲೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಆದರೆ ಚೀನಾದಲ್ಲಿ ಬಿಡುಗಡೆಯಾದ ಈ ಫೋನ್ ಬಗ್ಗೆ ತಿಳಿದುಕೊಳ್ಳುವುದರಿಂದ ಭಾರತೀಯ ಫೋನ್ ಹೇಗಿರುತ್ತದೆ ಎಂದು ನಾವು ಊಹಿಸಬಹುದು ಅಷ್ಟೇ.

32MP ಸೆಲ್ಫಿ ಕ್ಯಾಮೆರಾದೊಂದಿಗೆ Xiaomi 14 Series`

ಅಲ್ಲದೆ ಈಗಾಗಲೇ ಮೇಲೆ ತಿಳಿಸಿರುವಂತೆ ಭಾರತದಲ್ಲಿ Xiaomi ತನ್ನ ಮುಂಬರಲಿರುವ Xiaomi 14 Series ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ 7ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಿದ್ಧವಾಗಿರುವುದನ್ನು ಕಂಪನಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದೆ.

ಚೀನಾದ Xiaomi 14 ವಿಶೇಷಣಗಳು

ಚೀನಾದಲ್ಲಿ ಬಿಡುಗಡೆಯಾದ Xiaomi 14 ಸ್ಮಾರ್ಟ್ಫೋನ್ 6.36 ಇಂಚಿನ 1.5K LTPO OLED ಸ್ಕ್ರೀನ್ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 3000 nits ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಚೀನಾದಲ್ಲಿ ಬಿಡುಗಡೆಯಾದ ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದ್ದು ಕಂಪನಿ ಲೈಕ ಸೆನ್ಸರ್ ಸಹಯೋಗದೊಂದಿಗೆ ಮಾಡಲಾಗಿದೆ. ಇವುಗಳಲ್ಲಿ ಮುಖ್ಯ ಕ್ಯಾಮರಾ 50MP ಆಗಿದೆ, OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ Leica Summilux ಲೆನ್ಸ್ ಇದೆ. ಫೋನ್ 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಲೆನ್ಸ್ ಅನ್ನು ಸಹ ಒದಗಿಸಲಾಗಿದೆ.

32MP ಸೆಲ್ಫಿ ಕ್ಯಾಮೆರಾದೊಂದಿಗೆ Xiaomi 14 Series

ಚೀನಾದಲ್ಲಿ ಬಿಡುಗಡೆಯಾದ ಆವೃತ್ತಿಯು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಇದು ವೀಡಿಯೊ ಕರೆ ಮತ್ತು ಉತ್ತಮ ಸೆಲ್ಫಿಗೆ ಉತ್ತಮವಾಗಿದೆ. ಫೋನ್ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಬೃಹತ್ 4610mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಚೀನಾದಲ್ಲಿ ಜೇಡ್ ಗ್ರೀನ್, ಕಪ್ಪು, ಬಿಳಿ ಮತ್ತು ಸ್ನೋ ಮೌಂಟೇನ್ ಪಿಂಕ್ ಎಂಬ 4 ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಆದರೆ Xiaomi 14 Series ಭಾರತದಲ್ಲಿ ಈ ಯಾವ ಯಾವ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವುದು ಇನ್ನೂ ತಿಳಿದಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :