ಕ್ಯಾಮೆರಾ ಪ್ರಿಯರಿಗಾಗಿಯೇ Xiaomi 13 Ultra ಏಪ್ರಿಲ್ 18ಕ್ಕೆ ಬಿಡುಗಡೆ! ಇಲ್ಲಿದೆ ಬೆಲೆ ಮತ್ತು ಫೀಚರ್ಗಳು

ಕ್ಯಾಮೆರಾ ಪ್ರಿಯರಿಗಾಗಿಯೇ Xiaomi 13 Ultra ಏಪ್ರಿಲ್ 18ಕ್ಕೆ ಬಿಡುಗಡೆ! ಇಲ್ಲಿದೆ ಬೆಲೆ ಮತ್ತು ಫೀಚರ್ಗಳು
HIGHLIGHTS

Xiaomi 13 Ultra ಲೈಕಾ ಬ್ರಾಂಡ್ ಲೆನ್ಸ್‌ಗಳೊಂದಿಗೆ ಸರ್ಕ್ಯುಲರ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.

Xiaomi 13 Ultra ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಮತ್ತು ಚೀನಾದಲ್ಲಿ ಏಪ್ರಿಲ್ 18 ರಂದು ಬಿಡುಗಡೆ ಮಾಡಲಾಗುತ್ತದೆ.

Xiaomi 13 Ultra ಫೋನ್ AMOLED ಡಿಸ್ಪ್ಲೇ ಜೊತೆಗೆ 12GB RAM ಮತ್ತು ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ನಿರೀಕ್ಷೆಯಿದೆ.

Xiaomi ಏಪ್ರಿಲ್ 18 ರಂದು ಜಾಗತಿಕವಾಗಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್ ಆದ Xiaomi 13 Ultra ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ವಿಶ್ವಾದ್ಯಂತ ಈ ಫೋನ್‌ ಬಿಡುಗಡೆಯಾದ ಸಮಯದಲ್ಲೆ ಚೀನಾದಲ್ಲು ಬಿಡುಗಡೆ ಆಗಲಿದೆ. ಇದರ ಜೊತೆಗೆ Xiaomi Pad 6 ಅನ್ನು ಇದೇ ಸಮಾರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ Xiaomi 13 Ultra ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ವಂದತಿಯ ಪ್ರಕಾರ Xiaomi ಕಂಪನಿಯ ಈ ಸ್ಮಾರ್ಟ್‌ಫೋನ್ ಇಲ್ಲಿಯವರೆಗಿನ ಫೋನ್‌ಗಳಿಗಿಂತ ಅತ್ಯಂತ ದುಬಾರಿ ಬೆಲೆಯದಾಗಿದೆ.

Xiaomi 13 Ultra ಫೀಚರ್ (ನಿರೀಕ್ಷಿತ)

ವದಂತಿಗಳ ಪ್ರಕಾರ Xiaomi 13 Ultra ಫೋನ್ 6.7 ಇಂಚಿನ 2K AMOLED ಡಿಸ್ಪ್ಲೇಯನ್ನು 120 Hz ರಿಫ್ರೆಶ್ ದರದೊಂದಿಗೆ ಹೊಂದಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ Xiaomi 13 Ultra ಆಂಡ್ರಾಯ್ಡ್ 13 OS ಅನ್ನು MIUI 14 ಲೇಯರ್‌ನೊಂದಿಗೆ ರನ್ ಮಾಡುತ್ತದೆ ಎಂದು ಸೋರಿಕೆಗಳು ಸೂಚಿಸುತ್ತವೆ.

ಬಿಡುಗಡೆ ಪ್ರಕಟಣೆಯ ಪ್ರಕಾರ Xiaomi 13 Ultra ಸ್ಮಾರ್ಟ್‌ಫೋನ್ ಲೈಕಾ-ಬ್ರಾಂಡ್ ಕ್ಯಾಮೆರಾ ಲೆನ್ಸ್‌ಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ. ಇದು 50MP Sony IMX989 ಸೆನ್ಸರ್ ಜೊತೆಗೆ ಮೂರು ಹೆಚ್ಚುವರಿ 50MP ಸೆನ್ಸರ್ಗಳೊಂದಿಗೆ ಕ್ವಾಡ್-ಕ್ಯಾಮೆರಾ ಸೆಟಪ್ ಆಗಿದ್ದು ಸೆಲ್ಫಿಗಾಗಿ 32MP ಕ್ಯಾಮೆರಾವನ್ನು ಹೊಂದಿರಬಹುದು. Xiaomi 13 Ultra ಸ್ಮಾರ್ಟ್ಫೋನ್ 4900mAh ಬ್ಯಾಟರಿ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ.

Xiaomi 13 Ultra ಡಿಸೈನ್ (ನಿರೀಕ್ಷಿತ)

ಈಗಾಗಲೇ ಫೋನ್‌ನ ವಿನ್ಯಾಸವು ಸೋರಿಕೆಯಾಗಿದ್ದು ಈವೆಂಟ್ ಟೀಸರ್ ಕ್ಯಾಮೆರಾ ಮಾಡ್ಯೂಲ್ ಅನ್ನು ತೋರಿಸಿದೆ. ಇದು ಸ್ವಲ್ಪ ದೊಡ್ಡ ಸರ್ಕ್ಯುಲರ್ ಕ್ಯಾಮೆರಾ ಮಾಡ್ಯೂಲ್ ಆಗಿದ್ದು ಜೊತೆಗೆ ನಾಲ್ಕು ಸೆನ್ಸರ್ಗಳನ್ನು ಹೊಂದಿರುವಂತೆ ಕಾಣುತ್ತದೆ. ಅಲ್ಲದೆ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾ ಮತ್ತು ಕರ್ವ್ಡ್ ಎಡ್ಜ್ ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ವೈಟ್ ಸೆರಾಮಿಕ್ ಮತ್ತು ಬ್ಲ್ಯಾಕ್ ಲೆದರ್ ಫಿನಿಶ್‌ ಎಂಬ ಎರಡು ಕಲರ್‌ಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.

Xiaomi 13 Ultra ಬೆಲೆ ​(ನಿರೀಕ್ಷಿತ)

ಹಲವಾರು ಸೋರಿಕೆಗಳು ಮತ್ತು ವದಂತಿಗಳ ಪ್ರಕಾರ Xiaomi 13 Ultra ಎಷ್ಟು ವೆಚ್ಚವಾಗಬಹುದು ಎಂದು ಈಗಾಗಲೇ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆ CNY 2,699 (ಸುಮಾರು ರೂ 75,100) ರಿಂದ CNY 7,499 (ಸುಮಾರು ರೂ 89,500) ವರೆಗೆ ಇರುತ್ತದೆ. ಈ ವೆಚ್ಚವು ಮಾರುಕಟ್ಟೆಯ ಅನುಗುಣವಾಗಿ ಬದಲಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo