Xiaomi 13 Pro: ಶಿಯೋಮಿ ಕಂಪನಿ ತನ್ನ ಹೊಚ್ಚ ಹೊಸ ಮುಂಬರಲಿರುವ Xiaomi 13 Pro ಸ್ಮಾರ್ಟ್ಫೋನ್ ಅನ್ನು ಇದೇ ಫೆಬ್ರವರಿ 26 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಹಿಂದೆ Huawei ನೊಂದಿಗೆ ಸಹಯೋಗ ಹೊಂದಿರುವ ಜರ್ಮನ್ ಆಪ್ಟಿಕಲ್ ಕಂಪನಿಯಾದ Leica ನಿಂದ ಆಪ್ಟಿಮೈಸ್ ಮಾಡಲಾದ ಕ್ಯಾಮೆರಾಗಳನ್ನು ಹೊಂದಿದೆ. ಅದರ ಅಧಿಕೃತ ಬಿಡುಗಡೆಯ ಮೊದಲು ಟಿಪ್‌ಸ್ಟರ್ ಸುಧಾಂಶು ಅಂಬೋರ್ ಅವರು ತಮ್ಮ ಟ್ವಿಟ್ಟರ್ ಮೂಲಕ ಇದರ ನಿರೀಕ್ಷಿತ ಜಾಗತಿಕ ಬೆಲೆಯನ್ನು ಸೋರಿಕೆ ಮಾಡಿದೆ. ಮತ್ತೊಂದೆಡೆ Xiaomi 13 Pro ಇತರ ದೇಶಗಳಿಗಿಂತ ಭಾರತದಲ್ಲಿ ಕೈಗೆಟುಕುವ ಬೆಲೆಯನ್ನು ಹೊಂದಿರಬಹುದು. ಈಗಾಗಲೇ ಇದನ್ನು ಚೀನಾದಲ್ಲಿ ಸಾಕಷ್ಟು ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.
ಚೀನಾದಲ್ಲಿ Xiaomi 13 Pro ಈಗಾಗಲೇ ಬಿಡುಗಡೆಯಾಗಿದ್ದು ಇದರ ಆರಂಭಿಕ ವೇರಿಯಂಟ್ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ಗೆ CNY 4,999 (59,000 ರೂಗಳು) ಆಗಿದೆ. ನಂತರ ಇದರ 8GB RAM ಮತ್ತು 256GB ಸ್ಟೋರೇಜ್ ಮತ್ತು 12GB RAM ಮತ್ತು 256GB ಸ್ಟೋರೇಜ್ ನೊಂದಿಗೆ ಮುಂದಿನ ಎರಡು ಆಯ್ಕೆಗಳು ಕ್ರಮವಾಗಿ CNY 5,399 (ಸುಮಾರು 64,000 ರೂಗಳು) ಮತ್ತು CNY 5,799 (ಸುಮಾರು 68,700 ರೂಗಳು) ಬೆಲೆಯನ್ನು ಹೊಂದಿವೆ. ಕೊನೆಯದಾಗಿ 12GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಅದರ ಟಾಪ್-ಎಂಡ್ ಮಾಡೆಲ್ CNY 6,299 (ಸುಮಾರು 74,600 ರೂಗಳು) ಬೆಲೆಯನ್ನು ಹೊಂದಿದೆ.
https://twitter.com/XiaomiIndia/status/1627986501245227009?ref_src=twsrc%5Etfw
ಈ ಸ್ಮಾರ್ಟ್ಫೋನ್ ಫೀಚರ್‌ನ ವಿಭಾಗದಲ್ಲಿ Xiaomi 13 Pro ಫೋನ್ 50-ಮೆಗಾಪಿಕ್ಸೆಲ್ 1-ಇಂಚಿನ Sony IMX989 ಮುಖ್ಯ ಸೆನ್ಸರ್, 120W ಕೇಬಲ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,820mAh ಬ್ಯಾಟರಿ ಮತ್ತು 6.73-ಇಂಚಿನ 2K OLED ಡಿಸ್ಪ್ಲೇ ಅನ್ನು ಒಳಗೊಂಡಿರಬಹುದು. ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿರುವುದರಿಂದ ಹೆಚ್ಚಿನ ಬೆಲೆಯನ್ನು ಬೆಂಬಲಿಸಲು ಕಂಪನಿಯು ಮೆಟಲ್ ಮತ್ತು ಗ್ಲಾಸ್ನಂತಹ ಬೆಲೆಬಾಳುವ ವಸ್ತುಗಳನ್ನು ಬಳಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.