ಇಂದು Vivo Z1 Pro ಭಾರಿ ಮಾರಾಟದ ನಂತರ ಮತ್ತೊಮ್ಮೆ ಮಾರಾಟಕ್ಕೆ ಲಭ್ಯವಾಗಲಿದೆ. ಈ ಸೆಲ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್‌ನಲ್ಲಿ ನಡೆಯಲಿದೆ. ಈ ಫೋನ್‌ನ ಆರಂಭಿಕ ಬೆಲೆ 14,990 ರೂಗಳಾಗಿವೆ. ಈ ಫೋನ್ ಅನೇಕ ವಿಶೇಷತೆಗಳೊಂದಿಗೆ ಬರುತ್ತದೆ. ಅದರಲ್ಲಿ ಮುಖ್ಯವಾಗಿ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 712 ಪ್ರೊಸೆಸರ್ ಮತ್ತು 32MP ಮೆಗಾಪಿಕ್ಸೆಲ್ ಇನ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಫೋನ್‌ನಲ್ಲಿ 6GB ಯ RAM ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಈ ಅದ್ದೂರಿಯ ಸ್ಮಾರ್ಟ್ಫೋನ್ ಒಳಗೊಂಡಿದೆ. ಅಲ್ಲದೆ Vivo Z1 Pro ಸ್ಮಾರ್ಟ್ಫೋನನ್ನು ಗೇಮಿಂಗ್ ಸ್ಮಾರ್ಟ್ಫೋನ್ ಎಂದು ಕರೆಯುತ್ತದೆ.
ಇದು 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 14,990 ರೂಪಾಯಿಗಳು. ಅದೇ ಸಮಯದಲ್ಲಿ 6GB ಯ RAM ಮತ್ತು 64GB ಸ್ಟೋರೇಜ್ ಕೇವಲ 16,990 ರೂಪಾಯಿಗಳಿಗೆ ಲಭ್ಯವಿದೆ. ಇದಲ್ಲದೆ 6GB ಯRAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 17,990 ರೂಗಳಲ್ಲಿ ಪಡೆಯಬವುದು. ಈ ಎಲ್ಲಾ ಮೂರು ರೂಪಾಂತರಗಳನ್ನು ಮಿರರ್ ಬ್ಲ್ಯಾಕ್, ಸೋನಿಕ್ ಬ್ಲ್ಯಾಕ್ ಮತ್ತು ಸೋನಿಕ್ ಬ್ಲೂ ಕಲರ್ ರೂಪಾಂತರಗಳಲ್ಲಿ ಖರೀದಿಸಬಹುದು. ರಿಲಯನ್ಸ್ ಜಿಯೋ ಬಳಕೆದಾರರಿಗೆ 6,000 ರೂ ಕ್ಯಾಶ್‌ಬ್ಯಾಕ್ ನೀಡಲಾಗುವುದು. ಈ ಕ್ಯಾಶ್‌ಬ್ಯಾಕ್ ಅನ್ನು ಬಳಕೆದಾರರಿಗೆ 150 ರೂಗಳ 40 ರಿಯಾಯಿತಿ ಕೂಪನ್‌ಗಳಾಗಿ ನೀಡಲಾಗುವುದು.
ಇದು 6.53 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಐಪಿಎಸ್ ಪ್ರದರ್ಶನವನ್ನು ಹೊಂದಿದೆ. ಈ ಫೋನ್‌ನಲ್ಲಿ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 712 ಪ್ರೊಸೆಸರ್ ಅಡ್ರಿನೊ 636 ಜಿಪಿಯು ಹೊಂದಿದೆ. ಈ ಫೋನ್ ಗೇಮ್ ಮೋಡ್ 5.0 ನೊಂದಿಗೆ ಬರುತ್ತದೆ. ಇದು ಸೆಂಟರ್ ಟರ್ಬೊ, ಎಐ ಟರ್ಬೊ, ನೆಟ್ ಟರ್ಬೊ, ಕೂಲಿಂಗ್ ಟರ್ಬೊ ಮತ್ತು ART++ ಟರ್ಬೊ ಸೇರಿದಂತೆ ಬಹು ಟರ್ಬೊ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 9 ಪೈ ಆಧಾರಿತ ಫನ್‌ಟಚ್ ಓಎಸ್ 9 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಇದೆ. ಇದರ ಪ್ರೈಮರಿ 16MP ಮೆಗಾಪಿಕ್ಸೆಲ್‌ಗಳು ಇನ್ನೊಂದು 8MP ಮೆಗಾಪಿಕ್ಸೆಲ್‌ಗಳು ಮತ್ತು ಮೂರನೆಯದು 2MP ಮೆಗಾಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಅದೇ ಸಮಯದಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 32MP ಮೆಗಾಪಿಕ್ಸೆಲ್ ಫ್ರಂಟ್ ಸೆನ್ಸಾರ್ ಇದೆ. ಈ ಕ್ಯಾಮೆರಾ AI ಫಿಲ್ಟರ್, ಬ್ಯಾಕ್‌ಲೈಟ್ ಎಚ್‌ಡಿಆರ್, ಪೋರ್ಟ್ರೇಟ್ ಬೊಕೆ, ಪೋರ್ಟ್ರೇಟ್ ಲೈಟ್ ಎಫೆಕ್ಟ್ಸ್, AI ಸ್ಟಿಕ್ಕರ್‌ಗಳು, AI ಬ್ಯೂಟಿ ಮತ್ತು ಲೈವ್ ಫೋಟೋ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಫೋನ್‌ಗೆ ಶಕ್ತಿಯನ್ನು ನೀಡಲು 5000mAh ಬ್ಯಾಟರಿಯನ್ನು ಒದಗಿಸಲಾಗಿದ್ದು ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.