ವಿವೋ ಭಾರತದಲ್ಲಿ ತನ್ನ Y-ಸರಣಿಯ ಕೈಗೆಟುಕುವ ಸ್ಮಾರ್ಟ್‌ಫೋನ್ Vivo Y58 5G ಬೆಲೆಯನ್ನು ಕಡಿತಗೊಳಿಸಿದೆ. ಈ ಸ್ಮಾರ್ಟ್ಫೋನ್ ಮಾಧ್ಯಮ ಶ್ರೇಣಿಯಲ್ಲಿ ಬಿಡುಗಡೆಗೊಳಿಸಿದ್ದು ಸ್ಮಾರ್ಟ್ಫೋನ್ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಸ್ಮಾರ್ಟ್‌ಫೋನ್ ಡಿಸ್ಪ್ಲೇ, ಕ್ಯಾಮೆರಾ, ಹಾರ್ಡ್ವೇರ್ ಮತ್ತು ಬ್ಯಾಟರಿಯೊಂದಿಗೆ ಬೇರೆ ವಿಶೇಷತೆಗಳನ್ನು ನೋಡುವುವದಾದರೆ Vivo Y58 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬರುವ ಮೊದಲ ವಿವೊ ಬಜೆಟ್ 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಹಲವಾರು ಫೀಚರ್ಗಳನ್ನು ಹೊಂದಿದೆ.
Also Read: Myntra ನಿಮ್ಮ ಕೈಗೆಟಕುವ ಬೆಲೆಗೆ ಈ ಲೇಟೆಸ್ಟ್ ಬ್ಲೂಟೂತ್ ಸ್ಪೀಕರ್ ಮತ್ತು ಸೌಂಡ್ ಬಾರ್‌ಗಳನ್ನು ಮಾರಾಟ ಮಾಡುತ್ತಿದೆ!
ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ Vivo Y58 5G ಸ್ಮಾರ್ಟ್ಫೋನ್ ಬೆಲೆಯಲ್ಲಿ 1000 ರೂಪಾಯಿಗಳಷ್ಟು ಕಡಿಮೆಯಾಗಿದೆ. Vivo ಭಾರತದಲ್ಲಿ Vivo Y58 5G ಸ್ಮಾರ್ಟ್‌ಫೋನ್ ಅನ್ನು ಜೂನ್ 2024 ರಲ್ಲಿ ರೂ 20,000 ಕ್ಕಿಂತ ಕಡಿಮೆ ವಿಭಾಗದಲ್ಲಿ ಬಿಡುಗಡೆ ಮಾಡಿತು. ಈಗ ಈ ವಿವೋ ಫೋನ್ ಬೆಲೆ 1000 ರೂಪಾಯಿ ಕಡಿಮೆಯಾಗಿದೆ. ಅದರ ನಂತರ ಈಗ ಈ ಫೋನ್ ರೂ 19,499 ಬದಲಿಗೆ ಈಗ ಕೇವಲ 18,499 ರೂಗಳಿಗೆ ಲಭ್ಯವಿದೆ. ಈ ಹ್ಯಾಂಡ್ಸೆಟ್ ಅನ್ನು ಹಿಮಾಲಯನ್ ಬ್ಲೂ ಮತ್ತು ಸುಂದರಬನ್ಸ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಫೋನ್ ಖರೀದಿಸಲು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಸ್ಟೋರ್‌ಗಳಲ್ಲಿ ಲಭ್ಯವಿದೆ.
Vivo Y58 5G ಸ್ಮಾರ್ಟ್ಫೋನ್ 6.72 ಇಂಚಿನ FullHD ಡಿಸ್‌ಪ್ಲೇ ಹೊಂದಿದೆ. ಇದರ ಸ್ಕ್ರೀನ್ ರಿಫ್ರೆಶ್ ದರ 120 Hz ಮತ್ತು ಗರಿಷ್ಠ ಹೊಳಪು 1024 nits ಆಗಿದೆ. ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು ಔರಾ ಲೈಟ್ ಫ್ಲ್ಯಾಷ್ ಮತ್ತು ಸುಧಾರಿತ AI ಇಮೇಜಿಂಗ್ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್-ವ್ಯೂ ವೀಡಿಯೊ ಬೆಂಬಲ ಸಹ ಲಭ್ಯವಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Vivo Y58 5G ಸ್ಮಾರ್ಟ್‌ಫೋನ್ Qualcomm Snapdragon Funtouch OS 14 ಅನ್ನು ಹೊಂದಿದೆ. ವಿವೋ ಈ ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ವಿಸ್ತರಿಸಬಹುದು. ಇದರಲ್ಲಿ ಹೆಚ್ಚುವರಿಯಾಗಿ ಸುಮಾರು 8GB RAM ಅನ್ನು ವಿಸ್ತರಿಸಬಹುದು. ಹ್ಯಾಂಡ್‌ಸೆಟ್ ಅನ್ನು ಪವರ್ ಮಾಡಲು 6000mAh ಬ್ಯಾಟರಿಯನ್ನು ಒದಗಿಸಲಾಗಿದ್ದು ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.