6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ Vivo Y58 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ!

Updated on 21-Jun-2024
HIGHLIGHTS

ಭಾರತದಲ್ಲಿ ತನ್ನ ಲೇಟೆಸ್ಟ್ Vivo Y58 5G ಸ್ಮಾರ್ಟ್ಫೋನ್ ಅನ್ನು ಕೈಗೆಟಕುವ ಬೆಲೆಗೆ 20ನೇ ಜೂನ್ 2024 ರಂದು ಬಿಗಡೆಗೊಳಿಸಿದೆ.

6000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಬರುವ ಮೊದಲ ವಿವೊ ಬಜೆಟ್ ಸ್ಮಾರ್ಟ್ಫೋನ್ Vivo Y58 5G ಆಗಿದೆ.

Vivo Y58 5G ಒಂದೇ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಅಧಿಕೃತವಾಗಿ ಬಿಡುಗಡೆಯಾಗಿದೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ವಿವೋ (Vivo) ಭಾರತದಲ್ಲಿ ತನ್ನ ಲೇಟೆಸ್ಟ್ Vivo Y58 5G ಸ್ಮಾರ್ಟ್ಫೋನ್ ಅನ್ನು ಕೈಗೆಟಕುವ ಬೆಲೆಗೆ 20ನೇ ಜೂನ್ 2024 ರಂದು ಬಿಗಡೆಗೊಳಿಸಿದೆ. ಈ Vivo Y58 5G ಸ್ಮಾರ್ಟ್ಫೋನ್ ಮಾಧ್ಯಮ ಶ್ರೇಣಿಯಲ್ಲಿ ಬಿಡುಗಡೆಗೊಳಿಸಿದ್ದು ಸ್ಮಾರ್ಟ್ಫೋನ್ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಇದರ ಡಿಸ್ಪ್ಲೇ, ಕ್ಯಾಮೆರಾ, ಹಾರ್ಡ್ವೇರ್ ಮತ್ತು ಬ್ಯಾಟರಿಯೊಂದಿಗೆ ಬೇರೆ ವಿಶೇಷತೆಗಳನ್ನು ನೋಡುವುವದಾದರೆ Vivo Y58 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬರುವ ಮೊದಲ ವಿವೊ ಬಜೆಟ್ 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಹಲವಾರು ಫೀಚರ್ಗಳನ್ನು ಹೊಂದಿದ್ದು ಇದರ ಆಫರ್ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಿಸಿಕೊಳ್ಳಿ.

Also Read: 90 ದಿನಗಳ ವ್ಯಾಲಿಡಿಟಿಯೊಂದಿಗೆ Unlimited 5G ಡೇಟಾ ಮತ್ತು ಕರೆ ನೀಡುವ ಈ Reliance Jio ಪ್ಲಾನ್ ಬೆಲೆ ಎಷ್ಟು?

ಭಾರತದಲ್ಲಿ Vivo Y58 5G ಆಫರ್ ಬೆಲೆ ಮತ್ತು ಲಭ್ಯತೆಯ ಮಾಹಿತಿ:

ಈ ಲೇಟೆಸ್ಟ್ Vivo Y58 5G ಸ್ಮಾರ್ಟ್ಫೋನ್ ಪ್ರಸ್ತುತ ಕೇವಲ ಒಂದೇ ಒಂದು ರೂಪಾಂತರದಲ್ಲಿ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಅಧಿಕೃತವಾಗಿ ಬಿಡುಗಡೆಯಾಗಿದೆ. Vivo Y58 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಸುಮಾರು 19,499 ರೂಗಳಿಂದ ಆರಂಭವಾಗಲಿದೆ.

Vivo Y58 5G launched in India

ಅಲ್ಲದೆ ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಬಯಸುವ ಬಳಕೆದಾರರು SBI, Bank Of Baroda, Yes Bank, IDFC First ಮತ್ತು IndusInd Bank ಕಾರ್ಡ್ ಬಳಸಿಕೊಂಡು ಈ Vivo Y58 5G ಸ್ಮಾರ್ಟ್ಫೋನ್ ಅನ್ನು ಖರೀದಿಸಿದರೆ ಬರೋಬ್ಬರಿ 1,500 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಸಹ ಪಡೆಯುವುದರೊಂದಿಗೆ ಇದನ್ನು ಬಿಡುಗಡೆಯ ಆಫರ್ ಮೂಲಕ ಕೇವಲ17,999 ರೂಗಳಿಗೆ ಫ್ಲಿಪ್ಕಾರ್ಟ್ ಮತ್ತು ವಿವೊ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.

ವಿವೋ Y58 5G ಸ್ಮಾರ್ಟ್ಫೋನ್ ಡಿಸ್ಪ್ಲೇಯ ವಿವರಗಳು:

ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಮಾಹಿತಿಯನ್ನು ನೋಡುವುದಾದರೆ ಸ್ಮಾರ್ಟ್ಫೋನ್ 6.72 ಇಂಚಿನ Full HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ 2408 × 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಅಲ್ಲದೆ ಸ್ಮೂತ್ ಅನುಭವಕ್ಕಾಗಿ ಇದರಲ್ಲಿ ನಿಮಗೆ 120Hz ರಿಫ್ರೆಶ್ ರೇಟ್ ಹೊಂದಿದ್ದು ನೀವು ವೀಕ್ಷಿಸುವ ಸಿನಿಮಾ ಮತ್ತು ವಿಡಿಯೋಗಳ ಉತ್ತಮ ಅನುಭವಕ್ಕಾಗಿ ಸುಮಾರು 1024nits ಪೀಕ್ ಬ್ರೈಟ್‌ನೆಸ್ ಹೊಂದಿದ್ದು ದಿನದಲ್ಲೂ ಬಿಸಿಲಿನಲ್ಲೂ ಸಹ ಉತ್ತಮವಾಗಿ ಬಳಸಲು ಅನುಮತಿ ನೀಡುತ್ತದೆ. ಅಲ್ಲದೆ ಕಣ್ಣಿನ ರಕ್ಷಣೆಗಾಗಿ ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ 2.5D ಸ್ಕ್ರಿನ್ TUV Rheinland ಪ್ರಮಾಣೀಕರಣವನ್ನು ಸಹ ಹೊಂದಿದೆ.

Vivo Y58 5G ಕ್ಯಾಮೆರಾದ ಮಾಹಿತಿಗಳು:

ಈ ಸ್ಮಾರ್ಟ್ಫೋನ್ ಕ್ಯಾಮೆರಾದ ಮಾಹಿತಿಯನ್ನು ನೋಡುವುದಾದರೆ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಇದರ ಪ್ರೈಮರಿ ಕ್ಯಾಮೆರಾ ಸೆನ್ಸರ್ 50MP ಮೆಗಾಪಿಕ್ಸೆಲ್ f/1.8 ಅಪರ್ಚರ್‌ನೊಂದಿಗೆ ಸ್ಟೆಬಿಲೈಸರ್ ಫೀಚರ್ ಅನ್ನು ಹೊಂದಿದ್ದು ನೀವು ತೆಗೆಯುವ ವಿಡಿಯೋದಲ್ಲಿ ಹೆಚ್ಚು ಅಲ್ಲಾಡುವ ತೊಂದರೆಗಳಿಂದ ಮುಕ್ತಿ ಲಭ್ಯವಾಗಲಿದೆ. ಇದರ ಎರಡನೇಯದಾಗಿ 2MP ಮೆಗಾಪಿಕ್ಸೆಲ್ f/2.4 ಅಪರ್ಚರ್‌ನೊಂದಿಗೆ ಡೆಪ್ತ್ ಸೆನ್ಸರ್ ಆಗಿದೆ. ಕೊನೆಯದಾಗಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ f/2.1 ಅಪರ್ಚರ್‌ನೊಂದಿಗೆ ಬರುತ್ತದೆ.

Vivo Y58 5G launched in India

ವಿವೋ Y58 5G ಹಾರ್ಡ್ವೇರ್ ಹೇಗಿದೆ?

ವಿವೋದ ಈ ಲೇಟೆಸ್ಟ್ Vivo Y58 5G ಸ್ಮಾರ್ಟ್ಫೋನ್ 4nm ನ್ಯಾನೋ ಮೀಟರ್ ಟೆಕ್ನಾಲಜಿಯೊಂದಿಗೆ Qualcomm Snapdragon 4 Gen 2 ಪ್ರೊಸೆಸರ್ ಹೊಂದಿದ್ದು 8GB LPDDR4X RAM ಮತ್ತು 128GB UFS 2.2 ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ಫೋನ್ ಒಳಗೆ SD ಕಾರ್ಡ್ ಬಳಸಿ ಬರೋಬ್ಬರಿ 1024GB ವರೆಗಿನ ಸ್ಟೋರೇಜ್ ಸ್ಥಳವನ್ನು ವಿಸ್ತರಿಸಲು ಅನುಮತಿಸುತ್ತದೆ. ಸ್ಮಾರ್ಟ್ಫೋನ್ ಲೇಟೆಸ್ಟ್ ಆಂಡ್ರಾಯ್ಡ್ 14 ಅನ್ನು ತಮ್ಮದೇಯಾದ Funtouch 14 ಆಪರೇಟಿಂಗ್ ಸಿಸ್ಟಮ್ ಮೂಲಕ ನಡೆಯಲಿದೆ. ಆಸಕ್ತರು Sundarbans Green ಮತ್ತು Himalayan Blue ಎಂಬ ಎರಡು ಬಣ್ಣಗಳಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.

ಭಾರತದಲ್ಲಿ Vivo Y58 5G ಬ್ಯಾಟರಿ ಮತ್ತು ಸೆನ್ಸರ್ ಮಾಹಿತಿ:

ಕೆನೆಯದಾಗಿ ಭಾರತದಲ್ಲಿ ಬಿಡುಗಡೆಯಾಗಿರುವ ಈ ವಿವೋ ಸ್ಮಾರ್ಟ್ಫೋನ್ ಬ್ಯಾಟರಿ ಮತ್ತು ಸೆನ್ಸರ್ ಬಗ್ಗೆ ಮಾತನಾಡುವುದಾದರೆ ಫೋನ್ ದೊಡ್ಡ 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ನಿಮ್ಮ ದಿನವಿಡೀ ಬಳಕೆಯನ್ನು ಪೂರ್ತಿಗೊಳಿಸಲು ಉತ್ತಮವಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ಬ್ಯಾಟರಿ ಖಾಲಿಯಾದರೆ ವೇಗವಾಗಿ ಚಾರ್ಜ್ ಮಾಡಲು ಬಾಕ್ಸ್ ಒಳಗೆ 44W ಫಾಸ್ಟ್ ಚಾರ್ಜಿಂಗ್ (Fast Charging) ಬೆಂಬಲಿಸುವ ಅಡಾಪ್ಟರ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ಅನ್ನು ಫೋನ್ ಎಡಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದ್ದು Accelerometer, Gyro, Proximity, Compass ಸೆನ್ಸರ್ ಸಹ ಒಳಗೊಂಡಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :