Vivo Y300 Pro ಸದ್ದಿಲ್ಲದೇ 6500mAh ಬ್ಯಾಟರಿ ಮತ್ತು snapdragon ಚಿಪ್‌ನೊಂದಿಗೆ ಬಿಡುಗಡೆಯಾಗಿದೆ

Vivo Y300 Pro ಸದ್ದಿಲ್ಲದೇ 6500mAh ಬ್ಯಾಟರಿ ಮತ್ತು snapdragon ಚಿಪ್‌ನೊಂದಿಗೆ ಬಿಡುಗಡೆಯಾಗಿದೆ
HIGHLIGHTS

Vivo Y300 Pro ಸ್ಮಾರ್ಟ್ಫೋನ್ ಅನ್ನು 5ನೇ ಆಗಸ್ಟ್ 2024 ರಂದು ಚೀನಾದಲ್ಲಿ ಬಿಡುಗಡೆಗೊಳಿಸಿದೆ

Vivo Y300 Pro ಒಟ್ಟಾರೆಯಾಗಿ ನಾಲ್ಕು ಬಣ್ಣಗಳಲ್ಲಿ ಮತ್ತು ನಾಲ್ಕು RAM ಆಯ್ಕೆಗಳೊಂದಿಗೆ ಬರುವ ಮಧ್ಯಮ ಶ್ರೇಣಿಯ ಫೋನ್ ಆಗಿದೆ.

Vivo Y300 Pro ಸ್ಮಾರ್ಟ್ಫೋನ್ 6500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಸದ್ದಿಲ್ಲದೇ ತನ್ನ ತಾಯ್ನಾಡಿನಲ್ಲಿ ಬಿಡುಗಡೆಗೊಳಿಸಿದೆ. ಕಂಪನಿ ಇತ್ತೀಚಿನ Y ಸೀರೀಸ್ ಅಡಿಯಲ್ಲಿ ಈ Vivo Y300 Pro ಸ್ಮಾರ್ಟ್ಫೋನ್ ಅನ್ನು 5ನೇ ಆಗಸ್ಟ್ 2024 ರಂದು ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಈ Vivo Y300 Pro ಒಟ್ಟಾರೆಯಾಗಿ ನಾಲ್ಕು ಬಣ್ಣಗಳಲ್ಲಿ ಮತ್ತು ನಾಲ್ಕು RAM ಆಯ್ಕೆಗಳೊಂದಿಗೆ ಬರುವ ಮಧ್ಯಮ ಶ್ರೇಣಿಯ ಫೋನ್ ಆಗಿದೆ. ಪ್ರಸ್ತುತ Vivo Y300 Pro ಸ್ಮಾರ್ಟ್ಫೋನ್ ಭಾರತದಲ್ಲಿ ಯಾವಾಗ ಮತ್ತು ಯಾವ ಬೆಲೆಗೆ ಬರಲಿದೆ ಎನ್ನುವುದರ ಕುರಿತು ಯಾವುದೇ ಮಾಹಿತಿಗಳಿಲ್ಲ. Vivo Y300 Pro ಸ್ಮಾರ್ಟ್ಫೋನ್ 6500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Also Read: ಸುಮಾರು 3 ತಿಂಗಳಿಗೆ ಪ್ರತಿದಿನ 3GB ಡೇಟಾ ಮತ್ತು ಕರೆ ನೀಡುವ ಈ BSNL, Jio, Airtel ಮತ್ತು Vi ಯೋಜನೆಗಳ ಬೆಲೆ ಎಷ್ಟು?

ಚೀನಾದ Vivo Y300 Pro ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಮಾಹಿತಿಗಳು

ಪ್ರಸ್ತುತ ಚಿದಾದಲ್ಲಿ ಮಾತ್ರ ಬಿಡುಗಡೆಯಾಗಿರುವ ಈ Vivo Y300 Pro ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 1,799 ಯುವಾನ್ (ಸುಮಾರು 21,000 ರೂಗಳು) ಬಿಡುಗಡೆಯಾದರೆ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 1,999 ಯುವಾನ್ (ಸುಮಾರು 23,000 ರೂಗಳು) ಇದರ ಕ್ರಮವಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 2,199 ಯುವಾನ್ (ಸುಮಾರು 26,000 ರೂಗಳು) ನಲ್ಲಿ ಬರುತ್ತದೆ ಕೊನೆಯದಾಗಿ ಇದರ 12GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ 2,499 ಚೈನೀಸ್ ಯುವಾನ್ (ಸುಮಾರು 29,000 ರೂಗಳು) ಬೆಲೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.

Vivo Y300 Pro silently launched with 6500mAh battery
Vivo Y300 Pro silently launched with 6500mAh battery

ಚೀನಾದ Vivo Y300 Pro ಫೀಚರ್ ಮತ್ತು ವಿಶೇಷಣಗಳೇನು?

Vivo Y300 Pro ಫೋನ್ 6.77 ಇಂಚಿನ FullHD+ (1,080×2,392 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಹೊಂದಿದೆ. ಸ್ಕ್ರೀನ್ ರಿಫ್ರೆಶ್ ದರವು 60Hz, 90Hz ಮತ್ತು 120Hz ನಡುವೆ ಬದಲಾಗುತ್ತದೆ. ಈ ಫೋನ್ Android 14 ಆಧಾರಿತ OriginOS 4 ನೊಂದಿಗೆ ಬರುತ್ತದೆ. ಸಾಧನವು ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ 4nm Snapdragon 6 Gen 1 SoC ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ಗಾಗಿ Adreno 710 ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ 12 GB RAM ಮತ್ತು 512 GB ವರೆಗಿನ ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ. Vivo Y500 Pro IP65 ಧೂಳು ಮತ್ತು ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಹೊಂದಿದೆ.

Vivo Y300 Pro silently launched with 6500mAh battery
Vivo Y300 Pro silently launched with 6500mAh battery

ಈ Vivo ಹ್ಯಾಂಡ್‌ಸೆಟ್‌ನ ದೊಡ್ಡ ವೈಶಿಷ್ಟ್ಯವೆಂದರೆ 6500mAh ಬ್ಯಾಟರಿ ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Vivo Y300 Pro ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹ್ಯಾಂಡ್ಸೆಟ್ 2MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಈ Vivo Y300 Pro ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ದ್ಯುತಿರಂಧ್ರ F/2.0 ಜೊತೆಗೆ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾವನ್ನು ಹೊಂದಿದೆ. Vivo Y300 Pro ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಸಂಪರ್ಕಕ್ಕಾಗಿ ಹ್ಯಾಂಡ್ಸೆಟ್ Bluetooth 5.1, GPS, Wi-Fi ಮತ್ತು GLONASS ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo