8GB RAM ಮತ್ತು 32MP Selfie ಕ್ಯಾಮೆರಾವುಳ್ಳ Vivo Y300 Plus 5G ಬಿಡುಗಡೆ! ಬೆಲೆ ಮತ್ತು ವೈಶಿಷ್ಟ್ಯಗಳೇನು?
ವಿವೊ (Vivo) ಭಾರತದಲ್ಲಿ ಮತ್ತೊಂದು ಪವರ್ಫುಲ್ Vivo Y300 Plus 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ.
Vivo Y300 Plus 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಅನ್ನು ಸಹ ಹೊಂದಿದ್ದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ.
SBI ಕ್ರೆಡಿಟ್ ಕಾರ್ಡ್ ಬಳಸಿದರೆ ಬರೋಬ್ಬರಿ 2400 ರೂಗಳ ಡಿಸ್ಕೌಂಟ್ ನಿಡುತ್ತಿದ್ದು ಈ ಫೋನ್ ಅನ್ನು ಕೇವಲ 21,599 ರೂಗಳಿಗೆ ಖರೀದಿಸಬಹುದು.
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೊ (Vivo) ಭಾರತದಲ್ಲಿ ಮತ್ತೊಂದು ಪವರ್ಫುಲ್ Vivo Y300 Plus 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು Vivo Y300 Plus 5G ಹೆಸರಿನಲ್ಲಿ ಪರಿಚಯಿಸಿದೆ. ಹೊಸ Vivo ಹ್ಯಾಂಡ್‌ಸೆಟ್ IP54-ರೇಟೆಡ್ ಬಿಲ್ಡ್‌ನೊಂದಿಗೆ ಎರಡು ಬಣ್ಣಗಳಲ್ಲಿ ಬರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ದೊಡ್ಡ 3D ಕರ್ವ್ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಮತ್ತು 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಜೋಡಿಸಲಾದ ಸ್ನಾಪ್‌ಡ್ರಾಗನ್ 695 ನಿಂದ ಚಾಲಿತವಾಗಿದೆ. Vivo Y300 Plus 5G ಸ್ಮಾರ್ಟ್ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ.
Also Read: ಭಾರತದಲ್ಲಿ Apple iPad Mini 2024 ಬಿಡುಗಡೆಯಾಗಿದೆ, ಇದರ ಫೀಚರ್ ಮತ್ತು ವಿಶೇಷತೆಗಳೇನು ತಿಳಿಯಿರಿ
ಭಾರತದಲ್ಲಿ Vivo Y300 Plus 5G ಲಭ್ಯತೆ ಮತ್ತು ಬೆಲೆ ಎಷ್ಟು?
Vivo Y300 Plus ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು ಈಗಾಗಲೇ ಆರಂಭಿಸಿದ್ದು ಅಮೆಜಾನ್ ಇಂಡಿಯಾ ಮತ್ತು ವಿವೊ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. ಈ Vivo Y300 Plus ಸಿಲ್ಕ್ ಬ್ಲಾಕ್ ಮತ್ತು ಸಿಲ್ಕ್ ಗ್ರೀನ್ ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು. ಅಲ್ಲದೆ ಈ Vivo Y300 Plus ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಕೇವಲ ಒಂದೇ ಒಂದು ರೂಪಾಂತದರಲ್ಲಿ ಲಭ್ಯವಾಗಲಿದೆ.
ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 23,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಆಸಕ್ತರು ಇದನ್ನು ಆಯ್ದ HDFC ಮತ್ತು ICICI ಬ್ಯಾಂಕ್ಗಳ ಮೇಲೆ 1000 ರೂಗಳ ಡಿಸ್ಕೌಂಟ್ ಸಹ ನೀಡಲಿದ್ದು ನೀವು SBI ಕ್ರೆಡಿಟ್ ಕಾರ್ಡ್ ಬಳಸಿದರೆ ಬರೋಬ್ಬರಿ 2400 ರೂಗಳ ಡಿಸ್ಕೌಂಟ್ ನಿಡುತ್ತಿದ್ದು ಈ ಫೋನ್ ಅನ್ನು ಕೇವಲ 21,599 ರೂಗಳಿಗೆ ಖರೀದಿಸಬಹುದು.
ಭಾರತದಲ್ಲಿ Vivo Y300 Plus ವಿಶೇಷಣಗಳೇನು?
Vivo Y300 Plus Android 14 ಅನ್ನು ಆಧರಿಸಿ Funtouch OS 14 ನೊಂದಿಗೆ ಬರುತ್ತದೆ ಮತ್ತು 6.78 ಇಂಚಿನ ಪೂರ್ಣ-HD 3D ಕರ್ವ್ ಡಿಸ್ಪ್ಲೇ ಜೊತೆಗೆ 120Hz ನ ರಿಫ್ರೆಶ್ ದರ ಮತ್ತು 1,300nits ನ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿದೆ. Vivo Y300 Plus ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು f/2.4 ಅಪರ್ಚರ್ನೊಂದಿಗೆ 2MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ f/2.45 ಅಪರ್ಚರ್‌ನೊಂದಿಗೆ ಬರುತ್ತದೆ ಅಲ್ಲದೆ ಇದರ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇದು 6nm ಸ್ನಾಪ್‌ಡ್ರಾಗನ್ 695 ಚಾಲಿತವಾಗಿದೆ. ಜೊತೆಗೆ 8GB LPDDR4X RAM ಮತ್ತು 128GB UFS 2.2 ಸ್ಟೋರೇಜ್ ಹೊಂದಿದೆ. ಫೋನ್‌ನ RAM ಅನ್ನು 8GB ವರೆಗೆ ವಿಸ್ತರಿಸಬಹುದು. ಆದರೆ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು. Vivo Y300 Plus ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಪ್ರೈಮರಿ ಸೆನ್ಸರ್ ಹೊಂದಿದೆ. Vivo Y ಸರಣಿಯಲ್ಲಿನ ಹೆಚ್ಚಿನ ಫೋನ್‌ಗಳಂತೆ Vivo Y300 Plus ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಜೊತೆಗೆ 5,000mAh ಬ್ಯಾಟರಿಯನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile