50MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯ Vivo Y29 5G ಬಿಡುಗಡೆ! ಬೆಲೆ ಮತ್ತು ಫೀಚರ್ ಹೈಲೈಟ್‌ಗಳೇನು?
Vivo Y29 5G ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ.
Vivo Y29 5G ಆರಂಭಿಕ ಕೇವಲ 13,999 ರೂಗಳಿಗೆ ಅನಾವರಣಗೊಳಿಸಲಾಗಿದೆ.
Vivo Y29 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬರುತ್ತದೆ.
Vivo Y29 5G smartphone launched in India: ಚೀನಾದ ಸ್ಮಾರ್ಟ್ಫೋನ್ ಕಂಪನಿಯಾಗಿರುವ ವಿವೋ (Vivo) ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. Vivo Y29 5G ಈ ಸ್ಮಾರ್ಟ್ಫೋನ್ ಒಳಗೆ 50MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಅನೇಕ ಹೊಸ ಮತ್ತು ಆಕರ್ಷಿತ ಫೀಚರ್ಗಳೊಂದಿಗೆ ಅನಾವರಣಗೊಳಿಸಿದೆ. Vivo Y29 5G ಸ್ಮಾರ್ಟ್ಫೋನ್ ಪ್ರಸ್ತುತ ಕಂಪನಿ ಇದರ ಆರಂಭಿಕ ₹13,999 ರೂಗಳಿಗೆ ಬಿಡುಗಡೆಗೊಳಿಸಿದ್ದು ಬ್ಯಾಂಕ್ ಡಿಸ್ಕೌಂಟ್ಗಳೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ನೀಡುತ್ತದೆ.
ಭಾರತದಲ್ಲಿ Vivo Y29 5G ಆಫರ್ ಬೆಲೆ ಮತ್ತು ಲಭ್ಯತೆ
ಈ ಲೇಟೆಸ್ಟ್ Vivo Y29 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಾಲ್ಕು ರೂಪಾಂತರಗಳಲ್ಲಿ ಪಡೆಯಬಹುದು. ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹13,999 ರೂಗಳಾಗಿವೆ. ಇದರ ಕ್ರಮವಾಗಿ ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹15,499 ರೂಗಳಾಗಿವೆ. ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹16,999 ರೂಗಳಾಗಿವೆ.
Vivo Y29 5G ಸ್ಮಾರ್ಟ್ಫೋನ್ ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ₹18,999 ರೂಗಳಾಗಿವೆ. ಇದರೊಂದಿಗೆ ಬಳಕೆದಾರರು SBI, IDFC ಮತ್ತು Yes ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸರಳ EMI ಸೌಲಭ್ಯದೊಂದಿಗೆ ಸುಮಾರು 1500 ರೂಗಳ ಕ್ಯಾಷ್‌ಬ್ಯಾಕ್ ಸಹ ಪಡೆಯಬಹುದು.
ಭಾರತದಲ್ಲಿ Vivo Y29 5G ಟಾಪ್ ಫೀಚರ್ ಹೈಲೈಟ್‌ಗಳೇನು?
Vivo Y29 5G ಪಂಚ್ ಹೋಲ್ ವಿನ್ಯಾಸದೊಂದಿಗೆ ದೊಡ್ಡ 6.88 ಇಂಚಿನ ಡಿಸ್ಟ್ರೇಯನ್ನು ಹೊಂದಿದೆ. ಈ ಪರದಯು 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಸಾಧನವು ಡೈಮೆನ್ಸಿಟಿ 6300 ಆಕ್ಷಾಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 6ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ ಮೊಬೈಲ್ ಚಿಪ್‌ಸೆಟ್ ಆಗಿದೆ ಮತ್ತು 2.4GHz ವರಗಿನ ಗಡಿಯಾರದ ವೇಗದಲ್ಲಿ ಚಲಿಸಬಹುದು.
Also Read: e-PAN: ನಿಮ್ಮ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವಂತೆ ಇಮೇಲ್ ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ!
Vivo Y29 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೆಕೆಂಡರಿ AI ಲೆನ್ಸ್ ಜೊತೆಗ ಹಿಂಭಾಗದ ಫಲಕದಲ್ಲಿ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ನಲ್ಲಿ ಮತ್ತು ವೀಡಿಯೊ ಕರೆಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Vivo Y29 ಪವರ್ ಬ್ಯಾಕಪ್‌ಗಾಗಿ ದೊಡ್ಡ 5,500mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸ್ಮಾರ್ಟ್‌ಫೋನ್‌ನಲ್ಲಿ 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಕುತೂಹಲಕಾರಿಯಾಗಿ ಇದು ಶಾಕ್ ರೆಸಿಸ್ಟೆಂಟ್ ಫೋನ್ ಆಗಿದ್ದು ಎತ್ತರದಿಂದ ಬೀಳಿಸಿದ ನಂತರವೂ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರ IP64 ರೇಟಿಂಗ್ ಫೋನ್ ಅನ್ನು ನೀರು ಮತ್ತು ಕಲವು ಧೂಳಿನ ಸ್ಟ್ಯಾಶ್‌ಗಳಿಂದ ಸುರಕ್ಷಿತವಾಗಿರಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile