Vivo Y29 5G launched in India: ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ವಿವೋ ತನ್ನ ಹೊಸ ಮತ್ತು ಕೈಗೆಟುಕುವ 5G ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕಂಪನಿಯು ಭಾರತದಲ್ಲಿ Vivo Y29 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಪ್ರವೇಶ ಮಟ್ಟದ 5G ಫೋನ್ ಆಗಿದ್ದು Vivo Y28 5G ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ ಡೈನಾಮಿಕ್ ಲೈಟ್ LED ಫ್ಲ್ಯಾಷ್ ಜೊತೆಗೆ ಅನೇಕ ಲೇಟೆಸ್ಟ್ ಫೀಚರ್ ಹೊಂದಿದೆ. ಒಟ್ಟಾರೆಯಾಗಿ ಭಾರತದಲ್ಲಿ Vivo Y29 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಇದರ ಆರಂಭಿಕ ಆರಂಭಿಕ 4GB RAM ಕೇವಲ 13,999 ರೂಗಳಿಗೆ ಬಿಡುಗಡೆಯಾಗಿದೆ.
Vivo Y29 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಾಲ್ಕು ರೂಪಾಂತರಗಳಲ್ಲಿ ಪಡೆಯಬಹುದು. ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹13,999 ರೂಗಳಾಗಿವೆ. ಇದರ ಕ್ರಮವಾಗಿ ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹15,499 ರೂಗಳಾಗಿವೆ.
ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹16,999 ರೂಗಳಾಗಿವೆ. Vivo Y29 5G ಸ್ಮಾರ್ಟ್ಫೋನ್ ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ₹18,999 ರೂಗಳಾಗಿವೆ. ಇದರೊಂದಿಗೆ ಬಳಕೆದಾರರು SBI, IDFC ಮತ್ತು Yes ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸರಳ EMI ಸೌಲಭ್ಯದೊಂದಿಗೆ ಸುಮಾರು 1500 ರೂಗಳ ಕ್ಯಾಷ್‌ಬ್ಯಾಕ್ ಸಹ ಪಡೆಯಬಹುದು.
Also Read: Bagheera on OTT: ಶ್ರೀ ಮುರಳಿ ಅಭಿನಯದ ಬ್ಲಾಕ್ ಬಸ್ಟರ್ ಬಘೀರ ಚಿತ್ರ ಈಗ Disney+ Hotstar ವೀಕ್ಷಿಸಬಹುದು
Vivo Y29 5G ಪಂಚ್ ಹೋಲ್ ವಿನ್ಯಾಸದೊಂದಿಗೆ ದೊಡ್ಡ 6.88 ಇಂಚಿನ ಡಿಸ್ಟ್ರೇಯನ್ನು ಹೊಂದಿದೆ. ಈ ಸ್ಕ್ರೀನ್ 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ಫೋನ್ ಡೈಮೆನ್ಸಿಟಿ 6300 ಆಕ್ಷಾಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾದ ಮೊಬೈಲ್ ಚಿಪ್‌ಸೆಟ್ ಆಗಿದೆ ಮತ್ತು 2.4GHz ವರಗಿನ ಗಡಿಯಾರದ ವೇಗದಲ್ಲಿ ಚಲಿಸಬಹುದು.
Vivo Y29 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೆಕೆಂಡರಿ AI ಲೆನ್ಸ್ ಜೊತೆಗ ಹಿಂಭಾಗದ ಪ್ಯಾನಲ್ ಮೇಲೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ನಲ್ಲಿ ಮತ್ತು ವೀಡಿಯೊ ಕರೆಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Vivo Y29 ಪವರ್ ಬ್ಯಾಕಪ್‌ಗಾಗಿ ದೊಡ್ಡ 5500mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸ್ಮಾರ್ಟ್‌ಫೋನ್‌ನಲ್ಲಿ 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.