ಸ್ಮಾರ್ಟ್ಫೋನ್ ತಯಾರಕ ವಿವೋ (Vivo) ತನ್ನ ಹೊಸ ಸ್ಮಾರ್ಟ್‌ಫೋನ್ Vivo Y21G ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬಿಡುಗಡೆ ಮಾಡಿದೆ. ಇದರ ಪ್ರಮುಖ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ ಈ ಇತ್ತೀಚಿನ Vivo ಮೊಬೈಲ್ ಫೋನ್‌ಗೆ 5000 mAh ನ ಪವರ್ಫುಲ್ ಬ್ಯಾಟರಿಯೊಂದಿಗೆ ಎರಡು ಹಿಂಭಾಗದ ಕ್ಯಾಮೆರಾಗಳನ್ನು ಹೊಂದಿದೆ. ಅದರಲ್ಲೂ Vivo ಬ್ರ್ಯಾಂಡ್‌ನ ಈ ಇತ್ತೀಚಿನ ಫೋನ್ ಸೂಪರ್ ಸ್ಲಿಮ್ 8.0mm ಬಾಡಿಯೊಂದಿಗೆ ಬಿಡುಗಡೆಯಾಗಿದೆ. ಭಾರತದಲ್ಲಿ Vivo Y21G ಕುರಿತು ಬೆಲೆಯಿಂದ ವೈಶಿಷ್ಟ್ಯಗಳವರೆಗೆ ವಿವರವಾದ ಮಾಹಿತಿಗಳನ್ನು ತಿಳಿಯಿರಿ
ಈ Vivo ಸ್ಮಾರ್ಟ್‌ಫೋನ್ 6.51 ಇಂಚಿನ HD Plus Halo ಡಿಸ್ಪ್ಲೇ ಹೊಂದಿದೆ. ಈ ಫೋನ್ Android 12 ಆಧಾರಿತ Funtouch OS 12 ನಲ್ಲಿ ಕಾರ್ಯನಿರ್ವಹಿಸುತ್ತದೆ. MT6769 ಚಿಪ್‌ಸೆಟ್ ಅನ್ನು ಫೋನ್‌ನಲ್ಲಿ ವೇಗ ಮತ್ತು ಬಹುಕಾರ್ಯಕಕ್ಕಾಗಿ ನೀಡಲಾಗಿದೆ. ಇದಲ್ಲದೇ Vivo Y21G ನಾಲ್ಕು ಘಟಕಗಳ ಕೂಲಿಂಗ್ ವ್ಯವಸ್ಥೆಯನ್ನು ಫೋನ್‌ನಲ್ಲಿ ನೀಡಲಾಗಿದ್ದು ಇದು ಸ್ಮಾರ್ಟ್‌ಫೋನ್ ಅನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.
Vivo Y21G ಫೋನ್‌ಗೆ ಪವರ್ ತುಂಬಲು 18W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ನೀಡಲಾಗಿದೆ. ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್, ಜೊತೆಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ. ಫೋನ್‌ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಈ ಇತ್ತೀಚಿನ Vivo ಮೊಬೈಲ್ ಫೋನ್ ಅನ್ನು ಡೈಮಂಡ್ ಗ್ಲೋ ಮತ್ತು ಮಿಡ್ನೈಟ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ನಿಮ್ಮ ಮಾಹಿತಿಗಾಗಿ ಈ ಹ್ಯಾಂಡ್‌ಸೆಟ್‌ನ ಬೆಲೆಯನ್ನು ರೂ 13,990 ಗೆ ನಿಗದಿಪಡಿಸಲಾಗಿದೆ.