ವಿವೋ ಭಾರತದಲ್ಲಿ ಅಧಿಕೃತವಾಗಿ ತನ್ನ ಇತ್ತೀಚಿನ Y-ಸರಣಿಯ ಕೊಡುಗೆಯಾಗಿ ಹೊಚ್ಚ ಹೊಸ Vivo Y200 5G ಫೋನ್ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 21,999 ರೂಗಳಾಗಿದೆ. ಇದರಲ್ಲಿ AMOLED ಡಿಸ್ಪ್ಲೇ ಮತ್ತು ಸ್ಮಾರ್ಟ್ ಔರಾ ಲೈಟ್‌ನೊಂದಿಗೆ ಸೆಕ್ಯುರಿಟಿಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಫೋನ್ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4800mAh ಬ್ಯಾಟರಿಯನ್ನು ಹೊಂದಿದೆ.
ವಿವೋ ಸ್ಮಾರ್ಟ್ಫೋನ್ 8GB RAM + 128GB ಸ್ಟೋರೇಜ್ ಮಾದರಿಗೆ 21,999 ರೂಗಳಾಗಿದ್ದು 8GB RAM + 256GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ರೂಪಾಂತರದ ಬೆಲೆ 24,999 ರೂಗಳಾಗಿವೆ. ಸ್ಮಾರ್ಟ್ಫೋನ್ ಜಂಗಲ್ ಗ್ರೀನ್ ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಇದು ಪ್ರಸ್ತುತ ವಿವೋ ಇ-ಸ್ಟೋರ್, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟಕ್ಕೆ ಸಿದ್ಧವಾಗಿದೆ. ಅಲ್ಲದೆ SBI, IndusInd, IDFC First ಮತ್ತು Yes ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದ ಖರೀದಿಗಳಿಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ.
ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ (ನ್ಯಾನೊ) ಆಂಡ್ರಾಯ್ಡ್ 13 ಆಧಾರಿತ Funtouch 13 ಅನ್ನು ರನ್ ಮಾಡುತ್ತದೆ. ಇದು 6.67 ಇಂಚಿನ FHD+ (1080×2400 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ, HDR10+ ppi ಬೆಂಬಲ 394 pixel ಸಾಂದ್ರತೆ ಮತ್ತು 900 ನಿಟ್‌ಗಳ ಗರಿಷ್ಠ ಪ್ರಕಾಶಮಾನ ಮಟ್ಟ. ಕರ್ವ್ ಡಿಸ್ಪ್ಲೇಯ ಸೆಲ್ಫಿ ಕ್ಯಾಮೆರಾಗಾಗಿ ಕೇಂದ್ರೀಯವಾಗಿ ಇರಿಸಲಾದ ನಾಚ್ ಅನ್ನು ಹೊಂದಿದೆ. ಹುಡ್ ಅಡಿಯಲ್ಲಿ ಹ್ಯಾಂಡ್‌ಸೆಟ್ 6nm ಸ್ನಾಪ್‌ಡ್ರಾಗನ್ 4 Gen ಪ್ರೊಸೆಸರ್ 8GB LPDDR4X ಮತ್ತು ಹೊಂದಿದೆ.
ಇದನ್ನೂ ಓದಿ: Amazon ಸೇಲ್‌ನಲ್ಲಿ ಈ ಲೇಟೆಸ್ಟ್ ವಾಷಿಂಗ್ ಮಷೀನ್‌ಗಳ ಮೇಲೆ ಭರ್ಜರಿ ಡೀಲ್ ಮತ್ತು ಆಫರ್‌ಗಳು!
ಫೋಟೋಗಳು ಮತ್ತು ವೀಡಿಯೊಗಳಿಗಾಗಿ Vivo Y200 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) f/1.79 ಲೆನ್ಸ್‌ಗೆ ಬೆಂಬಲದೊಂದಿಗೆ 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ f/2.4 ಲೆನ್ಸ್‌ನೊಂದಿಗೆ 2MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ ಮುಂಭಾಗದಲ್ಲಿ ಇದು f/2.0 ಅಪರ್ಚರ್‌ನೊಂದಿಗೆ 16MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಕ್ಯಾಮರಾ ಸೆಟಪ್ ನೈಟ್ ಮೋಡ್, ಪನೋರಮಾ, ಟೈಮ್ ಲ್ಯಾಪ್ಸ್ ವಿಡಿಯೋ, ಡ್ಯುಯಲ್ ವ್ಯೂ, ಪೋರ್ಟ್ರೇಟ್ ಮತ್ತು ಸ್ಲೋ ಮೋಷನ್ ಸೇರಿದಂತೆ ಇತರ ಫೋಟೋಗ್ರಾಫಿ ವಿಧಾನಗಳನ್ನು ಬೆಂಬಲಿಸುತ್ತದೆ.
Vivo Y200 5G ಸಂಪರ್ಕ ಆಯ್ಕೆಗಳು 5G, Wi-Fi, ಬ್ಲೂಟೂತ್ 5.2, GPS ಮತ್ತು USB 2.0 ಅನ್ನು ಒಳಗೊಂಡಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಮೋಟಾರ್, ಇ-ದಿಕ್ಸೂಚಿ ಮತ್ತು ಗೈರೊಸ್ಕೋಪ್ ಒಳಗೊಂಡಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದೆ. ಹ್ಯಾಂಡ್‌ಸೆಟ್ IP54 ದರವನ್ನು ಡಸ್ಟ್ ಮತ್ತು ವಾಟರ್ ಪ್ರೂಫ್ ಹೊಂದಿದೆ. Vivo Y200 ಸ್ಮಾರ್ಟ್ಫೋನ್ 4800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಅದು 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.