ಮುಂದಿನ ವಾರದಲ್ಲಿ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ಭಾರತದಲ್ಲಿ ತನ್ನ ಮುಂಬರಲಿರುವ ಹೊಸ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲಿದೆ. ವಿವೋ ಇದನ್ನು Vivo Y200 5G ಎಂದು ಕಂಪನಿ ಅದ್ದೂರಿಯ ಕಲರ್ ಮತ್ತು ಫೀಚರ್ಗಳೊಂದಿಗೆ ಫಸ್ಟ್ ಲುಕ್ ಅನ್ನು ಬಿಡುಗಡೆಗೂ ಮುಂಚೆ ಅನಾವರಣಗೊಳಿಸಿದೆ. ಫೋನ್‌ನ ಸೋರಿಕೆಯಾದ ವಿನ್ಯಾಸದ ರೆಂಡರ್‌ಗಳು ಹ್ಯಾಂಡ್‌ಸೆಟ್‌ನ ವಿನ್ಯಾಸವನ್ನು ಸೂಚಿಸುವ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಸದ್ಯಕ್ಕೆ ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಮತ್ತು LED ಫ್ಲಾಶ್ ಜೊತೆಗೆ AMOLED ಡಿಸ್ಪ್ಲೇಯೊಂದಿಗೆ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದನ್ನು ಕಂಫಾರ್ಮ್ ಮಾಡಿದೆ.
ವಿವೊ ಇದನ್ನು ಭಾರತದಲ್ಲಿ ಅಕ್ಟೋಬರ್ 23 ರಂದು ಬಿಡುಗಡೆಯಾಗಲಿದೆ ಎಂದು ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಘೋಷಿಸಿದ್ದಾರೆ. ಮುಂಬರುವ ಬಿಡುಗಡೆಯ ಪ್ರಚಾರದ ಇಮೇಜ್‌ನಲ್ಲಿ ಫೋನ್ ಸದ್ಯಕ್ಕೆ ಕೇವಲ 2 ಆಕರ್ಷಣೆಯ ಬಣ್ಣಗಳ ಆಯ್ಕೆಗಳಲ್ಲಿ ತೋರಿಸಲಾಗಿದೆ. ಇತ್ತೀಚಿನ ವರದಿಯ ಪ್ರಕಾರ ಫೋನ್ ಡೆಸರ್ಟ್ ಗೋಲ್ಡ್ ಮತ್ತು ಜಂಗಲ್ ಗ್ರೀನ್ ಎಂಬ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದರ ಪ್ರೋಮೋ ಇಮೇಜ್ Vivo Y200 5G ಸ್ಮಾರ್ಟ್ಫೋನ್ ಔರಾ ಲೈಟ್ ಎಂಬ ವೃತ್ತಾಕಾರದ ಫ್ಲಾಶ್ ಫೀಚರ್ ಅನ್ನು ಖಚಿತಪಡಿಸುತ್ತದೆ.
Vivo ನ ಹೊಸ ಫೋನ್ ಭಾರತದಲ್ಲಿ 8GB RAM ಮತ್ತು 128GB ಸಂಗ್ರಹದೊಂದಿಗೆ ರೂ. 24,000 ದೇಶದಲ್ಲಿ ಲಭ್ಯವಿರಬಹುದು. ಇದು 6.67 ಇಂಚಿನ ಪೂರ್ಣHD+ (2,400 x 1,080 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ ಮತ್ತು Qualcomm Snapdragon 4 Gen 1 ಪ್ರೊಸೆಸರ್‌ನೊಂದಿಗೆ ಚಾಲಿತವಾಗಲಿದ್ದು ಇದು ಬಹುಶಃ ಆಂಡ್ರಾಯ್ಡ್ 13 ಆಧಾರಿತ Funtouch OS ಹೊಂದುವ ನಿರೀಕ್ಷೆಗಳಿವೆ.
ಕ್ಯಾಮೆರಾ ವಿಭಾಗದಲ್ಲಿ ಮುಂಬರುವ Vivo Y200 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್‌ನೊಂದಿಗೆ 2MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದರ ಮುಂಭಾಗದ ಕ್ಯಾಮೆರಾವು 16MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಲು ನಿರೀಕ್ಷೆಗಳಿವೆ. ಕೊನೆಯದಾಗಿ ಈ ಫೋನ್ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4800mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು.