Vivo Y18t ಸ್ಮಾರ್ಟ್ ಫೋನ್ ಸದ್ದಿಲ್ಲದೇ 50MP ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
Vivo Y18T ಸ್ಮಾರ್ಟ್‌ಫೋನ್ ಸದ್ದಿಲ್ಲದೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ.
Vivo Y18t ಸ್ಮಾರ್ಟ್ ಫೋನ್ 15w ಫಾಸ್ಟ್ ಚಾರ್ಜ್ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆ.
Vivo Y18t ಸ್ಮಾರ್ಟ್ ಫೋನ್ ಕೇವಲ ₹9,499 ರೂಗಳಿಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಗೊಳಿಸಿದೆ.
Vivo Y18t launched in India: ಭಾರತದಲ್ಲಿ ತನ್ನ Y ಸರಣಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. Vivo Y18t ಕಂಪನಿಯ ಹೊಸ ಫೋನ್ ಆಗಿದ್ದು ಅದು IP-54 ರೇಟಿಂಗ್‌ನೊಂದಿಗೆ ಬರುತ್ತದೆ. Vivo Y8T ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. Vivo Y18T ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಬ್ಯಾಕ್ ಹಿಂಬದಿಯ ಕ್ಯಾಮೆರಾದೊಂದಿಗೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೊತೆಗೆ 15W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಸುಮಾರು 10,000 ರೂಗಳೊಳಗೆ ಬಿಡುಗಡೆಯಾಗಿದೆ.
ಭಾರತದಲ್ಲಿ Vivo Y18t ಬೆಲೆ ಮತ್ತು ಲಭ್ಯತೆ
Vivo Y18T ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಪರಿಚಯಿಸಲಾಗಿದ್ದು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ರೂಪಾಂತರವನ್ನು ಭಾರತದಲ್ಲಿ ಕೇವಲ 9,499 ರೂಗಳಿಗೆ ಕ್ಕೆ ಬಿಡುಗಡೆ ಮಾಡಲಾಗಿದೆ. ಈ Vivo Y18T ಸ್ಮಾರ್ಟ್‌ಫೋನ್ ಜೆಮ್ ಗ್ರೀನ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಅಲ್ಲದೆ ಬಿಡುಗಡೆಯಾದ ದಿನದಿಂದಲೇ ಈ ಸ್ಮಾರ್ಟ್ಫೋನ್ ವಿವೋ ಇಂಡಿಯಾದ ಇ-ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಅಲ್ಲದೆ ಇದರ ಬಿಡುಗಡೆಯ ಕೊಡುಗೆಯಾಗಿ ಕಂಪನಿ ಸುಮಾರು ₹8,950 ರೂಗಳವರೆಗಿನ ವಿನಿಮಯ ಆಫರ್ (Exchange Offer) ಸಹ ನೀಡುತ್ತಿದೆ.
Vivo Y18t ಫೀಚರ್ ಮತ್ತು ವಿಶೇಷಣಗಳೇನು?
Vivo Y18T ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸಪೋರ್ಟ್ ಮಾಡುವುದರೊಂದಿಗೆ ಆಂಡ್ರಾಯ್ಡ್ 14 ಆಧಾರಿತ Funtouch OS 14 ನೊಂದಿಗೆ ಬರುತ್ತದೆ. Vivo Y18T ಸ್ಮಾರ್ಟ್‌ಫೋನ್ 6.56 ಇಂಚಿನ FullHD + (720×1,612 ಪಿಕ್ಸೆಲ್‌ಗಳು) LCD ಡಿಸ್ಪ್ಲೇಯನ್ನು ಹೊಂದಿದ್ದು ಇದು 90 Hz ವರೆಗೆ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. Vivo Y18T ಸ್ಮಾರ್ಟ್‌ಫೋನ್ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ. ಫೋನ್ Unisoc T612 ಚಿಪ್‌ಸೆಟ್ ಅನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ವಿಸ್ತರಿಸಲು ಸಾಧ್ಯವಿದೆ.
Vivo Y18t ಕ್ಯಾಮೆರಾ ವಿವರಗಳು
ಈ Vivo Y78t ಫೋಟೋಗ್ರಾಫಿಯಲ್ಲಿ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಸ್ಮಾರ್ಟ್ಫೋನ್ನಲ್ಲಿ ಹಿಂಭಾಗ ಆದರೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದೆ. ಫೋನ್ 0.08 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಅನ್ನು ಹೊಂದಿದೆ. ಈ ಲೇಟೆಸ್ಟ್ Vivo Y18T ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Vivo Y18T ಸ್ಮಾರ್ಟ್‌ಫೋನ್ 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಒಮ್ಮೆ ಈ ಫೋನ್ ಚಾರ್ಜ್ ಮಾಡಿ ಸುಮಾರು 62.53 ಗಂಟೆಗಳವರೆಗೆ ಬ್ಯಾಟರಿ ಲೈಫ್ ನೀಡುವುದಾಗಿ ಕಂಪನಿ ಹೇಳಿದೆ.
Also Read: 399 ರೂಗಳಿಗಿಂತ ಕಡಿಮೆ ಬೆಲೆಗೆ 150 ದಿನಗಳ ವ್ಯಾಲಿಡಿಟಿ ನೀಡುತ್ತಿರುವ BSNL ಸೂಪರ್ ಯೋಜನೆ!
Vivo Y18T ಸ್ಮಾರ್ಟ್‌ಫೋನ್ Bluetooth 5.2, FM ರೇಡಿಯೋ, GPS, GLONASS, Wi-Fi ಮತ್ತು USB ಟೈಪ್-ಸಿ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಮೋಟಾರ್ ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಫೋನ್‌ನಲ್ಲಿವೆ. ಭದ್ರತೆಗಾಗಿ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒದಗಿಸಲಾಗಿದೆ. ಈ ಹ್ಯಾಂಡ್‌ಸೆಟ್ ಧೂಳು ಮತ್ತು ನೀರು ನಿರೋಧಕವಾಗಿದೆ ಮತ್ತು IP54 ರೇಟಿಂಗ್‌ನೊಂದಿಗೆ ಬರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile