ಭಾರತದಲ್ಲಿ ವಿವೋ ಕಂಪನಿ ತನ್ನ ಎಂಟ್ರಿ ಲೆವೆಲ್ ವಿಭಾಗದಲ್ಲಿ Vivo Y18i ಸ್ಮಾರ್ಟ್ಫೋನ್ ಅನ್ನು ಸದ್ದಿಲ್ಲದೆ 8000 ರೂಗಳೊಳಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಈ ಮೊದಲು ಕಂಪನಿ ಇದೆ ಮಾದರಿಯಲ್ಲಿ Vivo Y18 ಮತ್ತು Vivo Y18e ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳೊಂದಿಗೆ ಈಗ ಕಂಪನಿ ಮತ್ತೊಂದು Vivo Y18i ಸ್ಮಾರ್ಟ್ಫೋನ್ ಸೇರಿಸಿಕೊಂಡಿದ್ದು ಇವೆಲ್ಲ 4G ಸ್ಮಾರ್ಟ್ಫೋನ್ ಎನ್ನುವುದನ್ನು ನೀವು ಗಮನಿಸಬೇಕಿದೆ. Vivo Y18i ಸ್ಮಾರ್ಟ್ಫೋನ್ ಆಸಕ್ತರು ಅಮೆಜಾನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಕೇವಲ ₹7,999 ರೂಗಳಿಗೆ ಖರೀದಿಸಬಹುದು.
ವಿವೋ ಕಂಪನಿ ತನ್ನ ಎಂಟ್ರಿ ಲೆವೆಲ್ ವಿಭಾಗದಲ್ಲಿ Vivo Y18i ಸ್ಮಾರ್ಟ್ಫೋನ್ ಪ್ರಸ್ತುತ ವಿವೋ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಮಾರಾಟ ಮಾಡುತ್ತಿದೆ. ಪ್ರಸ್ತುತ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಮಾತ್ರ ಬಿಡುಗಡೆಯಾಗಿದ್ದು ಅದೆಂದರೆ 4GB RAM ಮತ್ತು 64GB ಸ್ಟೋರೇಜ್ ಮಾದರಿಯಲ್ಲಿ ಮಾತ್ರ ಲಭ್ಯವಿದ್ದು ಆಸಕ್ತರು ಈ Vivo Y18i ಸ್ಮಾರ್ಟ್ಫೋನ್ ಅನ್ನು ಕೇವಲ ₹7,999 ರೂಗಳಿಗೆ Gem Green ಮತ್ತು Space Black ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.
Vivo Y18i ಸ್ಮಾರ್ಟ್ಫೋನ್ 1612×720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.56 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು LCD ಪ್ಯಾನಲ್‌ನಲ್ಲಿ ತಯಾರಿಸಲಾಗಿದ್ದು ಇದರಲ್ಲಿ 90Hz ರಿಫ್ರೆಶ್ ರೇಟ್ ಮತ್ತು 528nits ಬ್ರೈಟ್‌ನೆಸ್ ಸಪೋರ್ಟ್ ನೀಡಲಾಗಿದೆ. ಅಂದ್ರೆ ನೀವು ವೀಕ್ಷಿಸುವ ಯಾವುದೇ ಕಂಟೆಂಟ್ ಉತ್ತಮವಾಗಿ ಕಾಣಲು ಸಹಕರಿಸುತ್ತದೆ. ಈ Vivo Y18i ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 13MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ f/2.2 ಅಪರ್ಚರ್ನೊಂದಿಗೆ ಬರುತ್ತದೆ. ಜೊತೆಗೆ 0.08MP ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ f/3.0 ಅಪರ್ಚರ್ನೊಂದಿಗೆ LED ಫ್ಲಾಶ್ ಹೊಂದಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ f/2.2 ಅಪರ್ಚರ್ನೊಂದಿಗೆ ಬರುತ್ತದೆ.
Vivo Y18i ಸ್ಮಾರ್ಟ್ಫೋನ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಸಪೋರ್ಟ್ ಮಾಡುವುದರೊಂದಿಗೆ ತಮ್ಮದೇಯಾದ Funtouch 14.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ Unisoc Tiger T612 ಚಿಪ್‌ಸೆಟ್ ಅನ್ನು ಈ ಫೋನ್‌ನಲ್ಲಿ ಒದಗಿಸಲಾಗಿದೆ. Vivo ಫೋನ್ 4GB RAM ಜೊತೆಗೆ ಹೆಚ್ಚುವರಿಯಾಗಿ 4GB ವರ್ಚುಯಲ್ RAM ವಿಸ್ತರಣೆಯನ್ನು ಸಹ ಹೊಂದಿದೆ. ಈ ಮೂಲಕ ನೀವು ಒಟ್ಟಾರೆಯಾಗಿ ಈ Vivo Y18i ಸ್ಮಾರ್ಟ್ಫೋನ್ ಒಳಗೆ ಬರೋಬ್ಬರಿ 8GB RAM ಪವರ್ ಅನ್ನು ಬಳಸಿಕೊಂಡು ಉತ್ತಮ ಅನುಭವನನ್ನು ಪಡೆಯಬಹುದು.
Also Read: ಇನ್ಮೇಲೆ FASTag ಬದಲಿಗೆ GNSS Toll ಕಲೆಕ್ಷನ್ ಮಾಡಲಿದೆ, ಏನಿದು GNSS? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಅಷ್ಟೇಯಲ್ಲ ಇದರ ಇಂಟರ್ನಲ್ ಸ್ಟೋರೇಜ್‌ಗಾಗಿ 64GB ಮೆಮೊರಿ ಸಹ ನೀಡಲಾಗಿದ್ದು ಹೆಚ್ಚುವರಿಯಾಗಿ ಮೈಕ್ರೋ SD ಕಾರ್ಡ್ ಬಳಸಿಕೊಂಡು ಸುಮಾರು 1024GB ವರೆಗಿನ ಸ್ಟೋರೇಜ್ ಸಹ ವಿಸ್ತರಿಸಬಹುದು. Vivo Y18i ಫೋನಿನ ಬ್ಯಾಟರಿ ಬ್ಯಾಕಪ್ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಡಿಸೆಂಟ್ ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜಿಂಗ್‌ಗಾಗಿ 15W ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ಒಳಗೊಂಡಿದೆ.