200MP ಕ್ಯಾಮೆರಾದೊಂದಿಗೆ Vivo X200 Series ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

200MP ಕ್ಯಾಮೆರಾದೊಂದಿಗೆ Vivo X200 Series ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
HIGHLIGHTS

ವಿವೋ (Vivo) ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ.

ಒಟ್ಟಾರೆಯಾಗಿ 3 ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ.

ಈ ಸ್ಮಾರ್ಟ್ಫೋನ್ಗಳಲ್ಲಿ ವಿವೋದ ಸ್ವಂತ ನಿರ್ಮಿತವಾಗಿರುವ ಸರ್ಕಲ್ ಟು ಸರ್ಚ್ ಫೀಚರ್ ಸೇರಿದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫೀಚರ್ಗಳನ್ನು ಹೊಂದಿದೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ (Vivo) ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 3 ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ. ಈ ಕೆಳಗೆ ಇವುಗಳ ಒಂದಿಷ್ಟು ಟಾಪ್ ಹೈಲೈಟ್ ಮಾಹಿತಿಯನ್ನು ವಿವರವಾಗಿ ತಿಳಿಯಬಹುದು. ಈ ಮೂರು ಸ್ಮಾರ್ಟ್ಫೋನ್ಗಳು ಒಂದೇ ರೀತಿಯ ಹಾರ್ಡ್‌ವೇರ್ ಮತ್ತು ಲುಕ್ ಅನ್ನು ಪ್ಯಾಕ್ ಮಾಡುತ್ತವೆ. ಮತ್ತೊಂದು ವಿಶೇಷ ಅಂದ್ರೆ ಈ ಮೂರೂ ಸ್ಮಾರ್ಟ್ಫೋನ್ಗಳಲ್ಲಿ ವಿವೋದ ಸ್ವಂತ ನಿರ್ಮಿತವಾಗಿರುವ ಸರ್ಕಲ್ ಟು ಸರ್ಚ್ ಫೀಚರ್ ಸೇರಿದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫೀಚರ್ಗಳನ್ನು ಹೊಂದಿದೆ.

Vivo X200, Vivo X200 Pro ಮತ್ತು Vivo X200 Pro Mini ಬೆಲೆ ಮತ್ತು ಲಭ್ಯತೆ

Vivo X200 Price in China:

12GB RAM – 256GB ಸ್ಟೋರೇಜ್ – ¥4299 (ಭಾರತದ ₹50,769 ರೂಗಳು)
12GB RAM – 512GB ಸ್ಟೋರೇಜ್ – ¥4699 (ಭಾರತದ ₹55,493 ರೂಗಳು)
16GB RAM – 512GB ಸ್ಟೋರೇಜ್ – ¥4999 (ಭಾರತದ ₹59,035 ರೂಗಳು)
16GB RAM – 1024GB ಸ್ಟೋರೇಜ್ – ¥5499 (ಭಾರತದ ₹64,940 ರೂಗಳು)

Vivo X200 Pro Price in China:

12GB RAM – 256GB ಸ್ಟೋರೇಜ್ – ¥5299 (ಭಾರತದ ₹62,578 ರೂಗಳು)
16GB RAM – 512GB ಸ್ಟೋರೇಜ್ – ¥5999 (ಭಾರತದ ₹70,845 ರೂಗಳು)
16GB RAM – 1024GB ಸ್ಟೋರೇಜ್ – ¥6499 (ಭಾರತದ ₹76,750 ರೂಗಳು)
16GB RAM – 1024GB (Satellite Edition) ಸ್ಟೋರೇಜ್ – ¥6799 (ಭಾರತದ ₹80,293 ರೂಗಳು)

Vivo X200 Pro Mini Price in China:

12GB RAM – 256GB ಸ್ಟೋರೇಜ್ – ¥4699 (ಭಾರತದ ₹55,493 ರೂಗಳು)
16GB RAM – 512GB ಸ್ಟೋರೇಜ್ – ¥5299 (ಭಾರತದ ₹62,578 ರೂಗಳು)
16GB RAM – 1024GB ಸ್ಟೋರೇಜ್ – ¥5799 (ಭಾರತದ ₹68,483 ರೂಗಳು)

Also Read: 32MP ಸೆಲ್ಫಿ ಕ್ಯಾಮೆರಾದ ಜೊತೆ Vivo Y300 Plus 5G ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Vivo X200, Vivo X200 Pro ಮತ್ತು Vivo X200 Pro Mini ಫೀಚರ್ಗಳೇನು?

Vivo X200 Series

ಚೀನಾದಲ್ಲಿ ಬಿಡುಗಡೆಯಾಗಿರುವ ಈ ಮೂರು ಸ್ಮಾರ್ಟ್ಫೋನ್ಗಳ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಇವುಗಳ ಪ್ರತಿಯೊಂದು ಭಾಗದಲ್ಲಿ ಒಂದಕ್ಕಿಂತ ಒಂದು ಬದಲಾಗಿವೆ. ಇವ್ಗುಗಳ ಸಂಕ್ಷಪ್ತವಾದ ಮಾಹಿತಿಯನ್ನು ಹೇಳುವುದಕ್ಕಿಂತ ಇವುಗಳ ಬಗ್ಗೆ ಸಂಪೂರ್ಣವಾಗಿ ಲಭ್ಯವಿರುವ ವಿಶೇಷಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಈ ಮೂಲಕ ವಿವೋ ಕಂಪನಿಯ ಈ ಲೇಟೆಸ್ಟ್ ಫೋನ್ಗಳ ಮಾಹಿತಿಯನ್ನು ಪಡೆಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo