200MP ಕ್ಯಾಮೆರಾವುಳ್ಳ Vivo X200 Series ಭಾರತದಲ್ಲಿ ಬಿಡುಗಡೆ! ಬೆಲೆ ಮತ್ತು ಟಾಪ್ ಹೈಲೈಟ್‌ಗಳೇನು?

Updated on 12-Dec-2024
HIGHLIGHTS

Vivo X200 Series ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ.

Vivo X200 ಮತ್ತು Vivo X200 Pro ಈ ಎರಡು ಸ್ಮಾರ್ಟ್‌ಗಳು Amazon ಮೂಲಕ ಮಾರಾಟವಾಗಲಿದೆ.

Vivo X200 Series ಸ್ಮಾರ್ಟ್‌ಫೋನ್‌ MediaTek Dimensity 9400 ಪ್ರೊಸೆಸರ್ ಜೊತೆಗೆ ಬರುತ್ತವೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಈ Vivo X200 Series ಸ್ಮಾರ್ಟ್ಫೋನ್ ಸರಣಿಯನ್ನು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕಂಪನಿ ಈ ಸರಣಿಯಲ್ಲಿ ಹೊಸ Vivo X200 ಮತ್ತು Vivo X200 Pro ಎಂಬ ಎರಡು ಸ್ಮಾರ್ಟ್‌ಗಳನ್ನು MediaTek Dimensity 9400 ಪ್ರೊಸೆಸರ್, 200MP ಕ್ಯಾಮೆರಾ, 16GB RAM ಜೊತೆಗೆ ಮತ್ತು ಅನೇಕ ಲೇಟೆಸ್ಟ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪರಿಚಯಿಸಿದೆ. ಈ ಲೇಟೆಸ್ಟ್ Vivo X200 Series ಸ್ಮಾರ್ಟ್‌ಫೋನ್‌ಗಳನ್ನು ನೀವು Amazon ಮೂಲಕ ಮಾರಾಟವಾಗಲಿವೆ. ಇದನ್ನು ಇಂದಿನಿಂದಲೇ ಪ್ರೀ-ಬುಕಿಂಗ್ 12ನೇ ಡಿಸೆಂಬರ್ನಿಂದ 18ನೇ ಡಿಸೆಂಬರ್ವರೆಗೆ ಪಡೆಯಬಹುದು.

Vivo X200 Series ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ

ಈ ಲೇಟೆಸ್ಟ್ Vivo X200 ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತಾನಾಡುವುದಾದರೆ 12GB RAM ಮತ್ತು 256GB ಸ್ಟೋರೇಜ್ ಮಾದರಿಗೆ 65,999 ರೂಗಳಾಗಿವೆ. ಇದರ ಕ್ರಮವಾಗಿ ಇದರ 16GB RAM ಮತ್ತು 512GB ಸ್ಟೋರೇಜ್ ಮಾದರಿಗೆ 71,999 ರೂಗಳಾಗಿವೆ. ಇದನ್ನು ಅನುಸರಿಸಿ Vivo X200 Pro ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರವನ್ನು ಬರೋಬ್ಬರಿ 94,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಈ ಫೋನ್ಗಳನ್ನು ಅಮೆಜಾನ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟವಾಗುತ್ತವೆ. ಹೆಚ್ಚುವರಿಯಾಗಿ HDFC ಬ್ಯಾಂಕ್ ಮತ್ತು ಆಯ್ದ ಕಾರ್ಡ್ ಬಳಕೆದಾರರು ತಮ್ಮ ಖರೀದಿಗಳ ಮೇಲೆ 10% ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಎರಡೂ ಫೋನ್‌ಗಳು 19ನೇ ಡಿಸೆಂಬರ್ 2024 ರಿಂದ ಮಾರಾಟವಾಗುತ್ತವೆ.

Also Read: ಕೇವಲ 50 ರೂಗಳಿಗೆ ಒದ್ದೆಯಾಗದ ಅರಿಯದ ಹೊಸ ಮಾದರಿಯ QR PAN Card ಪಡೆಯಿರಿ!

Vivo X200 ಫೀಚರ್ ಮತ್ತು ವಿಶೇಷತೆಗಳೇನು?

ಈ Vivo X200 ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಟ್ರೇಯನ್ನು 2800 x 1260 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. Vivo X200 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 50MP ಪ್ರೈಮರಿ ಕ್ಯಾಮೆರಾ, 50MP ವೈಡ್ ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಲೆನ್ಸ್ ಹೊಂದಿದೆ. ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ ನ್ಯಾಚುರಲ್ ಗ್ರೀನ್ ಮತ್ತು ಕೊಸ್ಮೊಸ್ ಬ್ಲಾಕ್ ಎಂಬ ಫೋನ್ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಸ್ಮಾರ್ಟ್ರೋನ್ MediaTek Dimensity 9400 ಪ್ರೊಸೆಸರ್ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್‌ನ ಸುರಕ್ಷತೆಗಾಗಿ Vivo X200 ಇನ್-ಡಿಸ್ಸೇ ಫಿಂಗರ್‌ಪ್ರಿಂಟ್‌ ಸಂವೇದಕವನ್ನು ಒದಗಿಸಲಾಗಿದೆ. ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಫೋನ್ ಬರುತ್ತದೆ. ಇದು 5 ವರ್ಷಗಳವರೆಗೆ ನಾಲ್ಕು ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. Vivo X200 ಸ್ಮಾರ್ಟ್ಫೋನ್ ಪವರ್ ಮಾಡಲು 5800mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 90W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. Vivo X200 ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್, ವೈ-ಫೈ 7 ಮತ್ತು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ.

Vivo X200 Pro ಫೀಚರ್ ಮತ್ತು ವಿಶೇಷತೆಗಳೇನು?

ಈ Vivo X200 Pro ಸ್ಮಾರ್ಟ್ಫೋನ್ 6.78 ಇಂಚಿನ AMOLED ಡಿಸ್ಟ್ರೇಯನ್ನು 2800 x 1260 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. Vivo X200 Pro ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 50MP ಪ್ರೈಮರಿ ಕ್ಯಾಮೆರಾ, 50MP ವೈಡ್ ಆಂಗಲ್ ಲೆನ್ಸ್ ಮತ್ತು 200MP ಟೆಲಿಫೋಟೋ ಲೆನ್ಸ್ ಹೊಂದಿದೆ. ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಟೈಟಾನಿಯಂ ಗ್ರೇ ಮತ್ತು ಕೊಸ್ಮೊಸ್ ಬ್ಲಾಕ್ ಎಂಬ ಫೋನ್ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಸ್ಮಾರ್ಟ್ರೋನ್ MediaTek Dimensity 9400 ಪ್ರೊಸೆಸರ್ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್‌ನ ಸುರಕ್ಷತೆಗಾಗಿ Vivo X200 Pro ಇನ್-ಡಿಸ್ಸೇ ಫಿಂಗರ್‌ಪ್ರಿಂಟ್‌ ಸಂವೇದಕವನ್ನು ಒದಗಿಸಲಾಗಿದೆ. ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಸ್ಮಾರ್ಟ್ಸನ್ ಬರುತ್ತದೆ. ಇದು 5 ವರ್ಷಗಳವರೆಗೆ ನಾಲ್ಕು ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. Vivo X200 Pro ಸ್ಮಾರ್ಟ್ಫೋನ್ ಪವರ್ ಮಾಡಲು 6000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 90W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. Vivo X200 Pro ಸ್ಮಾರ್ಟ್ಫೋನ್ ಟೈಪ್-ಸಿ ಪೋರ್ಟ್, ವೈ-ಫೈ 7 ಮತ್ತು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :