Blueimage Imaging ಟೆಕ್ನಾಲಜಿಯೊಂದಿಗೆ Vivo X100 Ultra ಬಿಡುಗಡೆಯಾಗುವ ನಿರೀಕ್ಷೆ!
ವಿವೋ ಮುಂಬರುವ ತಿಂಗಳಲ್ಲಿ ಚೀನಾದಲ್ಲಿ ತನ್ನ ಲೇಟೆಸ್ಟ್ Vivo X100 Ultra ಸ್ಮಾರ್ಟ್‌ಫೋನ್ ಅನ್ನು ಪ್ರಕಟಿಸುವ ನಿರೀಕ್ಷೆಗಳಿವೆ.
Vivo X100 Ultra ತನ್ನ ಮೊಟ್ಟ ಮೊದಲ ಬಾರಿಗೆ ತಮ್ಮದೇಯಾದ ಕ್ಯಾಮೆರಾ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಲು ಸಜ್ಜಾಗಿದೆ.
ಈ ಮುಂಬರಲಿರುವ Vivo X100 Ultra ಸ್ಮಾರ್ಟ್ಫೋನ್ ಬಗ್ಗೆ ಈವರೆಗಿನ ಸೋರಿಕೆಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ವಿವೋ ಮುಂಬರುವ ತಿಂಗಳಲ್ಲಿ ಚೀನಾದಲ್ಲಿ ತನ್ನ ಲೇಟೆಸ್ಟ್ Vivo X100 Ultra ಸ್ಮಾರ್ಟ್‌ಫೋನ್ ಅನ್ನು ಪ್ರಕಟಿಸುವ ನಿರೀಕ್ಷೆಗಳಿವೆ. ಇದರ ಬಗ್ಗೆ ಡಿಜಿಟಲ್ ಚಾಟ್ ಸ್ಟೇಷನ್ Weibo ಅಲ್ಲಿ ಪ್ರಸಿದ್ಧ ಟಿಪ್‌ಸ್ಟರ್ ಈ ಮುಂಬರುವ ಸ್ಮಾರ್ಟ್ಫೋನ್ ಕ್ಯಾಮೆರಾ ವಿಶೇಷಣಗಳು ಮತ್ತು ತಂತ್ರಜ್ಞಾನವನ್ನು ಬಹಿರಂಗಪಡಿಸಿದೆ. ಆದರೆ Vivo X100 Ultra ಆಸಕ್ತಿದಾಯಕ ಸಂಗತಿಯೆಂದರೆ ಈ ಫ್ಲ್ಯಾಗ್‌ಶಿಪ್ ವಿವೋದಿಂದ ಹೊಸ ಇನ್-ಹೌಸ್ ಇಮೇಜಿಂಗ್ ತಂತ್ರಜ್ಞಾನವನ್ನು ಅಂದ್ರೆ ಮೊಟ್ಟ ಮೊದಲ ಬಾರಿಗೆ ತಮ್ಮದೇಯಾದ ಕ್ಯಾಮೆರಾ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಲು ಸಜ್ಜಾಗಿದೆ. ಈ ಮುಂಬರಲಿರುವ Vivo X100 Ultra ಸ್ಮಾರ್ಟ್ಫೋನ್ ಬಗ್ಗೆ ಈವರೆಗೆ ಬಂದಿರುವ ಸೋರಿಕೆಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
Vivo X100 Ultra ನಿರೀಕ್ಷಿತ ವಿಶೇಷಣಗಳು!
ಈ ವಿವೋದ ಸ್ಮಾರ್ಟ್ಫೋನ್ ಇಂಟರ್ನಲ್ ಬ್ಲೂಇಮೇಜ್ ಸ್ವಯಂ-ಅಭಿವೃದ್ಧಿಪಡಿಸಿದ ತಂತ್ರಜ್ಞಾನದೊಂದಿಗೆ Vivo X100 Ultra ಮೊದಲ ಬಾರಿಗೆ ಪಾದಾರ್ಪಣೆ ಮಾಡಲಿದೆ ಎಂದು ಟಿಪ್‌ಸ್ಟರ್ ಬಹಿರಂಗಪಡಿಸಿದ್ದಾರೆ. ತಮ್ಮದೇಯಾದ ಸ್ವಯಂ ಅಭಿವೃದ್ಧಿಪಡಿಸಿದ ತಂತ್ರಜ್ಞಾನದೊಂದಿಗೆ ಅಲ್ಗಾರಿದಮ್‌ಗಳನ್ನು ಸಂಯೋಜಿಸಲಾಗುತ್ತದೆ. ಅಲ್ಲದೆ ಈ Vivo X100 Ultra ಸ್ಮಾರ್ಟ್ಫೋನ್ ಮುಂದಿನ ತಿಂಗಳು ಅಂದ್ರೆ ಮೇ 2024 ರಂದು ಚೀನಾದಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್ಫೋನ್ ಮೊದಲ ಹಂತದಲ್ಲಿ ಬ್ಲೂಇಮೇಜ್ ಇಮೇಜಿಂಗ್ ಟೆಕ್ನಾಲಜಿ (Blueimage Imaging technology) ಕುರಿತು ಇತರ ವಿವರಗಳು ಪ್ರಸ್ತುತ ತಿಳಿದಿಲ್ಲ.
ಟ್ವಿಟ್ಟರ್ ಮೂಲಕ ಈ ಸರಣಿ ಫೋನ್‌ಗಳಲ್ಲಿ ಕಂಡುಬರುವ ಮತ್ತು ಈ ವರ್ಷ ಬಿಡುಗಡೆಯಾದ Vivo V30 Pro ಸ್ಮಾರ್ಟ್ಫೋನ್ ಜೊತೆಗೆ ವಿಸ್ತರಿಸಲಾಗಿರುವ Zeiss ಆಪ್ಟಿಕಲ್ ಲೆನ್ಸ್ ಕಂಪನಿಯ ಪಾಲುದಾರಿಕೆಯೊಂದಿಗೆ ಈಗ ವಿವೋ ಮತ್ತೆ ಕೈ ಜೋಡಿಸಿ ಮುಂದುವರಿಯುವ ಅವಕಾಶವಿದೆ ಎಂದು ತೋರುತ್ತಿದೆ. ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ವಿವೋ ತನ್ನ ಒಪ್ಪಂದವನ್ನು ಝೈಸ್‌ನೊಂದಿಗೆ (Zeiss) ಅಪ್ಡೇಟ್ ಮಾಡಿದೆ. ವಿವೋ ಈ ಝೈಸ್ ಆಪ್ಟಿಕ್ಸ್‌ನೊಂದಿಗೆ (Zeiss Optics) ಮತ್ತೆ ಹಲವಾರು 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ನಿರೀಕ್ಷಿಸಬಹುದು.
Also Read: WhatsApp Chat Lock: ನಿಮ್ಮ ಪರ್ಸನಲ್ ವಾಟ್ಸ್ಆಪ್ ಚಾಟ್‌ಗಳನ್ನು ಯಾರು ನೋಡದಂತೆ ಲಾಕ್ ಮಾಡೋದು ಹೇಗೆ?
ವಿವೋ X100 Ultra ನಿರೀಕ್ಷಿತ ಕ್ಯಾಮೆರಾ ವಿಶೇಷಣಗಳು!
ಟಿಪ್‌ಸ್ಟರ್ ಹಂಚಿಕೊಂಡ ಮತ್ತೊಂದು ಪೋಸ್ಟ್ ವಿವೋ ಸ್ಮಾರ್ಟ್‌ಫೋನ್ ಅನ್ನು 1-ಇಂಚಿನ ಸೆನ್ಸರ್ ಗಾತ್ರದೊಂದಿಗೆ 50MP ಸೋನಿ LYT 900 ಪ್ರೈಮರಿ ಕ್ಯಾಮೆರಾದೊಂದಿಗೆ ಸಜ್ಜುಗೊಳಿಸುತ್ತದೆ ಎಂದು ತಿಳಿಸುತ್ತದೆ. ಸೆಟಪ್‌ನಲ್ಲಿರುವ ಇತರ ಕ್ಯಾಮೆರಾಗಳು 50MP ಅಲ್ಟ್ರಾವೈಡ್ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ 1/1.4 ಇಂಚಿನ ಸೆನ್ಸೋರ್ ಸೈಜ್ ಮತ್ತು f/2.59 ಅಪರ್ಚರ್‌ನೊಂದಿಗೆ Samsung S5KHP9 ಸೆನ್ಸರ್ ಅನ್ನು ಬಳಸುತ್ತದೆ. ಈ ಸೆನ್ಸರ್ ಉತ್ತಮ ಗುಣಮಟ್ಟದ ಟೆಲಿಫೋಟೋ ಮ್ಯಾಕ್ರೋ ಶಾಟ್‌ಗಳನ್ನು ಸೆರೆಹಿಡಿಯಲು ಸಹಾಯ ಮಾಡಲು 85mm ಆಪ್ಟಿಕಲ್ ಫೋಕಲ್ ಲೆಂಥ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ.
Vivo X100 Ultra ನಿರೀಕ್ಷಿತ ಕ್ಯಾಮೆರಾ ವಿಶೇಷಣಗಳು!
ಇದರ ಇತರ ನಿರೀಕ್ಷಿತ ಸ್ಮಾರ್ಟ್‌ಫೋನ್ ವಿಶೇಷಣಗಳನ್ನು ನಿರೀಕ್ಷಿಸುವುದಾದರೆ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ 6.78 ಇಂಚಿನ Samsung E7 AMOLED ಪ್ಯಾನೆಲ್ ಅನ್ನು ಒಳಗೊಂಡಿವೆ. Vivo X100 Ultra ಸ್ಮಾರ್ಟ್ಫೋನ್ ನಿಮಗೆ Qualcomm Snapdragon 8 Gen 3 ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ 14 ಆಧಾರಿತ ಚಾಲಿತವಾಗುವ ನಿರೀಕ್ಷೆಗಳಿವೆ. ಇದರಲ್ಲಿ ಸುಮಾರು 24GB RAM ಮತ್ತು 1TB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಡುವ ನಿರೀಕ್ಷೆಗಳಿವೆ. ಕೊನೆಯದಾಗಿ ಈ Vivo X100 Ultra ಸ್ಮಾರ್ಟ್ಫೋನ್ 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5400mAh ಬ್ಯಾಟರಿಯಿಂದ ಬೆಂಬಲಿತವನ್ನು ನಿರೀಕ್ಷಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile