Vivo X100 Series: ವಿವೋ ತನ್ನ ಮುಂಬರಲಿರುವ ಹೊಸ ಸ್ಮಾರ್ಟ್‌ಫೋನ್ Vivo X100 ಮತ್ತು Vivo X100 Pro ಅನ್ನು ಈಗಾಗಲೇ ಕಳೆದ ತಿಂಗಳು 14ನೇ ನವೆಂಬರ್ 2023 ರಂದು ಚೀನಾದಲ್ಲಿ ಬಿಡುಗಡೆಯಾಗಿದೆ. ಈಗ ಒಂದು ತಿಂಗಳ ನಂತರ 14ನೇ ಡಿಸೆಂಬರ್ 2023 ರಂದು ಈ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ವಿವೋ ಇವನ್ನು ಅಧಿಕೃತ ವೆಬ್‌ಸೈಟ್ ಈ ಪ್ರಕಟಣೆಯನ್ನು ಒಳಗೊಂಡಿದೆ. ಹೊಸದಾಗಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ ಸೇರಿದಂತೆ ಹಲವಾರು ಫೀಚರ್ಗಳನ್ನು ಹೊಂದಿದ್ದು ಬಳಕೆದಾರರಿಗೆ ಅದ್ದೂರಿಯ ಅನುಭವವನ್ನು ನೀಡಲು ಸಿದ್ಧವಾಗಿದೆ.
Also Read: BSNL ಬಳಕೆದಾರರಿಗೆ ಈ ಆಯ್ದ ರೀಚಾರ್ಜ್‌ನಲ್ಲಿ3GB ಬೋನಸ್ ಡೇಟಾ ಲಭ್ಯ
ಈ ಲೇಟೆಸ್ಟ್ Vivo X100 ಮತ್ತು X100 Pro ಸ್ಮಾರ್ಟ್‌ಫೋನ್‌ಗಳು 6.78 ಇಂಚಿನ ಕರ್ವ್ AMOLED ಡಿಸ್ಪ್ಲೇಯೊಂದಿಗೆ 120Hz ಅಡಾಪ್ಟಿವ್ ರಿಫ್ರೆಶ್ ದರದೊಂದಿಗೆ ಜೋಡಿಯಾಗಿ ಬರುತ್ತವೆ. ಡಿಸ್ಪ್ಲೇ 1260×2800 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 20:9 ಅಸ್ಪೆಟ್ ರೇಷುವಿನೊಂದಿಗೆ ಸ್ಮಾರ್ಟ್ಫೋನ್ ಹೆಚ್ಚಿನ ಬ್ರೈಟ್ ಆಗಿದ್ದು ನಿಮಗೆ ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡುತ್ತದೆ. ಆದರೆ ಭಾರತದಲ್ಲಿ ಈ Vivo X100 ಸರಣಿಯ ಸ್ಮಾರ್ಟ್ಫೋನ್ಗಳ ಅಧಿಕೃತ ಬಿಡುಗಡೆಯ ಕುರಿತು ಪ್ರಸ್ತುತ ಇನ್ನೂ ದಿನಾಂಕವನ್ನು ಅನಾವರಣಗೊಳಿಸಿಲ್ಲ.
ಈ ವಿವೋ ಸ್ಮಾರ್ಟ್‌ಫೋನ್‌ಗಳು ಸೋನಿ IMX VCS ಸೆನ್ಸರ್‌ನೊಂದಿಗೆ 50MP ಮುಖ್ಯ ಸೆನ್ಸರ್ ಹೊಂದಿದೆ. ಈ ಫೋನ್ಗಳು Zeiss ಲೆನ್ಸ್‌ನೊಂದಿಗೆ 64MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದು 3x ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಮತ್ತೊಂದೆಡೆ X100 Pro 50MP ಪ್ರೈಮರಿ ಸೆನ್ಸರ್‌ನೊಂದಿಗೆ Sony IMX989 ಲೆನ್ಸ್ ಮತ್ತು 50MP ಝೈಸ್ ಲೆನ್ಸ್ ಅನ್ನು ಹೊಂದಿದೆ. ಇದು ಪ್ರಭಾವಶಾಲಿ 4.3x ಆಪ್ಟಿಕಲ್ ಜೂಮ್ ಅನ್ನು ಒದಗಿಸುತ್ತದೆ. ಎರಡೂ ಸ್ಮಾರ್ಟ್ಫೋನ್ಗಳು 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ.
ಈ ಫೋನ್‌ಗಳ ಬ್ಯಾಟರಿಯ ಬಗ್ಗೆ ಹೇಳುವುದಾದರೆ 5000mAh ಬ್ಯಾಟರಿಯನ್ನು ಹೊಂದಿದೆ. ಇದು 100W ಚಾರ್ಜರ್‌ನಿಂದ ಪೂರಕವಾಗಿದೆ. ಈ Vivo X100 Pro ಸ್ಮಾರ್ಟ್ಫೋನ್ ಕೊಂಚ ಹೆಚ್ಚಾಗಿ 5400mAh ಬ್ಯಾಟರಿಯೊಂದಿಗೆ 120W ವೈರ್ಡ್ ಚಾರ್ಜರ್‌ನೊಂದಿಗೆ ಒಂದು ಹೆಜ್ಜೆ ಮುಂದೆ ಸಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ಮಾತ್ರವಲ್ಲದೆ 16GB ವರೆಗಿನ LPDDR5T RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ನೊಂದಿಗೆ ಉತ್ತಮ ಬಳಕೆದಾರ ಅನುಭವವನ್ನು ನೀಡಲಿದೆ. Vivo X100 ಸರಣಿಯು USB-C 3.2, WiFi-7, 5G, NFC ಮತ್ತು ಬ್ಲೂಟೂತ್ 5.3 ನೊಂದಿಗೆ ಎಲ್ಲಾ ಬೇಸ್‌ಗಳನ್ನು ಒಳಗೊಂಡಿದೆ.
ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದಾಗ Vivo X100 ಬೆಲೆ 3,999 ಯುವಾನ್ (ಅಂದಾಜು ರೂ. 45,600) ಆದರೆ Vivo X100 Pro ಸರಣಿಯ ಬೆಲೆ 4,999 ಯುವಾನ್ (ಸುಮಾರು ರೂ. 57,000). ಜಾಗತಿಕವಾಗಿ ಫೋನ್‌ನ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಫೋನ್‌ಗಳನ್ನು ಚೆನ್ ಯೆ ಬ್ಲಾಕ್, ಸ್ಟಾರ್ ಟ್ರಯಲ್ ಬ್ಲೂ, ಸನ್‌ಸೆಟ್ ಆರೆಂಜ್ ಮತ್ತು ವೈಟ್ ಮೂನ್‌ಲೈಟ್ ಚೀನಾದಲ್ಲಿ ನಾಲ್ಕು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ